ಶೀಘ್ರದಲ್ಲೇ ಫೋನ್ಗಳಲ್ಲಿ ನಂಬರ್ ಬದಲಿಗೆ ಕರೆ ಮಾಡುವವರ ಹೆಸರು ಡಿಸ್ಪ್ಲೇ!
ಟೆಲಿಕಾಂ ಸೇವಾ ಪೂರೈಕೆದಾರರು ತನ್ನ ಬಳಕೆದಾರರಿಗೆ ಕಾಲರ್ ಐಡಿ ಸೌಲಭ್ಯ ಅಥವಾ ಕರೆ ಮಾಡುವವರ ನಂಬರ್ ಬದಲಿಗೆ ಅವರ ಹೆಸರನ್ನು ತೋರಿಸುವ (ಸಿಎನ್ಎಪಿ) ವೈಶಿಷ್ಟ್ಯಗಳನ್ನು ಪೂರಕ ಸೇವೆಗಳಾಗಿ ಒದಗಿಸಬೇಕಾಗುತ್ತದೆ ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಶುಕ್ರವಾರ ಶಿಫಾರಸು ಮಾಡಿದೆ.

ನವದೆಹಲಿ: ಟೆಲಿಕಾಂ ಸೇವಾ ಪೂರೈಕೆದಾರರು ತನ್ನ ಬಳಕೆದಾರರಿಗೆ ಕಾಲರ್ ಐಡಿ ಸೌಲಭ್ಯ ಅಥವಾ ಕರೆ ಮಾಡುವವರ ನಂಬರ್ ಬದಲಿಗೆ ಅವರ ಹೆಸರನ್ನು ತೋರಿಸುವ (ಸಿಎನ್ಎಪಿ) ವೈಶಿಷ್ಟ್ಯಗಳನ್ನು ಪೂರಕ ಸೇವೆಗಳಾಗಿ ಒದಗಿಸಬೇಕಾಗುತ್ತದೆ ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಶುಕ್ರವಾರ ಶಿಫಾರಸು ಮಾಡಿದೆ.
ಈ ವೈಶಿಷ್ಟ್ಯದೊಂದಿಗೆ, ಬಳಕೆದಾರರ ಫೋನ್ TRAI ಒದಗಿಸಿದ ಹೆಸರನ್ನು ಪ್ರದರ್ಶಿಸುತ್ತದೆ. ಎಲ್ಲಾ ಸೇವಾ ಪೂರೈಕೆದಾರರು ವಿನಂತಿಯ ಮೇರೆಗೆ ತಮ್ಮ ದೂರವಾಣಿ ಚಂದಾದಾರರಿಗೆ ಕರೆ ಮಾಡುವವರ ಹೆಸರು ತೋರಿಸುವ (CNAP) ಪೂರಕ ಸೇವೆ ಒದಗಿಸಬೇಕು TRAI ಹೇಳಿಕೆಯಲ್ಲಿ ತಿಳಿಸಿದೆ.
ದೂರಸಂಪರ್ಕ ಇಲಾಖೆ ಈ ಶಿಫಾರಸನ್ನು ಒಪ್ಪಿಕೊಂಡರೆ ಒಂದು ನಿರ್ಧಿಷ್ಟ ದಿನಾಂಕದ ನಂತರ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಮೊಬೈಲ್ ಗಳಲ್ಲಿ CNAP ವೈಶಿಷ್ಟ್ಯ ಲಭ್ಯವಾಗುವಂತೆ ಮಾಡಲು ಸರ್ಕಾರ ಸೂಚನೆ ನೀಡಬಹುದು.
ಕರೆ ಮಾಡುವವರ ಹೆಸರು ಬಾರದ ಹಿನ್ನೆಲೆಯಲ್ಲಿ ಅಪರಿಚಿತರು ಕರೆ ಸ್ವೀಕರಿಸಬೇಕಾಗುತ್ತದೆ ಎಂದು ಅನೇಕ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದರಿಂದ ಈ ವೈಶಿಷ್ಟ್ಯಗಳ ಅಗತ್ಯತೆ ಕಂಡುಬಂದಿದೆ. ಇವುಗಳಲ್ಲಿ ಬಹುತೇಕ ನೋಂದಾಣಿಯಾಗದ ಟೆಲಿಮಾರ್ಕೆಟರ್ ಗಳಿಂದ ಬರುವಂತಹ ಕರೆಗಳಾಗಿದ್ದು, ಕೆಲವೊಮ್ಮೆ ತಜ್ಞರು ಕೂಡಾ ಉತ್ತರ ನೀಡದಂತಾಗಿದೆ.
ಬೃಹತ್ ಸಂಪರ್ಕಗಳು ಮತ್ತು ವ್ಯಾಪಾರ ಸಂಪರ್ಕ ಹೊಂದಿರುವ ಚಂದಾದಾರರ ಘಟಕಗಳಿಗೆ ಗ್ರಾಹಕರ ಅರ್ಜಿ ನಮೂನೆಯಲ್ಲಿ (CAF) ಕಂಡುಬರುವ ಹೆಸರಿನ ಬದಲಿಗೆ ತಮ್ಮ "ಆದ್ಯತೆಯ ಹೆಸರನ್ನು" ಪ್ರಸ್ತುತಪಡಿಸುವ ಸೌಲಭ್ಯವನ್ನು ನೀಡಲಾಗುವುದು ಎಂದು TRAI ಶಿಫಾರಸು ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



