ಷೇರು ಸಂವೇದಿ ಸೂಚ್ಯಂಕ ದಾಖಲೆಯ ಏರಿಕೆ: 70,000 ಗಡಿ ದಾಟಿದ ಸೆನ್ಸೆಕ್ಸ್
ಷೇರು ಮಾರುಕಟ್ಟೆ ವಹಿವಾಟಿನ ವಾರದ ಆರಂಭ ದಿನವಾದ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ ಗರಿಷ್ಠ ಏರಿಕೆ ಕಂಡಿದೆ.

ಮುಂಬೈ: ಷೇರು ಮಾರುಕಟ್ಟೆ ವಹಿವಾಟಿನ ವಾರದ ಆರಂಭ ದಿನವಾದ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ ಗರಿಷ್ಠ ಏರಿಕೆ ಕಂಡಿದೆ. ಮೊದಲ ಬಾರಿಗೆ 70,000 ಗಡಿಯನ್ನು ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ(BSE) ದಾಟಿದೆ. ಮತ್ತು ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ ಕೂಡ ಶರವೇಗದಲ್ಲಿ ಏರಿಕೆಯಾಗಿದ್ದು 21 ಸಾವಿರ ಅಂಕವನ್ನು ದಾಟಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಸಕ್ತ ಹಣಕಾಸು ವರ್ಷದ ಬೆಳವಣಿಗೆಯನ್ನು ಕಂಡ ನಂತರ ಮತ್ತು ನೀತಿ ದರಗಳನ್ನು ಯಥಾಸ್ಥಿತಿಯಲ್ಲಿಟ್ಟ ನಂತರ ಪ್ರಮುಖ ಸೂಚ್ಯಂಕಗಳು ಕಳೆದ ಶುಕ್ರವಾರ ವಾರಾಂತ್ಯದಲ್ಲಿಯೇ ಗರಿಷ್ಠ ಮಟ್ಟವನ್ನು ತಲುಪಿದ್ದವು.
30-ಷೇರುಗಳ ಸೆನ್ಸೆಕ್ಸ್ ತನ್ನ ಸಾರ್ವಕಾಲಿಕ ಗರಿಷ್ಠವಾದ 70,048.90 ಪಾಯಿಂಟ್‌ಗಳನ್ನು ಇಂದು ಬೆಳಗ್ಗೆ ವಹಿವಾಟು ಆರಂಭವಾದ ಕೆಲವೇ ನಿಮಿಷಗಳಲ್ಲಿ ತಲುಪಿತು. ನಂತರ ಸ್ವಲ್ಪಮಟ್ಟಿಗೆ 69,958.13 ಪಾಯಿಂಟ್‌ಗಳಿಗೆ ತನ್ನ ಲಾಭವನ್ನು ಕಳೆದುಕೊಂಡಿತು, ಇದು ಶುಕ್ರವಾರದ ಮುಕ್ತಾಯದ ಮಟ್ಟಕ್ಕೆ ಹೋಲಿಸಿದರೆ 132.53 ಪಾಯಿಂಟ್ ಅಥವಾ ಶೇಕಡಾ 0.19 ರಷ್ಟು ಏರಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


