ಟ್ವಿಟರ್ ಸಿಇಒ ಸ್ಥಾನಕ್ಕೆ ಎಲೋನ್ ಮಸ್ಕ್ ರಾಜೀನಾಮೆ: ಶೀಘ್ರದಲ್ಲೇ ಹೊಸಬರ ನೇಮಕ
ಟ್ವಿಟರ್ ಸಿಇಒ ಹುದ್ದೆಯಿಂದ ಎಲೋನ್ ಮಸ್ಕ್ ಶೀಘ್ರದಲ್ಲಿಯೇ ನಿರ್ಗಮಿಸಲಿದ್ದಾರೆ. ಕೆಲವು ವಾರಗಳ ನಂತರ ಟ್ವಿಟರ್ ಸಿಇಒ ಹುದ್ದೆ ತೊರೆಯಲು ಅವರು ತೀರ್ಮಾನಿಸಿದ್ದಾರೆ.

ನ್ಯೂಯಾರ್ಕ್: ಟ್ವಿಟರ್ ಸಿಇಒ ಹುದ್ದೆಯಿಂದ ಎಲೋನ್ ಮಸ್ಕ್ ಶೀಘ್ರದಲ್ಲಿಯೇ ನಿರ್ಗಮಿಸಲಿದ್ದಾರೆ. ಕೆಲವು ವಾರಗಳ ನಂತರ ಟ್ವಿಟರ್ ಸಿಇಒ ಹುದ್ದೆ ತೊರೆಯಲು ಅವರು ತೀರ್ಮಾನಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ಟ್ವೀಟರ್ ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಟ್ವೀಟರ್ ಗೆ ಹೊಸ ಸಿಇಒ ಬರಲಿದ್ದು, ಇನ್ನೂ ಆರು ವಾರಗಳಲ್ಲಿ ಆಕೆ ಹುದ್ದೆ ಅಲಂಕರಿಸುವುದಾಗಿ ತಿಳಿಸಿದ್ದಾರೆ. ಅವರ ಹೆಸರನ್ನು ಬಹಿರಂಗಪಡಿಸಿಲ್ಲ ಆದರೆ, ಆರು ವಾರಗಳಲ್ಲಿ ಹೊಸ ಸಿಇಒ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಅವರು ಪ್ರಕಟಿಸಿದ್ದಾರೆ.
ಇದರಿಂದಾಗಿ ಮಾಸ್ಕ್ ಕಾರ್ಯನಿರ್ವಾಹಕ ಮುಖ್ಯಸ್ಥ ಮತ್ತು ಸಿಟಿಒ ಆಗಿ ಅವರು ಪಾತ್ರ ನಿರ್ವಹಿಸಲಿದ್ದಾರೆ. ಭವಿಷ್ಯದಲ್ಲಿ ಉತ್ಪನ್ನಗಳು, ಸಾಫ್ಟ್‌ವೇರ್ ಮತ್ತು ಸಿಸೊಪ್‌ಗಳನ್ನು ಮೇಲ್ವಿಚಾರಣೆ ಮಾಡುವುದಾಗಿ ಮಸ್ಕ್ ಹೇಳಿಕೊಂಡಿದ್ದಾರೆ.
ಎಲೋನ್ ಮಸ್ಕ್ ಟ್ವಿಟ್ಟರ್ ಸಿಇಒ ಆದ ನಂತರ ಹಲವು ಬದಲಾವಣೆಗಳನ್ನ ತಂದಿದ್ದರು. ಉದ್ಯೋಗ ಕಡಿತಗೊಳಿಸಿದ್ದಲ್ಲದೇ, ಉದ್ಯೋಗ ಸಮಯ ಹೆಚ್ಚಿಸಿದ್ದರು. ಜೊತೆಗೆ ಬ್ಲೂ ಟಿಕ್ ಪಡೆಯಲು ಹಣ ಪಾವತಿಸುವ ಕ್ರಮ ಜಾರಿಗೆ ತಂದರು. ಇದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


