ವೃತ್ತಿ & ಉದ್ಯೋಗ ಅವಕಾಶಗಳು

ಇಂಜಿನಿಯರಿಂಗ್ ಪದವೀಧರರಿಗೆ ಸರ್ಕಾರಿ ಉದ್ಯೋಗಾವಕಾಶ: IOCL ನಿಂದ 470 ಹುದ್ದೆಗಳ ಬೃಹತ್ ನೇಮಕಾತಿ; ಸಂಬಳ ₹1,60,000

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ವಿವಿಧ ವಿಭಾಗಗಳಲ್ಲಿ ಇಂಜಿನಿಯರ್ ಸೇರಿದಂತೆ ಖಾಲಿ ಇರುವ ಬರೋಬ್ಬರಿ 470 ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ವಾರ್ಷಿಕ 18.4 ಲಕ್ಷದವರೆಗಿನ ಭರ್ಜರಿ ವೇತನವಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 3 ಕೊನೆಯ ದಿನವಾಗಿದೆ.

ಇಂಜಿನಿಯರಿಂಗ್ ಪದವೀಧರರಿಗೆ ಸರ್ಕಾರಿ ಉದ್ಯೋಗಾವಕಾಶ: IOCL ನಿಂದ 470 ಹುದ್ದೆಗಳ ಬೃಹತ್ ನೇಮಕಾತಿ; ಸಂಬಳ ₹1,60,000
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್
Published On :

IOCL Recruitment 2026: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಕೆಲಸ ಮಾಡುವುದು ಹಲವು ಉದ್ಯೋಗಾಕಾಂಕ್ಷಿಯ ಕನಸು. ಇದೀಗ ಆ ಕನಸನ್ನು ನನಸು ಮಾಡಿಕೊಳ್ಳಲು ಸುವರ್ಣಾವಕಾಶ ಒದಗಿಬಂದಿದೆ. ಅದರಂತೆ, ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಬರೋಬ್ಬರಿ 470 ಹುದ್ದೆಗಳ ಭರ್ತಿಗೆ IOCL ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಹುದ್ದೆಗಳ ವಿವರ:

  • ಮೆಕ್ಯಾನಿಕಲ್ ಇಂಜಿನಿಯರಿಂಗ್: 118

  • ಎಲೆಕ್ಟ್ರಿಕಲ್ ಇಂಜಿನಿಯರಿಂಗ್: 75

  • ಸಿವಿಲ್ ಇಂಜಿನಿಯರಿಂಗ್: 62

  • ಮಾರ್ಕೆಟಿಂಗ್: 41

  • ಇನ್‌ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್: 35

  • ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ: 32

  • ಕಂಪ್ಯೂಟರ್ ಸೈನ್ಸ್ ಮತ್ತು ಐಟಿ: 22

  • ಕೆಮಿಕಲ್ ಇಂಜಿನಿಯರಿಂಗ್: 9

  • ಸಹಾಯಕ ಗುಣಮಟ್ಟ ನಿಯಂತ್ರಣ ಅಧಿಕಾರಿ (ರಸಾಯನಶಾಸ್ತ್ರ): 9

  • ಡಿಪ್ಲೊಮಾ ಮೆಕ್ಯಾನಿಕಲ್: 21

  • ಡಿಪ್ಲೊಮಾ ಸುರಕ್ಷತೆ: 15

  • ಡಿಪ್ಲೊಮಾ ಎಲೆಕ್ಟ್ರಿಕಲ್: 14

ಒಟ್ಟು ಹುದ್ದೆಗಳು: 470

ಪ್ರಮುಖ ದಿನಾಂಕಗಳು

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: ಆಗಸ್ಟ್ 14, 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 3, 2026 (ಸಂಜೆ 5:00 ಗಂಟೆಯವರೆಗೆ)

  • ಪ್ರವೇಶ ಪತ್ರ ಬಿಡುಗಡೆ: ಸೆಪ್ಟೆಂಬರ್ 15, 2026

  • ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ: ಸೆಪ್ಟೆಂಬರ್ 24, 2026

ಆಯ್ಕೆ ಪ್ರಕ್ರಿಯೆಯ ಹಂತಗಳು

ಅಭ್ಯರ್ಥಿಗಳನ್ನು ಒಟ್ಟು ಮೂರು ಪ್ರಮುಖ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:

  • ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ

  • ಗುಂಪು ಚರ್ಚೆ ಮತ್ತು ಗ್ರೂಪ್ ಟಾಸ್ಕ್

  • ವೈಯಕ್ತಿಕ ಸಂದರ್ಶನ

ಸಂಬಳ: ₹30,000 – ₹1,60,000 ಹುದ್ದೆಗಳ ಅನುಗುಣವಾಗಿ ಬದಲಾಗುತ್ತದೆ.

ಅರ್ಜಿ ಶುಲ್ಕ

  • ಸಾಮಾನ್ಯ, OBC/EWS ಅಭ್ಯರ್ಥಿಗಳಿಗೆ: ₹1,000 + ಜಿಎಸ್‌ಟಿ

  • SC/ST/PwBD ಅಭ್ಯರ್ಥಿಗಳಿಗೆ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಸೇವಾ ಬಾಂಡ್:

ಆಯ್ಕೆಯಾದ ಅಭ್ಯರ್ಥಿಗಳು ಕನಿಷ್ಠ 3 ವರ್ಷಗಳ ಕಾಲ ಸೇವೆ ಸಲ್ಲಿಸಬೇಕಾಗುತ್ತದೆ.

  • Grade A: ಸಾಮಾನ್ಯ ವರ್ಗಕ್ಕೆ ₹3,00,000 (ಮೀಸಲಾತಿ ವರ್ಗಕ್ಕೆ ₹50,000).

  • Grade A0 / E0: ಸಾಮಾನ್ಯ ವರ್ಗಕ್ಕೆ ₹2,00,000 (ಮೀಸಲಾತಿ ವರ್ಗಕ್ಕೆ ₹35,000).

ಅರ್ಜಿ ಸಲ್ಲಿಸುವ ಹಂತ-ಹಂತದ ವಿಧಾನ

ಅರ್ಜಿಯನ್ನು IOCL ಅಧಿಕೃತ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಸಲ್ಲಿಸಬೇಕು.

  • ನೋಂದಣಿ: ವೆಬ್‌ಸೈಟ್‌ನಲ್ಲಿರುವ "APPLY ONLINE" ಲಿಂಕ್ ಕ್ಲಿಕ್ ಮಾಡಿ "Click here for New Registration" ಆಯ್ಕೆಮಾಡಿ. ಹೆಸರು, ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಪಡೆದುಕೊಳ್ಳಿ.

  • ವಿವರಗಳನ್ನು ಭರ್ತಿ ಮಾಡುವುದು: ಅರ್ಜಿಯಲ್ಲಿ ಅಗತ್ಯವಿರುವ ಶೈಕ್ಷಣಿಕ ವಿವರಗಳು, ವಿಳಾಸ ಮತ್ತು ವೈಯಕ್ತಿಕ ಮಾಹಿತಿಗಳನ್ನು ಭರ್ತಿ ಮಾಡಿ 'Save & Next' ನೀಡಿ.

  • ದಾಖಲೆಗಳ ಅಪ್‌ಲೋಡ್: ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ. ಇದರ ಜೊತೆಗೆ ವೆಬ್‌ಕ್ಯಾಮ್ ಅಥವಾ ಮೊಬೈಲ್ ಮೂಲಕ ಲೈವ್ ಫೋಟೋ (Live Photo) ಕ್ಯಾಪ್ಚರ್ ಮಾಡಬೇಕು.

  • ಸಹಿ: ಬಿಳಿ ಹಾಳೆಯ ಮೇಲೆ ಕಪ್ಪು ಶಾಯಿಯ ಪೆನ್ನಿನಿಂದ ಮಾಡಿದ ಸಹಿ. ಕ್ಯಾಪಿಟಲ್ ಅಕ್ಷರಗಳಲ್ಲಿ ಸಹಿ ಮಾಡುವಂತಿಲ್ಲ.

  • ಎಡಗೈ ಹೆಬ್ಬೆರಳಿನ ಗುರುತು: ಬಿಳಿ ಹಾಳೆಯ ಮೇಲೆ ಕಪ್ಪು ಅಥವಾ ನೀಲಿ ಶಾಯಿಯ ಗುರುತು.

  • ಪರಿಶೀಲನೆ: 'Preview' ಟ್ಯಾಬ್ ಬಳಸಿ ನಮೂದಿಸಿದ ಎಲ್ಲಾ ವಿವರಗಳನ್ನು ಪರಿಶೀಲಿಸಿ 'Complete Registration' ಕ್ಲಿಕ್ ಮಾಡಿ (ಒಮ್ಮೆ ಸಬ್ಮಿಟ್ ಮಾಡಿದ ನಂತರ ಬದಲಾವಣೆಗೆ ಅವಕಾಶವಿರುವುದಿಲ್ಲ).

  • ಶುಲ್ಕ ಪಾವತಿ: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ UPI ಮೂಲಕ ಶುಲ್ಕ ಪಾವತಿಸಿ

  • ಪ್ರಿಂಟ್‌ಔಟ್: ಶುಲ್ಕ ಪಾವತಿಯ ನಂತರ ಇ-ರಶೀದಿ ಮತ್ತು ಅಪ್ಲಿಕೇಶನ್ ಫಾರ್ಮ್ ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ಇಟ್ಟುಕೊಳ್ಳಿ.

ಅರ್ಜಿ ಸಲ್ಲಿಸುವ ಲಿಂಕ್: https://www.iocl.com/

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.