ಭಾರತದ ಉತ್ಪಾದನಾ ವಲಯದ ಬೆಳವಣಿಗೆ ಭಾರೀ ಕುಸಿತ; 4 ವರ್ಷಗಳಲ್ಲೇ ಕನಿಷ್ಠ; ಇಲ್ಲಿದೆ ಅಸಲಿ ಕಾರಣ..
ಮಾರ್ಚ್‌ನಲ್ಲಿ ದೇಶದ ಉತ್ಪಾದನಾ ವಲಯದ ಬೆಳವಣಿಗೆಯು ನಾಲ್ಕು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಮಾಸಿಕ ವರದಿಯೊಂದು ಗುರುವಾರ ತಿಳಿಸಿದೆ.

ನವದೆಹಲಿ: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಬಿಸಿ ಭಾರತದ ಹಲವು ಕ್ಷೇತ್ರಗಳಿಗೆ ತಟ್ಟಿದ್ದು, ಉತ್ಪಾದನಾ ವಲಯದ ಬೆಳವಣಿಗೆ ಭಾರೀ ಕುಸಿತಕ್ಕೂ ಕಾರಣವಾಗಿದೆ.
ವೆಚ್ಚ ಹೆಚ್ಚಳ, ತೀವ್ರ ಸ್ಪರ್ಧೆ, ಹೆಚ್ಚಿದ ಮಾರುಕಟ್ಟೆ ಅನಿಶ್ಚಿತತೆ ಮತ್ತು ಮಧ್ಯಪ್ರಾಚ್ಯದಲ್ಲಿನ ಯುದ್ಧವು ಹೊಸ ಆರ್ಡರ್ ಗಳು ಮತ್ತು ಉತ್ಪಾದನೆಯಲ್ಲಿ ಕುಸಿತಕ್ಕೆ ಕಾರಣವಾಗಿ ಮಾರ್ಚ್‌ನಲ್ಲಿ ದೇಶದ ಉತ್ಪಾದನಾ ವಲಯದ ಬೆಳವಣಿಗೆಯು ನಾಲ್ಕು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಮಾಸಿಕ ವರದಿಯೊಂದು ಗುರುವಾರ ತಿಳಿಸಿದೆ.
ಋತುಮಾನಕ್ಕೆ ಅನುಗುಣವಾಗಿ ಹೊಂದಾಣಿಕೆ ಮಾಡಲಾದ HSBC ಇಂಡಿಯಾ ಉತ್ಪಾದನಾ ಖರೀದಿ ವ್ಯವಸ್ಥಾಪಕರ ಸೂಚ್ಯಂಕ(PMI) ಫೆಬ್ರವರಿಯಲ್ಲಿ 56.9 ರಿಂದ ಮಾರ್ಚ್‌ನಲ್ಲಿ 53.9 ಕ್ಕೆ ಇಳಿದಿದೆ. ಇದು ಸುಮಾರು ನಾಲ್ಕು ವರ್ಷಗಳಲ್ಲೇ ಕನಿಷ್ಠ ಸೂಚ್ಯಂಕವಾಗಿದೆ.

ಪಶ್ಚಿಮ ಏಷ್ಯಾ ಸಂಘರ್ಷ: ನಾವು ಎಲ್ಲದಕ್ಕೂ ಸಿದ್ಧ.., ಭಾರತಕ್ಕೆ 'ಹೊಸದಾದ' ಸವಾಲುಗಳು ಸೃಷ್ಟಿ- ಪ್ರಧಾನಿ ಮೋದಿ; Video
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


