2022-23ನೇ ಸಾಲಿಗೆ ಇಪಿಎಫ್ ಠೇವಣಿಗೆ ಶೇ.8.15 ಬಡ್ಡಿ ದರ ನಿಗದಿಪಡಿಸಲು ಕೇಂದ್ರ ಸರ್ಕಾರದ ಅನುಮೋದನೆ
2022-23ನೇ ಸಾಲಿನ ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ಠೇವಣಿ ಮೇಲೆ ಒದಗಿಸುವ ಬಡ್ಡಿ ದರವನ್ನು ಶೇ. 8.15ಕ್ಕೆ ನಿಗದಿಪಡಿಸಲು ಸರ್ಕಾರ ಅನುಮೋದಿಸಿದೆ.

ನವದೆಹಲಿ: 2022-23ನೇ ಸಾಲಿನ ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ಠೇವಣಿ ಮೇಲೆ ಒದಗಿಸುವ ಬಡ್ಡಿ ದರವನ್ನು ಶೇ. 8.15ಕ್ಕೆ ನಿಗದಿಪಡಿಸಲು ಸರ್ಕಾರ ಅನುಮೋದಿಸಿದೆ. ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಮಾರ್ಚ್ 28,2023ರಂದು 2022-23ರ ಆರ್ಥಿಕ ವರ್ಷದಲ್ಲಿ ತನ್ನ ಆರು ಕೋಟಿ ಚಂದಾದಾರರಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ. 8.15ಕ್ಕೆ ಹೆಚ್ಚಿಸಿತ್ತು.
ಸೋಮವಾರ ಹೊರಡಿಸಿದ ಸರ್ಕಾರದ ಅಧಿಕೃತ ಆದೇಶದ ಪ್ರಕಾರ, 2022-23ರ ಇಪಿಎಫ್‌ನಲ್ಲಿ ಶೇಕಡಾ 8.15 ರ ಬಡ್ಡಿಯನ್ನು ಸದಸ್ಯರ ಖಾತೆಗಳಿಗೆ ಜಮಾ ಮಾಡಲು ಇಪಿಎಫ್‌ಒ ಕಚೇರಿಗಳಿಗೆ ಹೇಳಿದೆ. ಈ ವರ್ಷದ ಮಾರ್ಚ್‌ನಲ್ಲಿ ಇಪಿಎಫ್‌ಒ ಟ್ರಸ್ಟಿಗಳು ಅನುಮೋದಿಸಿದ ಇಪಿಎಫ್ ಬಡ್ಡಿ ದರಕ್ಕೆ ಹಣಕಾಸು ಸಚಿವಾಲಯ ಒಪ್ಪಿಗೆ ನೀಡಿದ ನಂತರ ಈ ಆದೇಶ ಬಂದಿದೆ.
ಈ ಇಪಿಎಫ್ ಒ ಕ್ಷೇತ್ರ ಕಚೇರಿಗಳು ಚಂದಾದಾರರ ಖಾತೆಗಳಿಗೆ ಜಮೆ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತವೆ. ಮಾರ್ಚ್ 2022 ರಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2021-22 ರ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇಕಡಾ 8.5 ರಿಂದ ಶೇಕಡಾ 8.10 ಕ್ಕೆ ಇಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


