ಬಾಲಿವುಡ್

ಪೂನಂ ನಶಾ!

ಪೂನಂ ನಶಾ!
Published On :

ತನ್ನ ಚೊಚ್ಚಲ ಹಿಂದಿ ಸಿನಿಮಾ 'ನಶಾ' ಬಗ್ಗೆ ಪೂನಂ ಪಾಂಡೆ ಶುರುವಿನಿಂದಲೂ ನಶೆ ಏರಿಸುವ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಳು. ಆಕೆ ನಾಯಕನೊಂದಿಗೆ ಕಾಣಿಸಿಕೊಂಡ ಹಸಿಬಿಸಿ ದೃಶ್ಯಗಳ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗಗೊಂಡು ಒಂದಷ್ಟು ಚರ್ಚೆಗಳೂ ಆದವೆನ್ನಿ. ಮಾದಕ ಸನ್ನಿವೇಶಗಳಿವೆ ಎಂಬುದನ್ನು ಖುದ್ದು ಪೂನಂ ಒಪ್ಪಿಕೊಂಡಿದ್ದಳು. ಆದರೆ ಅವೆಲ್ಲವನ್ನೂ ಮೀರಿಸುವ 'ನಶೆ' ಚಿತ್ರದಲ್ಲಿದೆ ಎನ್ನುವುದು ಮೊದಲ ಪೋಸ್ಟರ್‌ನಿಂದಲೇ ಗೊತ್ತಾಗಿದೆ. ಇದರಲ್ಲಿ ನೂಲೆಳೆಯನ್ನೂ ಇಟ್ಟುಕೊಳ್ಳದೆ ತನ್ನ ಮೈಮಾಟವನ್ನು ಪ್ರದರ್ಶಿಸಿರುವ ಪೂನಂ, ತನ್ನ ಖಾಸಗಿ ಭಾಗಗಳನ್ನು ಮಾತ್ರ ಪ್ಲೆಕಾರ್ಡ್‌ಗಳಿಂದ ಮುಚ್ಚಿಕೊಂಡಿದ್ದಾಳೆ. ಟ್ರೇಲರ್‌ನಲ್ಲೇ ಹೀಗೆ, ಇನ್ನು ಸಿನಿಮಾದಲ್ಲಿ ಏನೇನಿದೆಯೊ? ಹೇಳಿಕೇಳಿ 18ರ ತರುಣ, 25ರ ಯುವತಿಯ ನಡುವಿನ ಪ್ರೇಮದ ಕಥೆಯಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.