ವಾಣಿಜ್ಯ

ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ 3.16ಕ್ಕೆ ಇಳಿಕೆ; 69 ತಿಂಗಳಲ್ಲೇ ಅತಿಕಡಿಮೆ

ಮುಖ್ಯವಾಗಿ ತರಕಾರಿ ಬೆಲೆಗಳಲ್ಲಿನ ನಿರಂತರ ಕುಸಿತದಿಂದಾಗಿ ಚಿಲ್ಲರೆ ಹಣದುಬ್ಬರ ಕಳೆದ ಆರು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿದೆ.

ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ 3.16ಕ್ಕೆ ಇಳಿಕೆ; 69 ತಿಂಗಳಲ್ಲೇ ಅತಿಕಡಿಮೆ
ಸಾಂದರ್ಭಿಕ ಚಿತ್ರ
Published On :

ಮುಂಬೈ: ಭಾರತದ ಚಿಲ್ಲರೆ ಹಣದುಬ್ಬರವು ಏಪ್ರಿಲ್ 2025 ರಲ್ಲಿ ಶೇ. 3.16 ಕ್ಕೆ ಇಳಿದಿದ್ದು, ಇದು ಕಳೆದ 69 ತಿಂಗಳಲ್ಲೇ ಅತ್ಯಂತ ಕನಿಷ್ಠ ಹಣದುಬ್ಬರವಾಗಿದೆ.

ಮುಖ್ಯವಾಗಿ ತರಕಾರಿ ಬೆಲೆಗಳಲ್ಲಿನ ನಿರಂತರ ಕುಸಿತದಿಂದಾಗಿ ಚಿಲ್ಲರೆ ಹಣದುಬ್ಬರ ಕಳೆದ ಆರು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿದೆ ಎಂದು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕ (CPI) ತಿಳಿಸಿದೆ.

ಮಾರ್ಚ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ. 3.34ರಷ್ಟು ಇತ್ತು, ಅದೀಗ ಏಪ್ರಿಲ್‌ನಲ್ಲಿ ಶೇ. 3.16ಕ್ಕೆ ಇಳಿದಿದೆ. ಇದಕ್ಕೂ ಹಿಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ. 3.79ರಷ್ಟಿತ್ತು. ಇದರೊಂದಿಗೆ ಸತತ ಮೂರನೇ ತಿಂಗಳೂ ಹಣದುಬ್ಬರ ಶೇ. 4ಕ್ಕಿಂತ ಕೆಳಮಟ್ಟಕ್ಕೆ ಇಳಿಕೆ ಕಂಡಂತಾಗಿದೆ. ಈ ಮೂಲಕ ಆರ್‌ಬಿಐನ ಶೇ. 4ರ ಒಳಗಿನ ಗುರಿ ತಲುಪಿದೆ.

"ತರಕಾರಿ ಸೂಚ್ಯಂಕವು ಮತ್ತಷ್ಟು ಕುಸಿದು, ಆಹಾರ ಹಣದುಬ್ಬರವನ್ನು ಕುಗ್ಗಿಸುವುದರೊಂದಿಗೆ, ಮುಖ್ಯ CPI ಹಣದುಬ್ಬರವು ಏಪ್ರಿಲ್ 2025 ರಲ್ಲಿ 69 ತಿಂಗಳ ಕನಿಷ್ಠ ಅಂದರೆ ಶೇ. 3.16ಕ್ಕೆ ಇಳಿದಿದೆ" ಎಂದು ICRA ಲಿಮಿಟೆಡ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ತಿಳಿಸಿದ್ದಾರೆ.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ)ದಲ್ಲಿ ಸುಮಾರು ಅರ್ಧದಷ್ಟು ಪಾಲನ್ನು ಹೊಂದಿರುವ ಆಹಾರ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ. 1.78ಕ್ಕೆ ಇಳಿಕೆಯಾಗಿದೆ. ಇದೇ ಹಣದುಬ್ಬರ ಮಾರ್ಚ್‌ನಲ್ಲಿ ಶೇ. 2.69ರಷ್ಟು ಇತ್ತು. ಇದರಿಂದ ಒಟ್ಟಾರೆ ಹಣದುಬ್ಬರ ಕುಸಿತ ಕಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.