ವಾಣಿಜ್ಯ

ದೆಹಲಿಯಲ್ಲಿ ಮುಗಿದ ಜಿ20 ಶೃಂಗಸಭೆ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಜಿಗಿತ

ರಾಜಧಾನಿ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯ ಪ್ರಯೋಜನ ಪಡೆದುಕೊಂಡು ಭಾರತೀಯ ಷೇರು ಪೇಟೆ ಸೂಚ್ಯಂಕ ಸೋಮವಾರ ಬೆಳಗ್ಗಿನ ವಹಿವಾಟು ಆರಂಭದಲ್ಲಿಯೇ ಜಿಗಿತ ಕಂಡುಬಂದಿದೆ.

ದೆಹಲಿಯಲ್ಲಿ ಮುಗಿದ ಜಿ20 ಶೃಂಗಸಭೆ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಜಿಗಿತ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯ ಪ್ರಯೋಜನ ಪಡೆದುಕೊಂಡು ಭಾರತೀಯ ಷೇರು ಪೇಟೆ ಸೂಚ್ಯಂಕ ಸೋಮವಾರ ಬೆಳಗ್ಗಿನ ವಹಿವಾಟು ಆರಂಭದಲ್ಲಿಯೇ ಜಿಗಿತ ಕಂಡುಬಂದಿದೆ.

ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧ ಮತ್ತು ರಷ್ಯಾದ ಮೇಲೆ ಪಶ್ಚಿಮದ ನಿರ್ಬಂಧಗಳು, ಭಾರತ-ಮಧ್ಯಪ್ರಾಚ್ಯ-ಯುರೋಪ್ ನ್ನು ಸಂಪರ್ಕಿಸುವ ಮಹತ್ವಾಕಾಂಕ್ಷೆಯ ರೈಲು-ಬಂದರು ಆರ್ಥಿಕ ಕಾರಿಡಾರ್ ಒಪ್ಪಂದ, ಜಾಗತಿಕ ಜೈವಿಕ ಇಂಧನ ಒಪ್ಪಂದ ಇತ್ಯಾದಿಗಳ ಜಿ20ಯಲ್ಲಿನ ಘೋಷಣೆಗಳು ಬಹುಶಃ ಹೂಡಿಕೆದಾರರನ್ನು ಆಕರ್ಷಿಸಿರಬಹುದು. 

ಸೆನ್ಸೆಕ್ಸ್ ಮತ್ತು ನಿಫ್ಟಿ 66,861.16 ಪಾಯಿಂಟ್‌ಗಳು ಮತ್ತು 19,910.10 ಪಾಯಿಂಟ್‌ಗಳ ಶುಕ್ರವಾರದ ಮುಕ್ತಾಯದಿಂದ ಇಂದು ಶೇಕಡಾ 0.3-0.4 ರಷ್ಟು ಹೆಚ್ಚಾಗಿದೆ, ಎಲ್ಲಾ ವಲಯದ ಸೂಚ್ಯಂಕಗಳು ಏರಿಕೆಯಲ್ಲಿವೆ. ಕಳೆದ ಎರಡು ತಿಂಗಳಲ್ಲಿ ಭಾರತೀಯ ಷೇರು ಮಾರುಕಟ್ಟೆ ಇಷ್ಟೊಂದು ಏರಿಕೆಯಾಗಿದ್ದು ಇದೇ ಮೊದಲು. 

ರೈಲ್ವೆ, ಬಂದರು ಮತ್ತು ಮೂಲಸೌಕರ್ಯದಲ್ಲಿ ತೊಡಗಿಸಿಕೊಂಡಿರುವ ಕಂಪನಿಗಳು ಇಂದು ಅಧಿಕ ಲಾಭ ಗಳಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.