ಹಣಕಾಸು ಬಿಕ್ಕಟ್ಟು: ಮೇ. 12 ರವರೆಗೆ ಗೋ ಫಸ್ಟ್ ವಿಮಾನ ಸೇವೆ ಸ್ಥಗಿತ!
ಹಣಕಾಸು ಬಿಕ್ಕಟ್ಟಿನ ಕಾರಣ 'ಗೋ ಫಸ್ಟ್' ವಿಮಾನಯಾನ ಕಂಪನಿಯು ಮೇ. 12ರವರೆಗೆ ತನ್ನ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ಹೇಳಿದೆ.

ಮುಂಬೈ: ಹಣಕಾಸು ಬಿಕ್ಕಟ್ಟಿನ ಕಾರಣ 'ಗೋ ಫಸ್ಟ್' ವಿಮಾನಯಾನ ಕಂಪನಿಯು ಮೇ. 12ರವರೆಗೆ ತನ್ನ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ಹೇಳಿದೆ.
ವಾಡಿಯಾ ಸಮೂಹ-ಮಾಲೀಕತ್ವದ ವಿಮಾನಯಾನ ಕಂಪನಿ, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಮುಂದೆ ಸ್ವಯಂಪ್ರೇರಿತ ದಿವಾಳಿತನ ಪರಿಹಾರ ಪ್ರಕ್ರಿಯೆಗಾಗಿ ಮನವಿ ಸಲ್ಲಿಸಿದೆ ಮತ್ತು ನ್ಯಾಯಮಂಡಳಿ ಗುರುವಾರ ತನ್ನ ಆದೇಶವನ್ನು ಕಾಯ್ದಿರಿಸಿತು. ಕಾರ್ಯಾಚರಣೆಯ ಕಾರಣಗಳಿಂದಾಗಿ 2023 ರ ಮೇ 12 ರವರೆಗೆ ನಿಗದಿಯಾಗಿದ್ದ ಎಲ್ಲಾ ಗೋ ಫಸ್ಟ್ ವಿಮಾನಗಳ ಸೇವೆಯನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಟ್ವೀಟ್‌ನಲ್ಲಿ ತಿಳಿಸಿದೆ.
ಶೀಘ್ರದಲ್ಲೇ ಮೂಲ ಪಾವತಿ ಮಾದರಿಯಂತೆ ಸಂಪೂರ್ಣವಾಗಿ ಮರು ಪಾವತಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಆರಂಭದಲ್ಲಿ ಮೇ 3 ರಿಂದ ಎಲ್ಲಾ ವಿಮಾನಗಳ ಸೇವೆಯನ್ನು 'ಗೋ ಫಸ್ಟ್' ವಿಮಾನಯಾನ ಕಂಪನಿ ರದ್ದುಗೊಳಿಸಿತ್ತು. ನಂತರ ನಂತರ ಅದನ್ನು ಮೇ 9 ರವರೆಗೆ ವಿಸ್ತರಿಸಲಾಗಿತ್ತು. ಇದೀಗ ಮತ್ತೆ ಮೇ 12 ರವರೆಗೆ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ವಿಮಾನಯಾನ ಸಂಸ್ಥೆಯು ಮೇ 15 ರವರೆಗೆ ಟಿಕೆಟ್‌ಗಳ ಮಾರಾಟವನ್ನು ಸ್ಥಗಿತಗೊಳಿಸಿದೆ ಎಂದು ವಿಮಾನಯಾನ ನಿಯಂತ್ರಕ ಡಿಜಿಸಿಎ ಗುರುವಾರ ಹೇಳಿತ್ತು. ಸಂಬಂಧಿತ ನಿಯಮಾವಳಿಗಳಲ್ಲಿ ಪ್ರಯಾಣಿಕರಿಗೆ ಮರುಪಾವತಿ ಪ್ರಕ್ರಿಯೆ ಕೈಗೊಳ್ಳುವಂತೆ ಡಿಜಿಸಿಎ ವಿಮಾನಯಾನ ಸಂಸ್ಥೆಗೆ ನಿರ್ದೇಶನ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


