ವಾಣಿಜ್ಯ

Indian Stock Market; ಸೆನ್ಸೆಕ್ಸ್ 238 ಅಂಕ ಏರಿಕೆ, 24 ಸಾವಿರ ಗಡಿಯತ್ತ Nifty

ಆಸ್ಟ್ರೇಲಿಯಾದೊಂದಿಗಿನ ಬಲಿಷ್ಠ ಸಹಭಾಗಿತ್ವ ಭಾರತಕ್ಕೆ ಇಂಧನ ಭದ್ರತೆಯನ್ನು ಹೆಚ್ಚಿಸಲು ನೆರವಾಗುವ ನಿರೀಕ್ಷೆಯಿದೆ.

Indian Stock Market; ಸೆನ್ಸೆಕ್ಸ್ 238 ಅಂಕ ಏರಿಕೆ, 24 ಸಾವಿರ ಗಡಿಯತ್ತ Nifty
ಭಾರತೀಯ ಷೇರು ಮಾರುಕಟ್ಟೆ
Published On :

ಮುಂಬೈ: ಭಾರತೀಯ ಷೇರುಮಾರುಕಟ್ಟೆಯ ಚೇತೋಹಾರಿ ವಹಿವಾಟು ಮುಂದುವರೆದಿದ್ದು, ಗುರುವಾರ ಕೂಡ ಷೇರುಮಾರುಕಟ್ಟೆ ಸೂಚ್ಯಂಕಗಳು ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಗುರುವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.31ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.34ರಷ್ಟು ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ ಇಂದು 238.22ಅಂಕಗಳ ಏರಿಕೆಯೊಂದಿಗೆ 76,741.82 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 80.75 ಅಂಕಗಳ ಏರಿಕೆಯೊಂದಿಗೆ 23,962.80 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ PSU ಬ್ಯಾಂಕ್, ಗ್ರಾಹಕ ಬಾಳಿಕ ವಸ್ತುಗಳು ವಲಯದ ಷೇರುಗಳ ಮೌಲ್ಯ ಏರಿಕೆ ಕಂಡಿದ್ದರೆ, ಆಟೋ ಮತ್ತು ಐಟಿವಲಯದ ಷೇರುಗಳು ಹಿನ್ನಡೆ ಕಂಡಿವೆ.

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಸನ್ ಫಾರ್ಮಾ ಶೇ. 2.7 ರಷ್ಟು ಏರಿಕೆಯಾಗಿ ಅತಿ ಹೆಚ್ಚು ಲಾಭ ಗಳಿಸಿತು. ಭಾರ್ತಿ ಏರ್‌ಟೆಲ್ ಶೇ. 2.15 ರಷ್ಟು ಏರಿಕೆಯಾಯಿತು. ಉಳಿದಂತೆ ಬಜಾಜ್ ಫಿನ್‌ಸರ್ವ್, ಇಂಟರ್‌ಗ್ಲೋಬ್ ಏವಿಯೇಷನ್, ಎಟರ್ನಲ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ.

ಅಂತೆಯೇ ಭಾರ್ತಿ ಏರ್‌ಟೆಲ್ ಸಂಸ್ಥೆಯ ಷೇರುಗಳು ಶೇ.2.15 ರಷ್ಟು ನಷ್ಟ ಕಂಡಿವೆ. ಮತ್ತೊಂದೆಡೆ, ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಶೇ.5.99ರಷ್ಟು ಕುಸಿದು ಅತಿ ಹೆಚ್ಚು ನಷ್ಟ ಅನುಭವಿಸಿದ ಷೇರಾಯಿತು. ಉಳಿದಂತೆ ಇನ್ಫೋಸಿಸ್ ಶೇ.1.79, ಮಾರುತಿ ಸುಜುಕಿ ಶೇ.1.62, ಎನ್‌ಟಿಪಿಸಿ ಶೇ.1.51 ಹಾಗೂ ಒಎನ್‌ಜಿಸಿ ಶೇ.1.28ರಷ್ಟು ಇಳಿಕೆ ಕಂಡವು.

ಏರಿಕೆಗೆ ಕಾರಣ

ಹೂಡಿಕೆದಾರರು ರಕ್ಷಣಾತ್ಮಕ ಹಾಗೂ ದೇಶೀಯ ಬೇಡಿಕೆಯನ್ನು ಆಧರಿಸಿದ ವಲಯಗಳತ್ತ ಹೆಚ್ಚಿನ ಆಸಕ್ತಿ ತೋರಿದರು. ಇದರ ಜೊತೆಗೆ, ಭಾರತ–ಆಸ್ಟ್ರೇಲಿಯಾ ನಡುವಿನ ಕಾರ್ಯತಂತ್ರದ ಸಹಭಾಗಿತ್ವ ಮತ್ತಷ್ಟು ಬಲಗೊಳ್ಳುವ ಬೆಳವಣಿಗೆಯೂ ಮಾರುಕಟ್ಟೆಯ ವಿಶ್ವಾಸವನ್ನು ಹೆಚ್ಚಿಸಿದೆ. ಉಭಯ ದೇಶಗಳು ವ್ಯಾಪಾರ, ಇಂಧನ ಭದ್ರತೆ, ಶುದ್ಧ ಇಂಧನ ಹಾಗೂ ಪೂರೈಕೆ ಸರಪಳಿ (ಸಪ್ಲೈ ಚೈನ್) ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು ಒಪ್ಪಿಗೆ ಸೂಚಿಸಿವೆ.

ಅಮೆರಿಕ–ಇರಾನ್ ನಡುವಿನ ಉದ್ವಿಗ್ನತೆಯಿಂದ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 78 ಅಮೆರಿಕನ್ ಡಾಲರ್ ಮಟ್ಟದಲ್ಲಿ ಮುಂದುವರಿದಿರುವ ಹಿನ್ನೆಲೆಯಲ್ಲಿ, ಆಸ್ಟ್ರೇಲಿಯಾದೊಂದಿಗಿನ ಬಲಿಷ್ಠ ಸಹಭಾಗಿತ್ವ ಭಾರತಕ್ಕೆ ಇಂಧನ ಭದ್ರತೆಯನ್ನು ಹೆಚ್ಚಿಸಲು ನೆರವಾಗುವ ನಿರೀಕ್ಷೆಯಿದೆ.

ಜೊತೆಗೆ, ದೀರ್ಘಾವಧಿಯಲ್ಲಿ ಭಾರತದ ಉತ್ಪಾದನಾ (ಮ್ಯಾನುಫ್ಯಾಕ್ಚರಿಂಗ್) ಹಾಗೂ ನವೀಕರಿಸಬಹುದಾದ ಇಂಧನ (ರಿನ್ಯೂಯಬಲ್ ಎನರ್ಜಿ) ಕ್ಷೇತ್ರಗಳ ಬೆಳವಣಿಗೆಗೂ ಇದು ಉತ್ತೇಜನ ನೀಡುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.