ಶಾರ್ಟ್ ಸೆಲ್ಲರ್ ವಿವಾದದ ನಡುವೆ ಎಫ್ ಪಿಒ ಮುಂದುವರೆಸಲು ಅದಾನಿ ನಿರ್ಧಾರ
ಬಿಲಿಯನೇರ್ ಗೌತಮ್ ಅದಾನಿ ಸಮೂಹ ರೂ.20,000 ಕೋಟಿ ರೂಗಳ ಫಾಲೋ ಆನ್ ಷೇರುಗಳ ಮಾರಾಟದ ಬೆಲೆ ಹಾಗೂ ದಿನಾಂಕದಲ್ಲಿ ಯಾವುದೇ ಬದಲಾವಣೆಯನ್ನೂ ನಿರಾಕರಿಸಿದೆ.

ಮುಂಬೈ: ಬಿಲಿಯನೇರ್ ಗೌತಮ್ ಅದಾನಿ ಸಮೂಹ ರೂ.20,000 ಕೋಟಿ ರೂಗಳ ಫಾಲೋ ಆನ್ ಷೇರುಗಳ ಮಾರಾಟದ ಬೆಲೆ ಹಾಗೂ ದಿನಾಂಕದಲ್ಲಿ ಯಾವುದೇ ಬದಲಾವಣೆಯನ್ನೂ ನಿರಾಕರಿಸಿದೆ. ಅಮೇರಿಕದ ಶಾರ್ಟ್ ಸೆಲ್ಲರ್ ಅದಾನಿ ಸಮೂಹದ ಬಗ್ಗೆ ವರದಿ ಪ್ರಕಟಿಸಿದ ಬೆನ್ನಲ್ಲೇ ಅದಾನಿ ಸಮೂಹದ ಷೇರುಗಳು ತೀವ್ರ ಕುಸಿತ ಕಂಡಿತ್ತು.
ಅದಾನಿ ಎಂಟರ್ ಪ್ರೈಸಸ್ ಲಿಮಿಟೆಡ್ ನ ಫ್ಯೂಚರ್ ಪಬ್ಲಿಕ್ ಆಫರ್ (ಎಫ್ ಪಿಒ) ನಿಗದಿಯಂತೆಯೇ ಮಾರುಕಟ್ಟೆ ಪ್ರವೇಶಿಸಲಿದೆ. ಬೆಲೆ ಅಥವಾ ದಿನಾಂಕದಲ್ಲಿ ಯಾವುದೇ ಬದಲಾವಣೆಗಳೂ ಇಲ್ಲ ಎಂದು ಸಮೂಹದ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಇಳಿದ ಗೌತಮ್ ಅದಾನಿ: ಆಸ್ತಿ ಮೌಲ್ಯ 18 ಶತಕೋಟಿ ಡಾಲರ್ ಗೆ ಕುಸಿತ
ಎಫ್ ಪಿಒ 4.55 ಕೋಟಿ ಷೇರುಗಳ ಪೈಕಿ ಶುಕ್ರವಾರದಂದು ಶೇ.1 ರಷ್ಟು (4.7 ಲಕ್ಷ ಷೇರುಗಳು) ಚಂದಾದಾರರನ್ನು ಪಡೆದಿತ್ತು ಎಂಬ ಮಾಹಿತಿ ಬಿಎಸ್ ಇ ಮೂಲಕ ತಿಳಿದುಬಂದಿದೆ. ಹಿಂಡನ್ ಬರ್ಗ್ ನ ವರದಿಯ ನಂತರ ಅದಾನಿ ಎಂಟರ್ ಪ್ರೈಸಸ್ ತನ್ನ ಸೆಕೆಂಡರಿ ಸೇಲ್ ನ ಆಫರ್ ಪ್ರೈಸ್ ಗಿಂತಲೂ ಶೇ.20 ರಷ್ಟು ಕುಸಿತ ಕಂಡಿತ್ತು, ಹಿಂಡನ್ ಬರ್ಗ್ ವರದಿಯನ್ನು ಅದಾನಿ ಸಮೂಹ ತಿರಸ್ಕರಿಸಿದ್ದು ಇದು ಬೋಗಸ್ ವರದಿ ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


