ಏರ್ ಇಂಡಿಯಾ ಜೊತೆ ವಿಲೀನ: ವಿಸ್ತಾರ ಬ್ರ್ಯಾಂಡ್ ಅಡಿಯಲ್ಲಿ ಕೊನೆಯ ಹಾರಾಟ ನವೆಂಬರ್ 11 ರಂದು
ಏರ್ ಇಂಡಿಯಾ-ವಿಸ್ತಾರಾ ವಿಲೀನದ ಭಾಗವಾಗಿ ಸಿಂಗಾಪುರ್ ಏರ್ಲೈನ್ಸ್ ವಿದೇಶಿ ನೇರ ಹೂಡಿಕೆಗೆ ಸರ್ಕಾರ ತನ್ನ ಒಪ್ಪಿಗೆ ನೀಡಿದೆ. ವಿಸ್ತಾರಾ ಟಾಟಾ ಗ್ರೂಪ್ ಮತ್ತು ಸಿಂಗಾಪುರ್ ಏರ್ಲೈನ್ಸ್ ನಡುವಿನ ಜಂಟಿ ಉದ್ಯಮವಾಗಿದೆ.

ನವದೆಹಲಿ/ಮುಂಬೈ: ವಿಸ್ತಾರ ತನ್ನ ಬ್ರಾಂಡ್ ಹೆಸರಿನಡಿಯಲ್ಲಿ ನವೆಂಬರ್ 11 ರಂದು ಕೊನೆಯ ವಿಮಾನವನ್ನು ನಿರ್ವಹಿಸಲಿದೆ. ನವೆಂಬರ್ 12 ರಿಂದ ಏರ್ ಇಂಡಿಯಾದೊಂದಿಗೆ ವಿಲೀನಗೊಳ್ಳಲಿದೆ.
ಏರ್ ಇಂಡಿಯಾ-ವಿಸ್ತಾರ ವಿಲೀನದ ಭಾಗವಾಗಿ ಸಿಂಗಾಪುರ್ ಏರ್ಲೈನ್ಸ್ ವಿದೇಶಿ ನೇರ ಹೂಡಿಕೆಗೆ ಸರ್ಕಾರ ತನ್ನ ಒಪ್ಪಿಗೆ ನೀಡಿದೆ. ವಿಸ್ತಾರಾ ಟಾಟಾ ಗ್ರೂಪ್ ಮತ್ತು ಸಿಂಗಾಪುರ್ ಏರ್ಲೈನ್ಸ್ ನಡುವಿನ ಜಂಟಿ ಉದ್ಯಮವಾಗಿದೆ.
ಏರ್ ಇಂಡಿಯಾ ಟಾಟಾ ಗ್ರೂಪ್ ಒಡೆತನದಲ್ಲಿದೆ. ಸೆಪ್ಟೆಂಬರ್ 3ರಿಂದ ಗ್ರಾಹಕರು, ಹಂತಹಂತವಾಗಿ, ನವೆಂಬರ್ 12 ಮತ್ತು ನಂತರ ಪ್ರಯಾಣಕ್ಕಾಗಿ ವಿಸ್ತಾರದೊಂದಿಗೆ ಬುಕ್ಕಿಂಗ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ವಿಸ್ತಾರಾ ತಿಳಿಸಿದೆ.
ನಂತರ ವಿಸ್ತಾರ ವಿಮಾನವನ್ನು ಏರ್ ಇಂಡಿಯಾ ನಿರ್ವಹಿಸುತ್ತದೆ. ಈ ವಿಮಾನಗಳು ನಿರ್ವಹಿಸುವ ಮಾರ್ಗಗಳ ಬುಕಿಂಗ್ ನ್ನು ಏರ್ ಇಂಡಿಯಾದ ವೆಬ್ಸೈಟ್ಗೆ ಮರುನಿರ್ದೇಶಿಸಲಾಗುತ್ತದೆ.
ವಿಸ್ತಾರ 11 ನವೆಂಬರ್ 2024 ರವರೆಗೆ ಬುಕ್ಕಿಂಗ್ಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತದೆ ಮತ್ತು ಎಂದಿನಂತೆ ವಿಮಾನಗಳನ್ನು ನಿರ್ವಹಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಏರ್ ಇಂಡಿಯಾದೊಂದಿಗೆ ವಿಸ್ತಾರ ವಿಲೀನವನ್ನು ನವೆಂಬರ್ 2022 ರಲ್ಲಿ ಘೋಷಿಸಲಾಯಿತು ಮತ್ತು ಒಪ್ಪಂದದ ನಂತರ, ಸಿಂಗಾಪುರ್ ಏರ್ಲೈನ್ಸ್ ಏರ್ ಇಂಡಿಯಾದಲ್ಲಿ ಶೇಕಡಾ 25.1 ಪಾಲನ್ನು ಹೊಂದಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


