ಬಾಲಿವುಡ್

ಥಿಯೇಟರ್ ಚಲೋ

ಥಿಯೇಟರ್ ಚಲೋ
Published On :

ಭ್ರಷ್ಟಾಚಾರದ ವಿರುದ್ಧ ಹೋರಾಡುವ ವಸ್ತು ಭಾರತೀಯ ಚಿತ್ರರಂಗಕ್ಕೆ ಅತಿ ಪ್ರಿಯವಾದದ್ದು. ಬಾಲಿವುಡ್‌ನ ಅಮಿತಾಭ್ ಬಚ್ಚನ್‌ಗೆ ಆ್ಯಂಗ್ರಿ ಯಂಗ್ ಮ್ಯಾನ್ ಇಮೇಜ್ ತಂದು ಕೊಟ್ಟಿದ್ದು, ಕನ್ನಡದ ಅಂಬರೀಶ್‌ಗೆ ರೆಬೆಲ್‌ಸ್ಟಾರ್ ಇಮೇಜ್ ತಂದುಕೊಟ್ಟಿದ್ದು ಇಂಥ ಚಿತ್ರಗಳೇ. ಈಗ ಹೊಸ ಹೀರೋಗಳು ಲವ್‌ಸ್ಟೋರಿ, ಕಾಮಿಡಿ ಚಿತ್ರಗಳಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಂತ ಕಾಲ ಬದಲಾಗಿದೆ ಎನ್ನಲಾಗುವುದಿಲ್ಲ. ಏಕೆಂದರೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಎಷ್ಟೇ ಸಿನಿಮಾಗಳು ಬಂದಿದ್ದರೂ ಭ್ರಷ್ಟಾಚಾರದ ಸಂಸ್ಕೃತಿ ಮಾತ್ರ  
ಬದಲಾಗಿಲ್ಲ. ಹಾಗಾಗಿ ಚಿತ್ರರಂಗಕ್ಕೂ ಮರಳಿ ಯತ್ನವ ಮಾಡು, ಮರಳಿ ಯತ್ನವಮಾಡು ಎಂಬಂತೆ ಮತ್ತೆ ಮತ್ತೆ ಅಂಥ ಚಿತ್ರಗಳ ಮೊರೆಹೋಗುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಈ ಭ್ರಷ್ಟಾಚಾರದ ವಿರುದ್ಧ ಹೋರಾಡುವ ವಸ್ತು ಹೊಂದಿದ ಲೇಟೆಸ್ಟ್ ಚಿತ್ರ 'ಸತ್ಯಾಗ್ರಹ'.
ಮೊನ್ನೆ ಶುಕ್ರವಾರದಂದು ಬಿಡುಗಡೆಯಾಗಿರುವ ಸತ್ಯಾಗ್ರಹ ಚಿತ್ರದ ಪ್ರಮುಖ ಪಾತ್ರದಲ್ಲಿ ಆ್ಯಂಗ್ರಿ ಓಲ್ಡ್ ಮ್ಯಾನ್ ಆಗಿ ಅಮಿತಾಭ್ ಬಚ್ಚನ್ ಇದ್ದರೆ, ಅಜಯ್ ದೇವಗನ್ ಆ್ಯಂಗ್ರಿ ಯಂಗ್‌ಮ್ಯಾನ್ ಆಗಿದ್ದಾರೆ. ತಮ್ಮ ಹೋರಾಟದಲ್ಲಿ ಅಜಯ್ ದೇವಗನ್ ಯಶಸ್ವಿಯಾಗುತ್ತಾರೋ ಇಲ್ಲವೋ, ಆದರೆ ಈ ಪುರುಷನ ಹಿಂದೆ ಕರೀನಾ ಕಪೂರ್ ಎಂಬ ಹೆಣ್ಣಂತೂ ಇದ್ದಾಳೆ. ಜೊತೆಗೆ, ಅಮೃತಾ ರಾವ್, ಅರ್ಜುನ್ ರಾಮ್‌ಪಾಲ್ ಕೂಡ
ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ. ಉಳಿದಂತೆ ಮನೋಜ್ ವಾಜಪೇಯಿಗೆ ಭ್ರಷ್ಟ ರಾಜಕಾರಣಿಯ ಪಾತ್ರ.
50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸತ್ಯಾಗ್ರಹ ಚಿತ್ರದ ನಿರ್ದೇಶಕ ಪ್ರಕಾಶ್ ಝಾ. ಅಣ್ಣಾ ಹಜಾರೆ, ಸತ್ಯೇಂದ್ರ ದುಬೆ ಅವರ ಹೋರಾಟದಿಂದ ಪ್ರೇರಿತ ಕಥೆ ಹೊಂದಿದೆ ಎನ್ನಲಾಗಿರುವ ಸತ್ಯಾಗ್ರಹ ಚಿತ್ರಕ್ಕೆ ಸಲೀಂ ಸುಲೈಮಾನ್ ಸಂಗೀತವಿದ್ದು ಚಿತ್ರದ ಎಲ್ಲ ಹಾಡುಗಳೂ ಚಿತ್ರದ ಕಥೆಯ ಟ್ರ್ಯಾಕ್‌ನಲ್ಲೇ ಇವೆ.
ಆಗಸ್ಟ್ 15ರಂದು ಶುರುವಾಗಬೇಕಿದ್ದ ಸತ್ಯಾಗ್ರಹ ಕೊಂಚ ತಡವಾದರೂ, ಅಂತೂ ಮೊನ್ನೆ ಶುಕ್ರವಾರದಿಂದ ಶುರುವಾಗಿದೆ. ಈ ಹೋರಾಟದಲ್ಲಿ ಗೆಲುವು ಸಿಗುತ್ತದೆಯೋ ಇಲ್ಲವೋ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ.

= ಹರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.