Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...
ದೇಶೀಯ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮುಖ್ಯವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಗಳ ಮೇಲೆ ಅವಲಂಬಿತವಾಗಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆಗಳು ಹೆಚ್ಚಾದರೆ, ಇಲ್ಲಿಯೂ ಹೆಚ್ಚಾಗುತ್ತವೆ. ಅಲ್ಲಿ ಕಡಿಮೆಯಾದರೆ, ದೇಶೀಯವಾಗಿಯೂ ಇಳಿಕೆ ಕಂಡುಬರುತ್ತದೆ.

ಬೆಂಗಳೂರು: ಜಾಗತಿಕ ಮಾರುಕಟ್ಟೆಯ ಏರುಪೇರಿನ ನಡುವೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಸಣ್ಣ ಮಟ್ಟಿನ ಏರಿಕೆ ದಾಖಲಾಗಿದೆ. ಬುಧವಾರ ದರಗಳೊಂದಿಗೆ ಹೋಲಿಸಿದರೆ ಇಂದು ಪ್ರತಿ ಗ್ರಾಂಗೆ ರೂ.1ರಷ್ಟು ಏರಿಕೆಯಾಗಿದೆ.
ದೇಶೀಯ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮುಖ್ಯವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಗಳ ಮೇಲೆ ಅವಲಂಬಿತವಾಗಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆಗಳು ಹೆಚ್ಚಾದರೆ, ಇಲ್ಲಿಯೂ ಹೆಚ್ಚಾಗುತ್ತವೆ. ಅಲ್ಲಿ ಕಡಿಮೆಯಾದರೆ, ದೇಶೀಯವಾಗಿಯೂ ಇಳಿಕೆ ಕಂಡುಬರುತ್ತದೆ.
ಬೆಂಗಳೂರಿನ ಇಂದಿನ ಚಿನ್ನದ ದರ (26 ಫೆಬ್ರವರಿ) ಬೆಂಗಳೂರು ನಗರದಲ್ಲಿ 24 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂ 16,190 ರೂ. ಆಗಿದ್ದು, 10 ಗ್ರಾಂಗೆ ರೂ. 1,61,900 ದಾಖಲಾಗಿದೆ. ನಿನ್ನೆಗಿಂತ 10ರಷ್ಟು ಹೆಚ್ಚಳ ಕಂಡಿದೆ. 100 ಗ್ರಾಂಗೆ ರೂ.16,19,000 ದರ ದಾಖಲಾಗಿದೆ.
ಇದೇ ವೇಳೆ 22 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂ ರೂ.14,841 ಆಗಿದ್ದು, 10 ಗ್ರಾಂಗೆ ರೂ.1,48,410 ತಲುಪಿದೆ. 100 ಗ್ರಾಂಗೆ ರೂ.14,84,100 ದರವಾಗಿದೆ. ಬೆಲೆಯಲ್ಲಿ ಸಣ್ಣ ಪ್ರಮಾಣದ ಏರಿಕೆ ಕಂಡುಬಂದಿದೆ.
ಇನ್ನು ಬೆಳ್ಳಿ ದರವು ಪ್ರತಿ ಕಿಲೋಗೆ ರೂ.2.84 ಲಕ್ಷದ ಗಡಿಯನ್ನು ತಲುಪಿದೆ. ಇದರಂತೆ 10 ಗ್ರಾಂ ಬೆಳ್ಳಿ ದರ 2,849 ರೂ.ಕ್ಕೆ ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 1,62,050 ರೂ.ಗಳಿದ್ದರೆ, 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 1,48,560 ರೂ.ಗಳಿದೆ.
ಮುಂಬೈನಲ್ಲಿ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 1,61,900 ರೂ.ಗಳಿದ್ದರೆ, 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 1,48,410 ರೂ.ಗಳಿದೆ.
ಅದೇ ರೀತಿ, ಚೆನ್ನೈನಲ್ಲಿ 10 ಗ್ರಾಂ ಚಿನ್ನದ ಬೆಲೆ 1,62,890 ರೂ.ಗಳಿದ್ದರೆ, 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 1,49,310 ರೂ.ಗಳಿದೆ.
ಹೈದರಾಬಾದ್‌ನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.1,61,900 ಆಗಿದ್ದರೆ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.1,48,410 ನಲ್ಲಿ ಮುಂದುವರೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



