ದೇಶದ 72 ನಗರಗಳಲ್ಲಿ ಈಗ ಜಿಯೊ 5ಜಿ ಸೇವೆ ಲಭ್ಯ
ಇನ್ನೂ ನಾಲ್ಕು ಹೆಚ್ಚಿನ ನಗರಗಳಲ್ಲಿ 5ಜಿ ಸೇವೆಯನ್ನು ಆರಂಭಿಸಲಾಗಿದೆ ಎಂದು ಘೋಷಿಸಿಕೊಂಡಿರುವ ರಿಲಯನ್ಸ್ ಜಿಯೊ ಈ ಸೇವೆ ವೇಗಗತಿಯಲ್ಲಿ ಭಾರತದಾದ್ಯಂತ ವಿಸ್ತರಿಸಲಾಗುತ್ತಿದೆ ಎಂದು ಹೇಳಿದೆ.

ಮುಂಬೈ: ಇನ್ನೂ ನಾಲ್ಕು ಹೆಚ್ಚಿನ ನಗರಗಳಲ್ಲಿ 5ಜಿ ಸೇವೆಯನ್ನು ಆರಂಭಿಸಲಾಗಿದೆ ಎಂದು ಘೋಷಿಸಿಕೊಂಡಿರುವ ರಿಲಯನ್ಸ್ ಜಿಯೊ ಈ ಸೇವೆ ವೇಗಗತಿಯಲ್ಲಿ ಭಾರತದಾದ್ಯಂತ ವಿಸ್ತರಿಸಲಾಗುತ್ತಿದೆ ಎಂದು ಹೇಳಿದೆ.
ಇಂದು ಗ್ವಾಲಿಯರ್, ಜಬಲ್ಪುರ್, ಲುಧಿಯಾನ ಮತ್ತು ಸಿಲಿಗುರಿ ಪಟ್ಟಣಗಳಲ್ಲಿ 5ಜಿ ಸೇವೆಯನ್ನು ವಿಸ್ತರಿಸಿಕೊಳ್ಳಲಾಗಿದ್ದು ಈ ಮೂಲಕ ಇದುವರೆಗೆ 5ಜಿ ಸೇವೆ ದೇಶದ 72 ನಗರಗಳಿಗೆ ಲಭ್ಯವಾಗಿದೆ.
ಬೇರೆ ನಗರಗಳ ಜಿಯೊ ಬಳಕೆದಾರರಿಗೆ ಜಿಯೊ ವೆಲ್ ಕಮ್ ಆಫರ್ ನ್ನು ನೀಡಲಾಗುತ್ತಿದ್ದು ಪ್ರತಿ ಸೆಕೆಂಡಿಗೆ 1 ಜಿಬಿಪಿಎಸ್ ವೇಗದಕ್ಕೆ ಹೆಚ್ಚುವರಿ ವೆಚ್ಚವಿಲ್ಲದೆ ಅನಿಯಮಿತಿ ಡಾಟಾ ನೀಡಲಾಗುವುದು ಎಂದು ಕಂಪೆನಿ ಹೇಳಿದೆ.
ಜಿಯೊ, 5ನೇ ತಲೆಮಾರಿನ ಮೊಬೈಲ್ ವ್ಯವಸ್ಥೆ(5G)ಯನ್ನು ದೆಹಲಿ, ಮುಂಬೈ, ವಾರಣಾಸಿ ಮತ್ತು ಕೋಲ್ಕತ್ತಾದಲ್ಲಿ ಅಕ್ಟೋಬರ್ 4ರಂದು ಆರಂಭಿಸಿತ್ತು. ಅಕ್ಟೋಬರ್ 22ರಂದು ಚೆನ್ನೈ ಮತ್ತು ನತದ್ವಾರದಲ್ಲಿ ಆರಂಭವಾಗಿದ್ದವು.
ನಂತರ ನವೆಂಬರ್ 10ರಂದು ಬೆಂಗಳೂರು ಮತ್ತು ಹೈದರಾಬಾದ್, ನಂತರ ಗುರುಗ್ರಾಮ್, ನೊಯ್ಡಾ, ಗಾಝಿಯಾಬಾದ್, ಫರಿದಾಬಾದ್ ಗಳಲ್ಲಿ ನಂತರದ ದಿನಗಳಲ್ಲಿ ಜಾರಿಗೆ ಬಂದವು. ಪುಣೆಯಲ್ಲಿ ನವೆಂಬರ್ 23ರಂದು ಹಾಗೂ ಗುಜರಾತ್ ನ 33 ಜಿಲ್ಲೆಗಳಲ್ಲಿ ನವೆಂಬರ್ 25ರಂದು ಬಿಡುಗಡೆಯಾದವು.
ನಂತರದ ದಿನಗಳಲ್ಲಿ ಹಲವು ನಗರಗಳಲ್ಲಿ 5ಜಿ ಸೇವೆಯನ್ನು ಜಿಯೊ ಬಿಡುಗಡೆ ಮಾಡುವುದರೊಂದಿಗೆ ಪ್ರಸ್ತುತ 72 ನಗರಗಳಿಗೆ ವಿಸ್ತರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


