ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿತ: 95.23 ರೂ ಗೆ ಇಳಿಕೆ!
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಜಾಗತಿಕ ಮಾರುಕಟ್ಟೆಗಳಲ್ಲಿ ಏರಿಳಿತ ಉಂಟುಮಾಡಿದ್ದು ತೈಲ ಬೆಲೆಗಳಲ್ಲೂ ಏರಿಕೆಯಾಗಿದೆ. ಇದು ಹಣದುಬ್ಬರ ಮತ್ತು ಆರ್ಥಿಕತೆ ಕುಸಿತದ ಬಗ್ಗೆ ಕಳವಳಗಳನ್ನು ಹೆಚ್ಚಿಸಿದೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಜಾಗತಿಕ ಮಾರುಕಟ್ಟೆಗಳಲ್ಲಿ ಏರಿಳಿತ ಉಂಟುಮಾಡಿದ್ದು ತೈಲ ಬೆಲೆಗಳಲ್ಲೂ ಏರಿಕೆಯಾಗಿದೆ. ಇದು ಹಣದುಬ್ಬರ ಮತ್ತು ಆರ್ಥಿಕತೆ ಕುಸಿತದ ಬಗ್ಗೆ ಕಳವಳಗಳನ್ನು ಹೆಚ್ಚಿಸಿದ್ದು ಇಂದು ಅಮೆರಿಕ ಡಾಲರ್ ವಿರುದ್ಧ ರೂಪಾಯಿ 39 ಪೈಸೆ ಕುಸಿತದೊಂದಿಗೆ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್ಗೆ 110 ಡಾಲರ್ ಬಳಿ ಇದ್ದು, ಭಾರತದಂತಹ ತೈಲ ಆಮದು ಮಾಡಿಕೊಳ್ಳುವ ಆರ್ಥಿಕತೆಗಳ ಮೇಲೆ ಒತ್ತಡ ಹೇರುತ್ತಲೇ ಇದೆ ಎಂದು ಫಾರೆಕ್ಸ್ ವ್ಯಾಪಾರಿಗಳು ತಿಳಿಸಿದ್ದಾರೆ. ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ನಡುವೆ ವಿದೇಶಿ ಬಂಡವಾಳದ ಹೊರಹರಿವು ಹೂಡಿಕೆದಾರರ ಭಾವನೆಯನ್ನು ಮತ್ತಷ್ಟು ಕುಗ್ಗಿಸಿದೆ.
ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಯುಎಸ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 94.95ರಿಂದ ಪ್ರಾರಂಭವಾಯಿತು. ವಹಿವಾಟಿನ ಸಮಯದಲ್ಲಿ ಕುಸಿತವನ್ನು ಮುಂದುವರೆಸಿದ್ದು ಅಂತಿಮವಾಗಿ ಪ್ರತಿ ಡಾಲರ್ಗೆ 95.23ಕ್ಕೆ ಬಂದು ತಲುಪಿದೆ. ಇದು ಅದರ ಹಿಂದಿನ ಮುಕ್ತಾಯಕ್ಕಿಂತ 39 ಪೈಸೆಯ ಕುಸಿತವಾಗಿದೆ.
ಡಾಲರ್ನ ಬಲವರ್ಧನೆ ಮತ್ತು ಕಚ್ಚಾ ತೈಲ ಬೆಲೆಗಳ ಏರಿಕೆಯಿಂದಾಗಿ ಭಾರತೀಯ ರೂಪಾಯಿ ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿದೆ ಎಂದು HDFC ಸೆಕ್ಯುರಿಟೀಸ್ನ ಹಿರಿಯ ಸಂಶೋಧನಾ ವಿಶ್ಲೇಷಕ ದಿಲೀಪ್ ಪರ್ಮಾರ್ ಹೇಳಿದರು. ತೈಲ ಬೆಲೆಗಳಲ್ಲಿನ ಈ ನಿರಂತರ ಏರಿಕೆ ಮತ್ತು ವಿದೇಶಿ ಬಂಡವಾಳದ ಹೊರಹರಿವು ಭಾರತದ ವ್ಯಾಪಾರ ಸಮತೋಲನ ಮತ್ತು ಒಟ್ಟಾರೆ ಆರ್ಥಿಕತೆಯ ಮೇಲೆ ಸ್ಪಷ್ಟವಾಗಿ ಒತ್ತಡ ಹೇರುತ್ತಿದೆ. ಡಾಲರ್ಗೆ ನಿರಂತರ ಬೇಡಿಕೆಯು ಅಲ್ಪಾವಧಿಯಲ್ಲಿ ರೂಪಾಯಿಯನ್ನು ಒತ್ತಡದಲ್ಲಿಡುವ ಸಾಧ್ಯತೆಯಿದೆ. ಇದು ಡಾಲರ್ ವಿರುದ್ಧ ರೂಪಾಯಿಯನ್ನು 95.35 ರಿಂದ 95.70ಕ್ಕೆ ತಳ್ಳಬಹುದು ಎಂದು ಅವರು ಹೇಳಿದರು.
ಏತನ್ಮಧ್ಯೆ, ಆರು ಪ್ರಮುಖ ಕರೆನ್ಸಿಗಳ ವಿರುದ್ಧ US ಡಾಲರ್ ಅನ್ನು ಅಳೆಯುವ ಡಾಲರ್ ಸೂಚ್ಯಂಕವು ಶೇಕಡಾ 0.11ರಷ್ಟು ಏರಿಕೆಯಾಗಿ 98.26 ಕ್ಕೆ ತಲುಪಿದೆ. ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 355.90 ಪಾಯಿಂಟ್ಗಳ ಏರಿಕೆ ಕಂಡು 77,269.40 ಕ್ಕೆ ತಲುಪಿದ್ದರೆ, ನಿಫ್ಟಿ 121.75 ಪಾಯಿಂಟ್ಗಳ ಏರಿಕೆ ಕಂಡು 24,119.30 ಕ್ಕೆ ತಲುಪಿದೆ. ಅಂತರರಾಷ್ಟ್ರೀಯ ಮಾನದಂಡ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ. 1.37 ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್ಗೆ 109.65ಕ್ಕೆ ಡಾಲರ್ ಗೆ ತಲುಪಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



