RBI Policy: ರೆಪೋ ದರ 5.25% ಮುಂದುವರಿಕೆ; ಬಡ್ಡಿದರದಲ್ಲಿ ಬದಲಾವಣೆ ಇಲ್ಲ; ಹಣದುಬ್ಬರ ಶೇ. 4.6 ಎಂದು ಅಂದಾಜು!
ಹಣಕಾಸು ನೀತಿ ಸಮಿತಿಯು ಪಾಲಿಸಿ ರೆಪೊ ದರವನ್ನು 5.25% ನಲ್ಲಿಯೇ ಯಥಾಸ್ಥಿತಿಯಲ್ಲಿಡಲು ಮತ್ತು ತಟಸ್ಥ ನಿಲುವನ್ನು ಕಾಯ್ದುಕೊಳ್ಳಲು ನಿರ್ಧರಿಸಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

ನವದೆಹಲಿ: ಹಣಕಾಸು ನೀತಿ ಸಮಿತಿಯು ಪಾಲಿಸಿ ರೆಪೊ ದರವನ್ನು ಹಾಲಿ ಇರುವ ದರವನ್ನೇ ಮುಂದುವರೆಸಲು ನಿರ್ಧರಿಸಿದ್ದು, ಹಣದುಬ್ಬರ ಶೇ. 4.6 ಎಂದು ಅಂದಾಜಿಸಿದೆ.
ಹಣಕಾಸು ನೀತಿ ಸಮಿತಿಯು ಪಾಲಿಸಿ ರೆಪೊ ದರವನ್ನು 5.25% ನಲ್ಲಿಯೇ ಯಥಾಸ್ಥಿತಿಯಲ್ಲಿಡಲು ಮತ್ತು ತಟಸ್ಥ ನಿಲುವನ್ನು ಕಾಯ್ದುಕೊಳ್ಳಲು ನಿರ್ಧರಿಸಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ನ ಮಾನಿಟರಿ ಪಾಲಿಸಿ ಸಮಿತಿಯು (RBI MPC meeting) ನಿರೀಕ್ಷೆಯಂತೆ ರಿಪೋ ದರದ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಿದೆ.
ಮೊನ್ನೆಯಿಂದ ನಡೆದ ಆರ್‌ಬಿಐ ಎಂಪಿಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಆರ್ಬಿಐನ ರಿಪೋ ದರ ಅಥವಾ ಬಡ್ಡಿದರವು ಶೇ. 5.25ರಲ್ಲಿ ಮುಂದುವರಿಯಲಿದೆ.
ಹಣದುಬ್ಬರ ಏರಿಕೆ ಸಾಧ್ಯತೆ
ಇದೇ ವೇಳೆ ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ ಹಣದುಬ್ಬರ ಏರಿಕೆಯಾಗುವ ಸಾಧ್ಯತೆ ಇದ್ದು, ಬಡ್ಡಿದರ ಇಳಿಸದೇ ಇರುವ ತೀರ್ಮಾನವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಎಂಪಿಸಿ ಸಭೆ ಬಳಿಕ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಾಲಿಸಿ ನಿರ್ಧಾರಗಳನ್ನು ಪ್ರಕಟಿಸಿದರು. ಹಾಗೆಯೇ, 2026-27ರ ವರ್ಷಕ್ಕೆ ಜಿಡಿಪಿ ಬೆಳವಣಿಗೆ ಮತ್ತು ಹಣದುಬ್ಬರ ಎಷ್ಟಾಗಬಹುದು ಎಂದು ಮಾಡಲಾಗಿರುವ ಅಂದಾಜನ್ನೂ ಬಹಿರಂಗಪಡಿಸಿದರು.
ಈ ಹಣಕಾಸು ವರ್ಷದಲ್ಲಿ (2026-27) ಹಣದುಬ್ಬರ ಶೇ. 4.6 ಇರಬಹುದು ಎಂದು ಆರ್‌ಬಿಐ ಪ್ರೊಜೆಕ್ಟ್ ಮಾಡಿದೆ. ಮೊದಲ ಕ್ವಾರ್ಟರ್ನಲ್ಲಿ ಶೇ. 4, ಎರಡನೇ ಕ್ವಾರ್ಟರ್ನಲ್ಲಿ ಶೇ. 4.4, ಮೂರನೇ ಕ್ವಾರ್ಟರ್ನಲ್ಲಿ ಶೇ. 5.2, ನಾಲ್ಕನೇ ಕ್ವಾರ್ಟರ್ನಲ್ಲಿ ಶೇ. 4.7ರಷ್ಟು ಹಣದುಬ್ಬರ ಇರಬಹುದು ಎನ್ನುವುದು ಆರ್‌ಬಿಐ ಎಂಪಿಸಿಯಲ್ಲಿ ಬಂದಿರುವ ಅಭಿಪ್ರಾಯ ಎನ್ನಲಾಗಿದೆ.
ಆರ್ಬಿಐನ ಎಂಪಿಸಿ ಸಭೆಯು ರಿಪೋ ದರವನ್ನು ಶೇ. 5.25ರಲ್ಲಿ ಮುಂದುವರಿಸಲು ನಿರ್ಧರಿಸಿದೆ. ಕಳೆದ ಬಾರಿಯ ಎಂಪಿಸಿ ಸಭೆಯಲ್ಲಿ, ಮುಂಬರುವ ದಿನಗಳಲ್ಲಿ ರಿಪೋ ದರ ಇಳಿಸುವ ಸಾಧ್ಯತೆಯ ಸುಳಿವನ್ನು ನೀಡಲಾಗಿತ್ತು. ಆದರೆ, ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಲಾಗಿದೆ ಎಂದರು.
"ಹಣಕಾಸು ನೀತಿ ಸಮಿತಿಯು 6, 7 ಮತ್ತು ಇಂದು ಬೆಳಿಗ್ಗೆ ಸಂಕ್ಷಿಪ್ತವಾಗಿ ಸಭೆ ಸೇರಿ ನೀತಿ ರೆಪೊ ದರವನ್ನು ಚರ್ಚಿಸಿ ನಿರ್ಧರಿಸಿತು. ವಿಕಸನಗೊಳ್ಳುತ್ತಿರುವ ಸ್ಥೂಲ ಆರ್ಥಿಕ ಮತ್ತು ಹಣಕಾಸು ಬೆಳವಣಿಗೆಗಳು ಮತ್ತು ದೃಷ್ಟಿಕೋನದ ವಿವರವಾದ ಮೌಲ್ಯಮಾಪನದ ನಂತರ, ಎಂಪಿಸಿ ಲಿಕ್ವಿಡಿಟಿ ಸೌಲಭ್ಯದ ಅಡಿಯಲ್ಲಿ ಪಾಲಿಸಿ ರೆಪೊ ದರವನ್ನು 5.25% ನಲ್ಲಿ ಬದಲಾಗದೆ ಇರಿಸಲು ಸರ್ವಾನುಮತದಿಂದ ಮತ ಚಲಾಯಿಸಿತು. ಪರಿಣಾಮವಾಗಿ, ಎಸ್‌ಟಿಎಫ್ ದರವು 5% ನಲ್ಲಿಯೇ ಉಳಿದಿದೆ ಮತ್ತು ಎಂಎಸ್‌ಎಫ್ ದರ ಮತ್ತು ಬ್ಯಾಂಕ್ ದರವು 5.5% ನಲ್ಲಿಯೇ ಉಳಿದಿದೆ. ಎಂಪಿಸಿ ಕೂಡ ತಟಸ್ಥ ನಿಲುವನ್ನು ಮುಂದುವರಿಸಲು ನಿರ್ಧರಿಸಿದೆ." ಎಂದು ಮಾಹಿತಿ ನೀಡಿದರು.
ಜಿಡಿಪಿ ಶೇ. 6.9
ಅಂತೆಯೇ ಈ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಸರಾಸರಿಯಾಗಿ ಶೇ. 6.9 ಜಿಡಿಪಿ ಬೆಳೆಯಬಹುದು ಎಂದು ಆರ್‌ಬಿಐ ಈ ಬಾರಿ ಅಂದಾಜು ಮಾಡಿದೆ. ಮೊದಲ ಕ್ವಾರ್ಟರ್ನಲ್ಲಿ (2026ರ ಏಪ್ರಿಲ್ನಿಂದ ಜೂನ್) ಶೇ. 6.8, ಎರಡನೇ ಕ್ವಾರ್ಟರ್ನಲ್ಲಿ ಶೇ. 6.7, ಮೂರನೇ ಕ್ವಾರ್ಟರ್ನಲ್ಲಿ ಶೇ. 7 ಮತ್ತು ನಾಲ್ಕನೇ ಕ್ವಾರ್ಟರ್ನಲ್ಲಿ ಶೇ. 7.2ರಷ್ಟು ಆರ್ಥಿಕತೆ ಬೆಳೆಯಬಹುದು ಎಂದು ಸಂಜಯ್ ಮಲ್ಹೋತ್ರಾ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



