ವಾಣಿಜ್ಯ

Indian Stock Market: ಹೂಡಿಕೆದಾರರಿಗೆ 9 ಲಕ್ಷ ಕೋಟಿ ರೂ ನಷ್ಟ! ಚೀನಾ ಕಾರಣ?

ಇಂದು ಒಂದೇ ದಿನ ಭಾರತೀಯ ಷೇರುಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಬರೊಬ್ಬರಿ ಶೇ.1.15ರಷ್ಟು ಕುಸಿದಿದ್ದು, ನಿಫ್ಟಿ ಸೂಚ್ಯಂಕ ಕೂಡ ಶೇ.1.25ರಷ್ಟು ಕುಸಿದಿದೆ.

Indian Stock Market: ಹೂಡಿಕೆದಾರರಿಗೆ 9 ಲಕ್ಷ ಕೋಟಿ ರೂ ನಷ್ಟ! ಚೀನಾ ಕಾರಣ?
ಭಾರತೀಯ ಷೇರುಮಾರುಕಟ್ಟೆ
Published On :

ಮುಂಬೈ: ಸತತ ಕುಸಿತದ ಹಾದಿಯಲ್ಲಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ಮತ್ತೊಂದು ಭಾರಿ ಕುಸಿತಕ್ಕೆ ಸಾಕ್ಷಿಯಾಗಿದ್ದು, ಹೂಡಿಕೆದಾರರ 9.19 ಲಕ್ಷ ಕೋಟಿ ರೂ ನಷ್ಟವಾಗಿದೆ.

ಇಂದು ಸೆನ್ಸೆಕ್ಸ್ 930.55 ಅಂಕಗಳನ್ನು ಕಳೆದುಕೊಂಡಿದ್ದು ದಿನದ ವಹಿವಾಟು ಅಂತ್ಯಕ್ಕೆ 80,220.72 ಅಂಕಗಳಿಗೆ ಕುಸಿದು ದಿನದ ವಹಿವಾಟು ಅಂತ್ಯಗೊಳಿಸಿದೆ.

ಅಂತೆಯೇ ನಿಫ್ಟಿ ಕೂಡ 309.00 ಅಂಕಗಳ ಕುಸಿತಕಂಡಿದ್ದು, 24,472.10 ಅಂಕಗಳಿಗೆ ಕುಸಿದಿದೆ. ಇಂದು ಒಂದೇ ದಿನ ಭಾರತೀಯ ಷೇರುಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಬರೊಬ್ಬರಿ ಶೇ.1.15ರಷ್ಟು ಕುಸಿದಿದ್ದು, ನಿಫ್ಟಿ ಸೂಚ್ಯಂಕ ಕೂಡ ಶೇ.1.25ರಷ್ಟು ಕುಸಿದಿದೆ.

ಹೂಡಿಕೆದಾರರ 9 ಲಕ್ಷ ಕೋಟಿ ನಷ್ಟ

ಇನ್ನು ಇಂದಿನ ಮಾರುಕಟ್ಟೆ ಕುಸಿತದಿಂದಾಗಿ ಹೂಡಿಕೆದಾರರ 9.19 ಲಕ್ಷ ಕೋಟಿ ರೂ ನಷ್ಟವಾಗಿದ್ದು, ಬಿಎಸ್ ಇಯಲ್ಲಿ ಪಟ್ಟಿಮಾಡಲಾದ ಸಂಸ್ಥೆಗಳ ಷೇರುಗಳ ಮೌಲ್ಯ 444 ಲಕ್ಷ ಕೋಟಿಗೆ ಕುಸಿದಿದೆ.

ಚೀನಾ ಕಾರಣ!

ದೇಶೀಯ ಹೂಡಿಕೆದಾರರಲ್ಲಿನ ಅನಿಶ್ಚಿತತೆ ಹಾಲಿ ಕುಸಿತಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ಅಲ್ಲದೆ, ವಿದೇಶಿ ಹೂಡಿಕೆದಾರರು ಚೀನಾದಂತಹ ತುಲನಾತ್ಮಕವಾಗಿ ಅಗ್ಗದ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲು ಭಾರತೀಯ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ.

ವಿಶೇಷವಾಗಿ ಅದರ ನಿಧಾನಗತಿಯ ಆರ್ಥಿಕತೆಯನ್ನು ಹೆಚ್ಚಿಸಲು ಚೀನಾ ಸರ್ಕಾರವು ಉತ್ತೇಜಕ ಘೋಷಣೆಗಳನ್ನು ಘೋಷಿಸಿರುವುದು ಹೂಡಿಕೆದಾರರನ್ನು ಪ್ರಮುಖವಾಗಿ ಭಾರತೀಯ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ ಎಂದು ಮೆಹ್ತಾ ಈಕ್ವಿಟೀಸ್ ಲಿಮಿಟೆಡ್‌ನ ಪ್ರಶಾಂತ್ ತಾಪ್ಸೆ ಅಭಿಪ್ರಾಯಪಟ್ಟಿದ್ದಾರೆ.

ಯಾರಿಗೆ ಲಾಭ? ಯಾರಿಗೆ ನಷ್ಟ?

ಉಳಿದಂತೆ ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿಮಾಡಲಾದ ಸಂಸ್ಥೆಗಳ ಪೈಕಿ ಮಹೀಂದ್ರಾ ಮತ್ತು ಮಹೀಂದ್ರಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪವರ್ ಗ್ರಿಡ್, ಟಾಟಾ ಸ್ಟೀಲ್, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಮೋಟಾರ್ಸ್, ಲಾರ್ಸೆನ್ ಮತ್ತು ಟೂಬ್ರೊ, ಎನ್‌ಟಿಪಿಸಿ, ಬಜಾಜ್ ಫೈನಾನ್ಸ್ ಮತ್ತು ರಿಲಯನ್ಸ್ ಸಂಸ್ಥೆಯ ಷೇರುಗಳು ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಿವೆ.

ಅಂತೆಯೇ ಇದಕ್ಕೆ ತದ್ವಿರುದ್ಧ ಎಂಬಂತೆ ಐಸಿಐಸಿಐ ಬ್ಯಾಂಕ್, ನೆಸ್ಲೆ ಮತ್ತು ಇನ್ಫೋಸಿಸ್ ಸಂಸ್ಥೆಗಳ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.