ವಾಣಿಜ್ಯ

US dollar vs Indian Rupee: ಸತತ 4ನೇ ದಿನವೂ ರೂಪಾಯಿ ಮೌಲ್ಯ ಕುಸಿತ; ಸಾರ್ವಕಾಲಿಕ 84.39 ರೂ ಗೆ ಇಳಿಕೆ!

ಕಳೆದ ಶುಕ್ರವಾರ ಮಾರುಕಟ್ಟೆ ವಹಿವಾಟು ಅಂತ್ಯದ ವೇಳೆಗೆ 5 ಪೈಸೆಯಷ್ಟು ಕುಸಿದು 84.37ರೂಗೆ ತಲುಪಿದ್ದ ರೂಪಾಯಿ ಮೌಲ್ಯ ಇಂದು ಮತ್ತೆ 2 ಪೈಸೆಯಷ್ಟು ಕುಸಿದು ಸಾರ್ವಕಾಲಿಕ ಗರಿಷ್ಠ ಮಟ್ಟ 84.39 ರೂ ಗೆ ಇಳಿಕೆಯಾಗಿದೆ.

US dollar vs Indian Rupee: ಸತತ 4ನೇ ದಿನವೂ ರೂಪಾಯಿ ಮೌಲ್ಯ ಕುಸಿತ; ಸಾರ್ವಕಾಲಿಕ 84.39 ರೂ ಗೆ ಇಳಿಕೆ!
ರೂಪಾಯಿ ಮೌಲ್ಯ
Published On :

ಮುಂಬೈ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸತತ 4ನೇ ದಿನವೂ ರೂಪಾಯಿ ಮೌಲ್ಯ ಕುಸಿದಿದ್ದು, ಸೋಮವಾರ ರೂಪಾಯಿ ಮೌಲ್ಯ 2 ಪೈಸೆಯಷ್ಟು ಕುಸಿದು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಕುಸಿದಿದೆ.

ಕಳೆದ ಶುಕ್ರವಾರ ಮಾರುಕಟ್ಟೆ ವಹಿವಾಟು ಅಂತ್ಯದ ವೇಳೆಗೆ 5 ಪೈಸೆಯಷ್ಟು ಕುಸಿದು 84.37ರೂಗೆ ತಲುಪಿದ್ದ ರೂಪಾಯಿ ಮೌಲ್ಯ ಇಂದು ಮತ್ತೆ 2 ಪೈಸೆಯಷ್ಟು ಕುಸಿದು ಸಾರ್ವಕಾಲಿಕ ಗರಿಷ್ಠ ಮಟ್ಟ 84.39 ರೂ ಗೆ ಇಳಿಕೆಯಾಗಿದೆ.

ನಿರಂತರ ವಿದೇಶಿ ನಿಧಿಯ ಹೊರಹರಿವು ಮತ್ತು ದೇಶೀಯ ಷೇರುಗಳಲ್ಲಿನ ನೀರಸ ವಹಿವಾಟು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.

ಡಾಲರ್ ಸೂಚ್ಯಂಕದಲ್ಲಿ ಮೃದುತ್ವ ಅಥವಾ ವಿದೇಶಿ ನಿಧಿಯ ಹೊರಹರಿವು ನಿಧಾನವಾಗದ ಹೊರತು ರೂಪಾಯಿ ಮೌಲ್ಯವು ಒತ್ತಡದಲ್ಲಿ ಉಳಿಯುವ ಸಾಧ್ಯತೆಯಿದೆ ಎಂದು ಫಾರೆಕ್ಸ್ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಇಂದು ಬೆಳಗ್ಗೆ ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ಡಾಲರ್ ಎದುರು ರೂಪಾಯಿ 84.38 ರೂನೊಂದಿಗೆ ವಹಿವಾಟು ಪ್ರಾರಂಭಿಸಿತ್ತು. ಆದರೆ ವಹಿವಾಟು ಅಂತ್ಯದ ಹೊತ್ತಿಗೆ 2ಪೈಸೆ ಇಳಿಕೆಯಾಗಿ ಸಾರ್ವಕಾಲಿಕ 84.39 ರೂ ಗೆ ಇಳಿಕೆಯಾಗಿದೆ.

ಕಳೆದ ಬುಧವಾರದಿಂದಲೂ ರೂಪಾಯಿ ಮೌಲ್ಯ ಸತತವಾಗಿ ಇಳಿಕೆಯಾಗುತ್ತಾ ಸಾಗಿದೆ. ಈ ಅವಧಿಯಲ್ಲಿ ರೂಪಾಯಿ ಮೌಲ್ಯ 30 ಪೈಸೆಯಷ್ಟು ಇಳಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.