GST ಆದಾಯ ಶೇ. 6.2 ರಷ್ಟು ಹೆಚ್ಚಳ; ಜನವರಿಯಲ್ಲಿ 1.93 ಲಕ್ಷ ಕೋಟಿ ರೂ ಸಂಗ್ರಹ
2025ರ ಸೆಪ್ಟೆಂಬರ್ 22ರಿಂದ ಜಾರಿಗೆ ಬರುವಂತೆ, ಸುಮಾರು 375 ವಸ್ತುಗಳ ಮೇಲಿನ ಜಿಎಸ್ಟಿ ದರಗಳನ್ನು ಕಡಿತಗೊಳಿಸಲಾಗಿತ್ತು. ಇದರಿಂದಾಗಿ ಸರಕುಗಳು ಅಗ್ಗವಾಗಿದ್ದವು.

ನವದೆಹಲಿ: ಕಳೆದ ಜನವರಿ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹದಲ್ಲಿ ಶೇಕಡಾ 6.2 ರಷ್ಟು ಏರಿಕೆಯಾಗಿದ್ದು, ಒಟ್ಟು 1.93 ಲಕ್ಷ ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿದೆ ಎಂದು ಭಾನುವಾರ ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳ ತಿಳಿಸಿವೆ.
ಒಟ್ಟು ಮರುಪಾವತಿ ಶೇ. 3.1 ರಷ್ಟು ಇಳಿಕೆಯಾಗಿ 22,665 ಕೋಟಿ ರೂ.ಗಳಿಗೆ ತಲುಪಿದೆ. ಆದಾಗ್ಯೂ, ನಿವ್ವಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಆದಾಯ ಶೇ. 7.6 ರಷ್ಟು ಏರಿಕೆಯಾಗಿ, ಜನವರಿಯಲ್ಲಿ ಸುಮಾರು ರೂ. 1.71 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.
ಜನವರಿ ತಿಂಗಳಲ್ಲಿ ತಂಬಾಕು ಉತ್ಪನ್ನಗಳಿಂದ ಸಂಗ್ರಹಿಸುವ ಸೆಸ್ ರೂ. 5,768 ಕೋಟಿಗಳಷ್ಟಿತ್ತು. ಕಳೆದ ವರ್ಷ ಜನವರಿಯಲ್ಲಿ ಕಾರುಗಳು ಮತ್ತು ತಂಬಾಕು ಉತ್ಪನ್ನಗಳಂತಹ ಐಷಾರಾಮಿ, ಮತ್ತು ದೋಷಯುಕ್ತ ಸರಕುಗಳ ಮೇಲೆ ಸೆಸ್ ವಿಧಿಸಲಾಗಿದ್ದಂತಹ ಸಂದರ್ಭದಲ್ಲಿ, ಆ ತಿಂಗಳಲ್ಲಿ ಅವುಗಳಿಂದ ರೂ. 13,009 ಕೋಟಿ ಸೆಸ್ ಸಂಗ್ರಹವಾಗಿತ್ತು.
2025ರ ಸೆಪ್ಟೆಂಬರ್ 22ರಿಂದ ಜಾರಿಗೆ ಬರುವಂತೆ, ಸುಮಾರು 375 ವಸ್ತುಗಳ ಮೇಲಿನ ಜಿಎಸ್ಟಿ ದರಗಳನ್ನು ಕಡಿತಗೊಳಿಸಲಾಗಿತ್ತು. ಇದರಿಂದಾಗಿ ಸರಕುಗಳು ಅಗ್ಗವಾಗಿದ್ದವು. ಉಳಿದಂತೆ, ಐಷಾರಾಮಿ, ಮತ್ತು ಹಾನಿಕರ ಸರಕುಗಳಿಗೆ ಬದಲಾಗಿ, ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳ ಮೇಲೆ ಮಾತ್ರ ಪರಿಹಾರ ಸೆಸ್ ಅನ್ನು ವಿಧಿಸಲಾಗಿತ್ತು. ಜಿಎಸ್ಟಿ ದರಗಳನ್ನು ಕಡಿಮೆ ಮಾಡಿದ್ದು, ಆದಾಯ ಸಂಗ್ರಹಣೆಯ ಮೇಲೆ ಪರಿಣಾಮ ಬೀರಿದೆ.
ದೇಶೀಯ ವಹಿವಾಟುಗಳಿಂದ ಜನವರಿಯಲ್ಲಿ ಒಟ್ಟು ತೆರಿಗೆ ಸಂಗ್ರಹ ಶೇ. 4.8ರಷ್ಟು ಹೆಚ್ಚಾಗಿ 1.41 ಲಕ್ಷ ಕೋಟಿ ರೂ.ಗಳಿಗೆ ತಲುಪಿದ್ದರೆ, ಆಮದು ಆದಾಯ ಶೇ. 10.1 ರಷ್ಟು ಹೆಚ್ಚಾಗಿ 52,253 ಕೋಟಿ ರೂ.ಗಳಿಗೆ ತಲುಪಿದೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದರಗಳಲ್ಲಿ ಕಡಿತದ ಹೊರತಾಗಿಯೂ ಕಳೆದ ವರ್ಷ ಹಬ್ಬದ ಅವಧಿಯಲ್ಲಿ ಖರೀದಿ ಭರಾಟೆಯಿಂದಾಗಿ ಜಿಎಸ್ಟಿ ಸಂಗ್ರಹದಲ್ಲಿ ಏರಿಕೆಯಾಗಿತ್ತು. ಅಕ್ಟೋಬರ್ ತಿಂಗಳಲ್ಲಿ ಒಟ್ಟು ಜಿಎಸ್ಟಿ ಸಂಗ್ರಹ ಶೇ. 4.6 ರಷ್ಟು ಹೆಚ್ಚಾಗಿ ಸುಮಾರು 1.96 ಲಕ್ಷ ಕೋಟಿ ರೂ.ಗಳಿಗೆ ಏರಿಕೆ ಆಗಿತ್ತು. ಇದು ಹಬ್ಬದ ಋತುವಿನ ಮಾರಾಟದ ಪರಿಣಾಮ ಮತ್ತು ಹೆಚ್ಚಿನ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



