ಭಾರತ ತೊರೆದ ಅಲಿಬಾಬ; ಪೇಟಿಎಂ ನಲ್ಲಿದ್ದ ಪಾಲು ಪೂರ್ಣ ಮಾರಾಟ
ಪೇಟಿಎಂ ನಲ್ಲಿದ್ದ ಪಾಲುದಾರಿಕೆಯನ್ನು ಪೂರ್ಣವಾಗಿ ಮಾರಾಟ ಮಾಡಿರುವ ಅಲಿಬಾಬ ಸಂಸ್ಥೆ ಈ ವ್ಯವಹಾರದಲ್ಲಿ ಭಾರತವನ್ನು ತೊರೆದಿದೆ.

ಮುಂಬೈ: ಪೇಟಿಎಂ ನಲ್ಲಿದ್ದ ಪಾಲುದಾರಿಕೆಯನ್ನು ಪೂರ್ಣವಾಗಿ ಮಾರಾಟ ಮಾಡಿರುವ ಅಲಿಬಾಬ ಸಂಸ್ಥೆ ಈ ವ್ಯವಹಾರದಲ್ಲಿ ಭಾರತವನ್ನು ತೊರೆದಿದೆ.
ಪೇಟಿಎಂ ನ ಮಾತೃ ಸಂಸ್ಥೆ ಒನ್97 ಕಮ್ಯುನಿಕೇಶನ್ಸ್ ಲಿಮಿಟೆಡ್ (ಒಸಿಎಲ್) ನಲ್ಲಿನ ಶೇ.3.3 ರಷ್ಟು ಈಕ್ವಿಟಿ ಅಥವಾ 2.14 ಕೋಟಿ ಷೇರುಗಳನ್ನು ಮಾರಾಟ ಮಾಡಿ ಬ್ಲಾಕ್ ಡೀಲ್ ನಲ್ಲಿ ಸಂಪೂರ್ಣ ಪಾಲನ್ನು ಮಾರಾಟ ಮಾಡಿದೆ ಹಾಗೂ ಇನ್ನು ಮುಂದೆ ಅಲಿಬಾಬ ಪೇಟಿಎಂ ನ ಭಾಗವಾಗಿರುವುದಿಲ್ಲ. ಇದರ ಮೊತ್ತ ಸುಮಾರು 1,380 ಕೋಟಿ ರೂ. ಆಗಿರಬಹುದು.
ಇದಕ್ಕೂ ಮುನ್ನ ಸಂಸ್ಥೆ ಜನವರಿಯಲ್ಲಿ ತನ್ನ 6.26 ರಷ್ಟು ಈಕ್ವಿಟಿಯ ಪೈಕಿ ಶೇ.3.1 ರಷ್ಟು ಈಕ್ವಿಟಿಯನ್ನು ಮಾರಾಟ ಮಾಡಿತ್ತು. ಅಲಿಬಾಬ ಈಗಾಗಲೇ ಜೊಮ್ಯಾಟೋ ಹಾಗೂ ಬಿಗ್ ಬ್ಯಾಸ್ಕೆಟ್ ಗಳಲ್ಲಿಯೂ ತನ್ನ ಪಾಲುದಾರಿಕೆಯನ್ನು ಮಾರಾಟ ಮಾಡಿರುವುದರಿಂದ, ಇತ್ತೀಚಿನ ಡೀಲ್ ನ್ನು ಅಲಿಬಾಬಾ ಭಾರತ ತೊರೆದಿರುವ ಡೀಲ್ ಎಂದೇ ವಿಶ್ಲೆಷಿಸಲಾಗುತ್ತಿದೆ.
ಪೇಟಿಎಂ ನಲ್ಲಿ ಚೀನಾ ಪಾಲುದಾರಿಕೆ ಕೊನೆಗೊಂಡಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
2023 ನೇ ಆರ್ಥಿಕ ವರ್ಷದ 3 ನೇ ತ್ರೈಮಾಸಿಕದಲ್ಲಿ ಕಾರ್ಯಾಚರಣೆಯ ಲಾಭವನ್ನು ಘೋಷಿಸಿದ ಬಳಿಕ ಪೇಟಿಎಂ ನ ಷೇರುಗಳು ಏರಿಕೆ ಕಂಡಿತ್ತು. ಫಿನ್ ಟೆಕ್ ದೈತ್ಯ ಸಂಸ್ಥೆಯ ಆದಾಯ 2,062 ಕೋಟಿ ರೂಪಾಯಿನಷ್ಟು ಏರಿಕೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡದರೆ ಶೇ.42 ರಷ್ಟು ಏರಿಕೆ ಕಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


