ವಾಣಿಜ್ಯ

500 ರೂ ಮುಖಬೆಲೆಯ ನೋಟುಗಳ ನಾಪತ್ತೆ ಪ್ರಕರಣ: 'ಆಘಾತಕಾರಿ ವರದಿ' ಕುರಿತು RBI ನೀಡಿದ ಸ್ಪಷ್ಟನೆ ಏನು?

500 ರೂ ಮುಖಬೆಲೆಯ ನೋಟು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದ್ದು, ಮಾಧ್ಯಮಗಳ ವರದಿಯನ್ನು 'ತಪ್ಪಾದ ವ್ಯಾಖ್ಯಾನ' ಎಂದು ಹೇಳಿದೆ.

500 ರೂ ಮುಖಬೆಲೆಯ ನೋಟುಗಳ ನಾಪತ್ತೆ ಪ್ರಕರಣ: 'ಆಘಾತಕಾರಿ ವರದಿ' ಕುರಿತು RBI ನೀಡಿದ ಸ್ಪಷ್ಟನೆ ಏನು?
ಆರ್ ಬಿ ಐ
Published On :

ಮುಂಬೈ: 500 ರೂ ಮುಖಬೆಲೆಯ ನೋಟು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದ್ದು, ಮಾಧ್ಯಮಗಳ ವರದಿಯನ್ನು 'ತಪ್ಪಾದ ವ್ಯಾಖ್ಯಾನ' ಎಂದು ಹೇಳಿದೆ.

ದೇಶದಲ್ಲಿ ಪ್ರಸ್ತುತ ಗರಿಷ್ಠ ಮೌಲ್ಯದ ನೋಟಾಗಿ ಉಳಿದಿರುವ 500 ಮುಖಬೆಲೆಯ ಸುಮಾರು 88,032 ಮಿಲಿಯನ್ ನೋಟುಗಳೇ ನಾಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಆರ್ ಟಿಐ ಕಾರ್ಯಕರ್ತರೊಬ್ಬರು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ದೇಶದ ಮೂರು ವಿವಿಧ ನೋಟು ಮುದ್ರಣಾಲಯದಲ್ಲಿ ಮುದ್ರಿಸಲಾದ 500 ರೂ ನೋಟುಗಳ ಸಂಖ್ಯೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಸ್ವೀಕರಿಸಿದ ಸಂಖ್ಯೆಗಳ ನಡುವೆ ಭಾರಿ ವ್ಯತ್ಯಾಸ ಕಂಡು ಬಂದಿದೆ. ಲೆಕ್ಕಕ್ಕೆ ಸಿಗದ ನೋಟುಗಳ ಮೌಲ್ಯ 88,032.5 ಕೋಟಿ ರೂ. ನಷ್ಟಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು.

ಈ ವರದಿ ವೈರಲ್ ಆಗುತ್ತಲೇ ಎಚ್ಚೆತ್ತಿರುವ ಆರ್ ಬಿಐ ಈ ಕುರಿತು ಸ್ಪಷ್ಟನೆ ನೀಡಿದೆ. ನೋಟುಗಳು ನಾಪತ್ತೆಯಾಗಿರುವ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಸರಿಯಲ್ಲ. ಮುದ್ರಣಾಲಯಗಳಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಸಂಗ್ರಹಿಸಿದ ಮಾಹಿತಿಯ ತಪ್ಪಾದ ವ್ಯಾಖ್ಯಾನವನ್ನು ಆಧರಿಸಿ ವರದಿಗಳು ಬಂದಿವೆ ಎಂದು ಆರ್ ಬಿಐ ಹೇಳಿದೆ.

ಅಲ್ಲದೆ "ಈ ವರದಿಗಳು ಪ್ರಿಂಟಿಂಗ್ ಪ್ರೆಸ್‌ಗಳಿಂದ ಮಾಹಿತಿ ಹಕ್ಕು ಕಾಯಿದೆ, 2005 ರ ಅಡಿಯಲ್ಲಿ ಸಂಗ್ರಹಿಸಿದ ಮಾಹಿತಿಯ ತಪ್ಪಾದ ವ್ಯಾಖ್ಯಾನವನ್ನು ಆಧರಿಸಿವೆ. ಅಲ್ಲದೆ ಪ್ರಿಂಟಿಂಗ್ ಪ್ರೆಸ್‌ಗಳಿಂದ ಆರ್‌ಬಿಐಗೆ ಸರಬರಾಜು ಮಾಡಲಾದ ಎಲ್ಲಾ ನೋಟುಗಳನ್ನು ಸರಿಯಾಗಿ ಲೆಕ್ಕ ಹಾಕಲಾಗಿದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.