ವಾಣಿಜ್ಯ

ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಸೆನ್ಸೆಕ್ಸ್: 63,500 ಅಂಕಗಳ ಗಡಿ ದಾಟಿದ ಸಂವೇದಿ ಸೂಚ್ಯಂಕ, ಐಟಿಸಿ ಸೇರಿ 8 ಸಂಸ್ಥೆಗಳ ಷೇರು ಮೌಲ್ಯ ಏರಿಕೆ

ಮಹತ್ವದ ಬೆಳವಣಿಗೆಯಲ್ಲಿ ಇಂದು ಭಾರತೀಯ ಷೇರುಮಾರುಕಟ್ಟೆ ದಿನದ ವಹಿವಾಟು ಆರಂಭದಲ್ಲಿಯೇ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದ್ದು, ಸೆನ್ಸೆಕ್ಸ್ 63,500 ಅಂಕಗಳ ಗಡಿ ದಾಟಿ ವ್ಯವಹಾರ ನಡೆಸುತ್ತಿದೆ.

ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಸೆನ್ಸೆಕ್ಸ್: 63,500 ಅಂಕಗಳ ಗಡಿ ದಾಟಿದ ಸಂವೇದಿ ಸೂಚ್ಯಂಕ, ಐಟಿಸಿ ಸೇರಿ 8 ಸಂಸ್ಥೆಗಳ ಷೇರು ಮೌಲ್ಯ ಏರಿಕೆ
ಭಾರತೀಯ ಷೇರುಮಾರುಕಟ್ಟೆ
Published On :

ಮುಂಬೈ: ಮಹತ್ವದ ಬೆಳವಣಿಗೆಯಲ್ಲಿ ಇಂದು ಭಾರತೀಯ ಷೇರುಮಾರುಕಟ್ಟೆ ದಿನದ ವಹಿವಾಟು ಆರಂಭದಲ್ಲಿಯೇ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದ್ದು, ಸೆನ್ಸೆಕ್ಸ್  63,500 ಅಂಕಗಳ ಗಡಿ ದಾಟಿ ವ್ಯವಹಾರ ನಡೆಸುತ್ತಿದೆ.

ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಬುಧವಾರ (ಜೂನ್‌ 21) ಆರಂಭಿಕ ವಹಿವಾಟಿನಲ್ಲಿ 63,588.31 ಅಂಕಗಳಷ್ಟು ಏರಿಕೆಯೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಬರೊಬ್ಬರಿ 137 ದಿನಗಳ ಬಳಿಕ ಸೆನ್ಸೆಕ್ಸ್ ಗರಿಷ್ಠ ಮಟ್ಟಕ್ಕೇರಿದ್ದು, ಎಚ್‌ ಡಿಎಫ್‌ ಸಿ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳು ಹೆಚ್ಚಿನ ಪ್ರಮಾಣದಲ್ಲಿ ಖರೀದಿಯಾಗಿರುವುದಾಗಿ ವರದಿ ತಿಳಿಸಿದೆ.

ಬಾಂಬೆ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ (ಬಿಎಸ್‌ ಇ) 146 ಅಂಕಗಳಷ್ಟು ಏರಿಕೆಯಾಗಿದ್ದು, 63,588.31 ಅಂಕಗಳಲ್ಲಿ ವಹಿವಾಟು ನಡೆದಿದೆ. ಅದೇ ರೀತಿ ನಿಫ್ಟಿ ಕೂಡಾ 32.10 ಅಂಕಗಳಷ್ಟು ಏರಿಕೆಯೊಂದಿಗೆ 18,848.80 ಅಂಕಗಳಲ್ಲಿ ವಹಿವಾಟು ಮುಂದುವರಿಸಿದೆ.

ಕಳೆದ ವರ್ಷ ಡಿಸೆಂಬರ್‌ 1ರಂದು ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 63,583.07 ಅಂಕಗಳ ಏರಿಕೆಯೊಂದಿಗೆ ದಾಖಲೆ ಮಟ್ಟ ತಲುಪಿತ್ತು. ಸೆನ್ಸೆಕ್ಸ್‌, ನಿಫ್ಟಿ ದಾಖಲೆ ಏರಿಕೆಯಿಂದ ಪವರ್‌ ಗ್ರಿಡ್‌, ಆಲ್ಟ್ರಾ ಟೆಕ್‌ ಸಿಮೆಂಟ್‌, ಎಚ್‌ ಡಿಎಫ್‌ ಸಿ ಬ್ಯಾಂಕ್‌, ವಿಪ್ರೋ, ಎಚ್‌ ಡಿಎಫ್‌ ಸಿ, ಹಿಂದೂಸ್ತಾನ್‌ ಯೂನಿಲಿವರ್‌, ಎಲ್‌ ಟೆಕ್‌ ಮಹೀಂದ್ರ, ಬಜಾಜ್‌ ಫಿನ್‌ ಸರ್ವ್‌, ಟೈಟಾನ್‌, ಟಿಸಿಎಸ್‌ ಮತ್ತು ರಿಲಯನ್ಸ್‌ ಷೇರುಗಳು ಲಾಭಗಳಿಸಿವೆ.

ಮತ್ತೊಂದೆಡೆ ಟಾಟಾ ಸ್ಟೀಲ್‌, ಎನ್‌ ಟಿಪಿಸಿ, ಟಾಟಾ ಮೋಟಾರ್ಸ್‌, ಐಸಿಐಸಿಐ ಬ್ಯಾಂಕ್‌ ಹಾಗೂ ಏಷಿಯನ್‌ ಪೇಂಟ್ಸ್‌ ಷೇರುಗಳು ನಷ್ಟ ಕಂಡಿದೆ. ಸಿಯೋಲ್‌, ಶಾಂಘೈ, ಹಾಂಗ್‌ ಕಾಂಗ್‌ ಷೇರುಪೇಟೆ ಸಾಧಾರಣ ವಹಿವಾಟಿನೊಂದಿಗೆ ಆರಂಭಗೊಂಡಿದೆ.

ಡಿಸೆಂಬರ್ 1 ರಿಂದ 33% ಆದಾಯದೊಂದಿಗೆ, ITC ಅತ್ಯುತ್ತಮ-ಕಾರ್ಯನಿರ್ವಹಣೆಯ ಸೆನ್ಸೆಕ್ಸ್ ಸ್ಟಾಕ್ ಆಗಿದ್ದು, ಹೂಡಿಕೆದಾರರು ಸುಮಾರು 18 ಶತಕೋಟಿ ಡಾಲರ್ ಗಳಷ್ಟು ಶ್ರೀಮಂತರಾಗಿದ್ದಾರೆ. ಟಾಟಾ ಮೋಟಾರ್ಸ್, ನೆಸ್ಲೆ, ಲಾರ್ಸೆನ್ & ಟೂಬ್ರೊ (ಎಲ್ ಅಂಡ್ ಟಿ), ಅಲ್ಟ್ರಾಟೆಕ್ ಸಿಮೆಂಟ್, ಟೈಟಾನ್ ಕಂಪನಿ, ಪವರ್ ಗ್ರಿಡ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಸಂಸ್ಥೆಗಳ ಷೇರುಗಳ ಮೌಲ್ಯ ಗಣನೀಯವಾಗಿ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.