ವಾಣಿಜ್ಯ

ಡಾಲರ್ ಎದುರು ರೂಪಾಯಿ ಮೌಲ್ಯ ಕನಿಷ್ಠ ಮಟ್ಟಕ್ಕೆ ಇಳಿಕೆ: 95 ರೂ ಗೆ ಕುಸಿತ

ಕಚ್ಚಾ ತೈಲದ ಬೆಲೆ ಏರಿಕೆಯಿಂದ ಭಾರತದ ಆಮದು ವೆಚ್ಚಗಳು ತೀವ್ರವಾಗಿ ಹೆಚ್ಚುವ ಸಾಧ್ಯತೆ ಇದ್ದು, ಪಶ್ಚಿಮ ಏಷ್ಯಾದಲ್ಲಿ ಸಂಭವಿಸಬಹುದಾದ ಸಂಘರ್ಷದ ಆತಂಕ ಹೂಡಿಕೆದಾರರ ಚಿಂತೆಯನ್ನು ಹೆಚ್ಚಿಸಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಕನಿಷ್ಠ ಮಟ್ಟಕ್ಕೆ ಇಳಿಕೆ: 95 ರೂ ಗೆ ಕುಸಿತ
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
Published On :

ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ ರೂಪಾಯಿ ಅಮೆರಿಕನ್ ಡಾಲರ್ ಎದುರು 32 ಪೈಸೆ ಕುಸಿದು ಇತಿಹಾಸದಲ್ಲೇ ಕನಿಷ್ಠ ಮಟ್ಟವಾದ 95 ರೂಪಾಯಿ 20 ಪೈಸೆಗೆ ತಲುಪಿತು. ಬ್ಯಾರೆಲ್‌ಗೆ ಸುಮಾರು 122 ಡಾಲರ್ ಮಟ್ಟದಲ್ಲಿ ಇರುವ ಬ್ರೆಂಟ್ ಕಚ್ಚಾ ತೈಲದ ಹೆಚ್ಚಿನ ಬೆಲೆ ಮತ್ತು ಬಲವಾದ ಅಮೆರಿಕನ್ ಕರೆನ್ಸಿಯ ಪರಿಣಾಮ ರೂಪಾಯಿಗೆ ಒತ್ತಡ ತಂದಿದೆ.

ಫಾರೆಕ್ಸ್ ಉದ್ಯಮಿಗಳು ಡಾಲರ್ ಎದುರು ರೂಪಾಯಿ ಮೌಲ್ಯ ಇನ್ನಷ್ಟು ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಕಚ್ಚಾ ತೈಲದ ಬೆಲೆ ಏರಿಕೆಯಿಂದ ಭಾರತದ ಆಮದು ವೆಚ್ಚಗಳು ತೀವ್ರವಾಗಿ ಹೆಚ್ಚುವ ಸಾಧ್ಯತೆ ಇದ್ದು, ಪಶ್ಚಿಮ ಏಷ್ಯಾದಲ್ಲಿ ಸಂಭವಿಸಬಹುದಾದ ಸಂಘರ್ಷದ ಆತಂಕ ಹೂಡಿಕೆದಾರರ ಚಿಂತೆಯನ್ನು ಹೆಚ್ಚಿಸಿದೆ.

ಇದೇ ವೇಳೆ, ಅಮೆರಿಕದ ಫೆಡ್ ರಿಸರ್ವ್ ಬಡ್ಡಿದರಗಳನ್ನು ಉಳಿಸಿದ ನಂತರ ಡಾಲರ್ ಮತ್ತಷ್ಟು ಬಲಗೊಂಡಿದೆ. ಅಮೆರಿಕ ಮತ್ತು ಇರಾನ್ ನಡುವಿನ ಮತ್ತೊಂದು ರಾಜತಾಂತ್ರಿಕ ಹಿನ್ನಡೆಯಿಂದ ಸುರಕ್ಷಿತ ಹೂಡಿಕೆಗಳ ಬೇಡಿಕೆಯೂ ಹೆಚ್ಚಾಗಿದೆ.

ಅಂತರ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ರೂಪಾಯಿ 95.01 ಮಟ್ಟದಲ್ಲಿ ಆರಂಭವಾಗಿ, ನಂತರ ಕುಸಿದು 95.20 ಮಟ್ಟವನ್ನು ತಲುಪಿತು, ಇದು ಹಿಂದಿನ ಮುಚ್ಚಿದ ಮಟ್ಟಕ್ಕಿಂತ 32 ಪೈಸೆ ಇಳಿಕೆಯಾಗಿತ್ತು. ಬುಧವಾರ ರೂಪಾಯಿ 20 ಪೈಸೆ ಕುಸಿದು 94.88 ಮಟ್ಟದಲ್ಲಿ ಮುಕ್ತಾಯಗೊಂಡಿತ್ತು.

ರೂಪಾಯಿಗೆ ಪ್ರಮುಖ ಪರಿಣಾಮ ಕಚ್ಚಾ ತೈಲದ ಬೆಲೆ ಏರಿಕೆಯಿಂದಾಗಿದೆ. ಅದು ಬ್ಯಾರೆಲ್‌ಗೆ 120 ಡಾಲರ್ ದಾಟಿ ಇನ್ನಷ್ಟು ಏರಿಕೆಯಾಗುವ ಸೂಚನೆ ನೀಡುತ್ತಿದೆ. ಅಮೆರಿಕ ಇರಾನ್ ಬಂದರುಗಳ ನಿರ್ಬಂಧ ಮುಂದುವರಿಸುತ್ತಿರುವಾಗ, ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಯಾವುದೇ ಹಡಗುಗಳಿಗೆ ಅವಕಾಶ ನೀಡುತ್ತಿಲ್ಲ ಎಂದು ಫಿನ್ರೆಕ್ಸ್ ಟ್ರೆಜರಿ ಅಡ್ವೈಸರ್ಸ್ ಎಲ್ ಎಲ್ ಪಿ ಸಂಸ್ಥೆಯ ಟ್ರೆಜರಿ ಮುಖ್ಯಸ್ಥ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಭನ್ಸಾಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.