ಬಾಲಿವುಡ್

ನಯನಾ ಶಾಕ್!

ನಯನಾ ಶಾಕ್!
Published On :

ನಯನತಾರಾ ಅಭಿಮಾನಿಗಳಿಗೆ ಸೈಲೆಂಟ್ ಆಗಿ ಶಾಕ್ ನೀಡಿದ್ದಾರೆ. ಆಕೆ ಇನ್ನು ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲ್ಲವಂತೆ! ವಯಸ್ಸಾದ ನಟಿಯರೂ ಗ್ಲಾಮರ್‌ಗೆ ಹಾತೊರೆಯುತ್ತಿರುವಾಗ, ತಮಿಳು ಮತ್ತು ತೆಲುಗು ಚಿತ್ರೋದ್ಯಮಗಳಲ್ಲಿ ಇನ್ನೂ ಬೇಡಿಕೆ ಉಳಿಸಿಕೊಂಡಿರುವ ನಯನತಾರಾ ಮಾತ್ರ ಇಂಥ ನಿಲುವಿಗೆ ಬಂದಿದ್ದಾಳೆ. ಎಲ್ಲ 'ಶ್ರೀರಾಮ ರಾಜ್ಯಂ' ಮಹಿಮೆ!
ನಂದಮೂರಿ ಬಾಲಕೃಷ್ಣ ಜತೆ 'ಶ್ರೀರಾಮ ರಾಜ್ಯಂ'ನಲ್ಲಿ ಸೀತೆಯಾಗಿ ನಟಿಸಿದ್ದಳು ನಯನತಾರಾ. ಅದಕ್ಕಾಗಿ ಫಿಲಂಫೇರ್ ಪ್ರಶಸ್ತಿ ಕೂಡ ಬಂದಿತ್ತು. 'ಅದು ಮಹಾನ್ ಪತಿವ್ರತೆ ಪಾತ್ರ. ಜನ ಆ ಪಾತ್ರದಲ್ಲಿ ನನ್ನನ್ನು ಇಷ್ಟಪಟ್ಟಿದ್ದಾರೆ. ಆದ್ದರಿಂದ ಇನ್ನುಮುಂದೆ ಡಿಗ್ಲಾಮರಸ್ ಪಾತ್ರಗಳನ್ನಷ್ಟೇ ಒಪ್ಪಿಕೊಳ್ಳುತ್ತೇನೆಯೇ ಹೊರತು ಗ್ಲಾಮರಸ್ ಪಾತ್ರ ಒಪ್ಪಿಕೊಳ್ಳುವುದಿಲ್ಲ. ಹಾಡುಗಳಲ್ಲಿ ಕೂಡ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದಿಲ್ಲ' ಎಂದಿದ್ದಾಳೆ ನಯನತಾರಾ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.