Gold rate today: ಗಗನದತ್ತ ಮುಖ ಮಾಡಿದ್ದ ಚಿನ್ನದರ ಇಂದು ಸ್ಥಿರ!
ಯುಗಾದಿ ಹಬ್ಬದ ಬಳಿಕ ಗಗನದತ್ತ ಮುಖ ಮಾಡಿದ್ದ ಚಿನ್ನದ ಬೆಲೆ ಇಂದು ಯಾವುದೇ ಏರಿಕೆ ಇಲ್ಲದೆ ಸ್ಥಿರವಾಗಿದೆ.

ಮುಂಬೈ: ಯುಗಾದಿ ಹಬ್ಬದ ಬಳಿಕ ಗಗನದತ್ತ ಮುಖ ಮಾಡಿದ್ದ ಚಿನ್ನದ ಬೆಲೆ ಇಂದು ಯಾವುದೇ ಏರಿಕೆ ಇಲ್ಲದೆ ಸ್ಥಿರವಾಗಿದೆ.
ಹೌದು.. ಮಹಿಳೆಯರ ನೆಚ್ಚಿನ ಹಳದಿ ಲೋಹ ಚಿನ್ನದ ದರದಲ್ಲಿ ಭಾನುವಾರ ಯಾವುದೇ ಏರಿಕೆಯಿಲ್ಲದೇ ಸ್ಥಿರವಾಗಿದೆ. ಈ ಹಿಂದೆ 10 ಗ್ರಾಂ ಚಿನ್ನದ ದರ 73 ಸಾವಿರ ರೂ ಗಡಿ ದಾಟಿತ್ತು. ಇಂದು ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿಯೂ ಚಿನ್ನದ ಬೆಲೆ ಏರಿಕೆಯಾಗುವ ಅಂದಾಜಿತ್ತು. ಆದರೆ, ಕಳೆದ ಭಾನುವಾರ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ. ಆದರೆ ಸೋಮವಾರದಿಂದ ಹಳದಿ ಲೋಹದ ಬೆಲೆಯಲ್ಲಿ ಕ್ರಮೇಣ ಏರಿಕೆ ಕಂಡು ಬಂದಿತ್ತು. ಆದರೆ ಇಂದು ಅಂದರೆ ಭಾನುವಾರ ಚಿನ್ನದ ದರದಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ.
ಇಂದು ಚಿನ್ನದ ದರ ಸ್ಥಿರವಾಗಿದ್ದು, 22 ಕ್ಯಾರಟ್ ಚಿನ್ನದ ದರ ಪ್ರತೀ ಗ್ರಾಂಗೆ 6,650 ರೂ ಇದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂಗೆ 7,255 ರೂ ಇದೆ. ನಿನ್ನೆ ಮತ್ತು ಇಂದು ಚಿನ್ನದ ದರದಲ್ಲಿ ಯಾವುದೇ ರೀತಿಯ ಏರಿಕೆ ಕಂಡುಬಂದಿಲ್ಲ. ಇದು ಚಿನ್ನ ಖರೀದಿಸುವ ಗ್ರಾಹಕರಿಗೆ ಸಮಾಧಾನ ತಂದಿದೆ.

ಬೆಳ್ಳಿ ದರ ಇಳಿಕೆ
ಅತ್ತ ಚಿನ್ನ ಗಗನಮುಖಿಯಾಗಿದ್ದರೂ ಬೆಳ್ಳಿ ದರಗಳು ಮಾತ್ರ ಇಂದು ಮತ್ತೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇಂದು ಒಂದು ಗ್ರಾಂ ಬೆಳ್ಳಿಯ (Silver rate today) ಬೆಲೆಯಲ್ಲಿ 1 ರೂ 50ಪೈಸೆಯಷ್ಟು ಇಳಿಕೆಯಾಗಿದ್ದು, ಪ್ರತೀ ಗ್ರಾಂ ಬೆಳ್ಳಿ ದರ 84.75ನಷ್ಟಿದೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



