ಭಾರತದ ಮಸಾಲೆ ಪದಾರ್ಥಗಳಿಗೆ ನೇಪಾಳ ನಿಷೇಧ!
ಸಿಂಗಪುರ್, ಹಾಂಗ್ ಕಾಂಗ್ ಬಳಿಕ ನೇಪಾಳವೂ ಈಗ ಭಾರತದ ಮಸಾಲೆ ಪದಾರ್ಥಗಳನ್ನು ನಿಷೇಧಿಸಿದೆ.

ಕಠ್ಮಂಡು: ಸಿಂಗಪುರ್, ಹಾಂಗ್ ಕಾಂಗ್ ಬಳಿಕ ನೇಪಾಳವೂ ಈಗ ಭಾರತದ ಮಸಾಲೆ ಪದಾರ್ಥಗಳನ್ನು ನಿಷೇಧಿಸಿದೆ. ಭಾರತೀಯ ಬ್ರಾಂಡ್ ಗಳು ತಯಾರಿಸುವ ಮಸಾಲೆ ಪದಾರ್ಥಗಳ ಮಿಶ್ರಣದ ಉತ್ಪನ್ನಗಳನ್ನು ಕಳಪೆ ಗುಣಮಟ್ಟದ ಕಾರಣದಿಂದ ನಿಷೇಧಿಸುತ್ತಿರುವುದಾಗಿ ನೇಪಾಳ ಹೇಳಿದೆ.
ಎಂಡಿಹೆಚ್, ಎವರೆಸ್ಟ್ ನ 4 ಉತ್ಪನ್ನಗಳನ್ನು ನೆರೆ ರಾಷ್ಟ್ರದಲ್ಲಿ ನಿಷೇಧಿಸಲಾಗಿದ್ದು, ಈ ಉತ್ಪನ್ನಗಳಲ್ಲಿ ಎಥಿಲೀನ್ ಆಕ್ಸೈಡ್ ಅಥವಾ ಇಟಿಒ ಮಾಲಿನ್ಯಕಾರಕ ಅಂಶಗಳು ಪತ್ತೆಯಾಗಿದೆ.
ನೇಪಾಳದಲ್ಲಿ ಮದ್ರಾಸ್ ಕರಿ ಪುಡಿ, ಸಾಂಬಾರ್ ಮಿಶ್ರಿತ ಮಸಾಲೆ ಪುಡಿ; MDH ನ ಮಿಶ್ರ ಮಸಾಲಾ ಕರಿ ಪೌಡರ್ ಮತ್ತು ಎವರೆಸ್ಟ್‌ನ ಫಿಶ್ ಕರಿ ಮಸಾಲಾವನ್ನು ನಿಷೇಧಿಸಲಾಗಿದೆ.
ಆಮದುದಾರರು ಮತ್ತು ವ್ಯಾಪಾರಿಗಳು ಈ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಆಹಾರ ಗುಣಮಟ್ಟ ನಿಯಂತ್ರಕ ಒತ್ತಾಯಿಸಿದೆ.
ಕಳೆದ ತಿಂಗಳು, ಸಿಂಗಾಪುರ ಮತ್ತು ಹಾಂಗ್ ಕಾಂಗ್ ನಲ್ಲಿ MDH ಮತ್ತು ಎವರೆಸ್ಟ್ ಉತ್ಪಾದಿಸಿದ ಕೆಲವು ಮಸಾಲೆಗಳ ಉತ್ಪನ್ನಗಳಲ್ಲಿ ಕ್ಯಾನ್ಸರ್ ಕಾರಕ ETO ಮಟ್ಟ ಹೆಚಿರುವುದು ಪತ್ತೆಯಾದ ಬಳಿಕ ಆ ಉತ್ಪನ್ನಗಳನ್ನು ನಿಷೇಧಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



