ಇಂಟೆಲ್ ಇಂಡಿಯಾ ಮುಖ್ಯಸ್ಥೆ ನಿವೃತಿ ರೈ ರಾಜೀನಾಮೆ
ಇಂಟೆಲ್ ಇಂಡಿಯಾ ಮುಖ್ಯಸ್ಥ ನಿವೃತಿ ರೈ ಅವರು 29 ವರ್ಷಗಳ ಸುದೀರ್ಘ ಸೇವೆಯ ನಂತರ ಕಂಪನಿಗೆ ರಾಜೀನಾಮೆ ನೀಡಿದ್ದಾರೆ. ರೈ ಅವರು ಇನ್ವೆಸ್ಟ್ ಇಂಡಿಯಾದ MD ಮತ್ತು CEO ಆಗಿ ನೇಮಕಗೊಳ್ಳಲಿದ್ದಾರೆ.

ನವದೆಹಲಿ: ಇಂಟೆಲ್ ಇಂಡಿಯಾ ಮುಖ್ಯಸ್ಥ ನಿವೃತಿ ರೈ ಅವರು 29 ವರ್ಷಗಳ ಸುದೀರ್ಘ ಸೇವೆಯ ನಂತರ ಕಂಪನಿಗೆ ರಾಜೀನಾಮೆ ನೀಡಿದ್ದಾರೆ. ರೈ ಅವರು ಇನ್ವೆಸ್ಟ್ ಇಂಡಿಯಾದ MD ಮತ್ತು CEO ಆಗಿ ನೇಮಕಗೊಳ್ಳಲಿದ್ದಾರೆ.
1994ರಲ್ಲಿ ವಿನ್ಯಾಸ ಎಂಜಿನಿಯರ್ ಆಗಿ ಇಂಟೆಲ್ ನಲ್ಲಿ ಕೆಲಸ ಆರಂಭಿಸಿದ ನಿವೃತಿ ರೈ ಅವರು ಇತ್ತೀಚಿಗೆ ಇಂಟೆಲ್ ಫೌಂಡ್ರಿ ಸೇವೆಗಳ ಭಾರತದ ಮುಖ್ಯಸ್ಥರಾಗಿ ಮತ್ತು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
"ನಿವೃತಿ ಅವರ ನಾಯಕತ್ವದಲ್ಲಿ ಇಂಟೆಲ್ ಇಂಡಿಯಾ ಸಾಧಿಸಿದ ಅದ್ಭುತ ಪ್ರಗತಿಗಾಗಿ ನಾವು ಅವರಿಗೆ ಕೃತಜ್ಞರಾಗಿರುತ್ತೇವೆ" ಎಂದು ಕಂಪನಿಯು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.
1994 ರಲ್ಲಿ ಇಂಟೆಲ್‌ನಲ್ಲಿ ವಿನ್ಯಾಸ ಎಂಜಿನಿಯರ್ ಆಗಿ ಕೆಲಸ ಆರಂಭಿಸಿದ ನಿವೃತಿ ರೈ ಅವರು 29 ವರ್ಷಗಳ ಅವಧಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ಇಂದು ಕಂಪನಿ ಮುಖ್ಯಸ್ಥೆ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ.
ಮಹಿಳಾ ಸಬಲೀಕರಣಕ್ಕೆ ನೀಡಿದ ಅಸಾಧಾರಣ ಕೊಡುಗೆಯನ್ನು ಗುರುತಿಸಿ 2022ರಲ್ಲಿ ನಿವೃತಿ ರೈ ಅವರಿಗೆ ನಾರಿ ಶಕ್ತಿ ಪುರಸ್ಕಾರವನ್ನು ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


