IndiGo ನೂತನ CEO ಆಗಿ ವಿಲಿಯಂ ವಾಲ್ಷ್ ನೇಮಕ
ವಿಮಾನಯಾನ ಉದ್ಯಮದ ಅನುಭವಿ ವಾಲ್ಷ್ ಅವರು ಪ್ರಸ್ತುತ ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಘದ(ಐಎಟಿಎ) ಮಹಾನಿರ್ದೇಶಕರಾಗಿದ್ದಾರೆ.

ನವದೆಹಲಿ: ಬ್ರಿಟಿಷ್ ಏರ್ವೇಸ್‌ನ ಮಾಜಿ ಮುಖ್ಯಸ್ಥ ವಿಲಿಯಂ ವಾಲ್ಷ್ ಅವರನ್ನು ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದ ನೂತನ ಸಿಇಒ ಆಗಿ ಮಂಗಳವಾರ ನೇಮಕ ಮಾಡಲಾಗಿದೆ.
ವಿಮಾನಯಾನ ಉದ್ಯಮದ ಅನುಭವಿ ವಾಲ್ಷ್ ಅವರು ಪ್ರಸ್ತುತ ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಘದ(ಐಎಟಿಎ) ಮಹಾನಿರ್ದೇಶಕರಾಗಿದ್ದಾರೆ.
ಭಾರತೀಯ ನಿಯಂತ್ರಕ ಅನುಮೋದನೆಗಳಿಗೆ ಒಳಪಟ್ಟು ವಾಲ್ಷ್ ಅವರನ್ನು ಸಿಇಒ ಆಗಿ ನೇಮಕ ಮಾಡಿರುವುದಾಗಿ ಘೋಷಿಸಿದ ಇಂಡಿಗೋ, ಐಎಟಿಎಯಲ್ಲಿ ಅವರ ಅಧಿಕಾರಾವಧಿ ಜುಲೈ 31 ರಂದು ಕೊನೆಗೊಳ್ಳಲಿದೆ ಮತ್ತು ಆಗಸ್ಟ್ 3 ರ ನಂತರ ಅವರು ಇಂಡಿಗೋ ಸೇರುವ ನಿರೀಕ್ಷೆಯಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಅವರ ಹಠಾತ್ ನಿರ್ಗಮನದ ಮೂರು ವಾರಗಳ ನಂತರ ಈ ಘೋಷಣೆ ಬಂದಿದೆ.
ವಿಲಿಯಂ ವಾಲ್ಷ್ ಅವರು 1979ರಲ್ಲಿ ಇಂಟರ್ನ್ಯಾಷನಲ್ ಏರ್ಲೈನ್ಸ್ ಗ್ರೂಪ್ನ ಏರ್ ಲಿಂಗಸ್ನಲ್ಲಿ ಪೈಲಟ್ ಆಗಿ ವೃತ್ತಿಜೀವನ ಆರಂಭಿಸಿದ್ದರು. ನಂತರ, ಐರ್ಲ್ಯಾಂಡ್ ಮೂಲದ ಆ ಏರ್ಲೈನ್ಸ್ ಗ್ರೂಪ್ ಸಿಇಒ ಸ್ಥಾನಕ್ಕೆ ಏರಿದರು. ಅದಾದ ಬಳಿಕ ಬ್ರಿಟಿಷ್ ಏರ್ವೇಸ್ಗೂ ಸಿಇಒ ಆಗಿ ಸೇವೆ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



