ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರ ಏರಿಕೆ: ಎಷ್ಟಿದೆ? ಇಲ್ಲಿದೆ ಮಾಹಿತಿ
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್ ವೈ) ಯೋಜನೆಯ ಬಡ್ಡಿ ದರವನ್ನು ಏರಿಕೆ ಮಾಡಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್ ವೈ) ಯೋಜನೆಯ ಬಡ್ಡಿ ದರವನ್ನು ಏರಿಕೆ ಮಾಡಿದೆ.
ಹಣಕಾಸು ಸಚಿವಾಲಯದ ಸುತ್ತೋಲೆಯ ಪ್ರಕಾರ, ಸುಕನ್ಯಾ ಸಮೃದ್ಧಿ ಯೋಜನೆಯ ಠೇವಣಿಗೆ ಶೇ.8.2 ರಷ್ಟು ಬಡ್ಡಿ ದರ ಇರಲಿದೆ. ಈ ಹಿಂದೆ ಶೇ.8 ರಷ್ಟು ಬಡ್ಡಿ ನೀಡಲಾಗುತ್ತಿತ್ತು.
ಮುಖ್ಯವಾಗಿ ಅಂಚೆ ಕಚೇರಿಗಳಿಂದ ನಿರ್ವಹಿಸಲ್ಪಡುವ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಸರ್ಕಾರವು ಪ್ರತಿ ತ್ರೈಮಾಸಿಕದಲ್ಲಿ ತಿಳಿಸುತ್ತದೆ.
ಎಸ್ಎಸ್ ವೈ ನ ಪ್ರಯೋಜನಗಳು
- ಸರ್ಕಾರಿ ಬೆಂಬಲಿತ ಯೋಜನೆ ಇದಾಗಿದ್ದು, ಖಾತರಿ ಆದಾಯವನ್ನು ನೀಡುತ್ತದೆ.
- ಎಸ್ಎಸ್ ವೈ ಖಾತೆಯಡಿಯಲ್ಲಿ 1.50 ಲಕ್ಷ ರೂಪಾಯಿಗಳವರೆಗಿನ ಹೂಡಿಕೆಗೆ ತೆರಿಗೆ ವಿನಾಯಿತಿಯನ್ನು ಐಟಿ ಕಾಯ್ದೆಯ 80 ಸಿ ಅಡಿಯಲ್ಲಿ ಪಡೆಯಬಹುದಾಗಿದೆ.
- ಸುಕನ್ಯಾ ಸಮೃದ್ಧಿ ಯೋಜನೆಯಡಿ ಇಡಲಾದ ಬಡ್ಡಿ ತೆರಿಗೆ ಮುಕ್ತವಾಗಿರಲಿದೆ.
- ಸುಕನ್ಯಾ ಸಮೃದ್ಧಿ ಯೋಜನೆಯಡಿ ಒಂದು ಖಾತೆಗೆ ಒಂದು ವರ್ಷಕ್ಕೆ ಕನಿಷ್ಠ 250 ರೂಪಾಯಿಗಳಿಂದ ಗರಿಷ್ಠ 1.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬಹುದಾಗಿದೆ.
- ಸುಕನ್ಯಾ ಸಮೃದ್ಧಿ ಖಾತೆಯಿಂದ ಹಿಂತೆಗೆತ ಹಾಗೂ ಮೆಚ್ಯುರಿಟಿ ನಿಯಮಗಳು ಇಂತಿವೆ.
- ಹೆಣ್ಣುಮಗುವೊಂದು 18 ವರ್ಷ ದಾಟುತ್ತಿದ್ದಂತೆಯೇ ಆ ಮಗುವಿನ ಪೋಷಕರು ಆರ್ಥಿಕ ವರ್ಷದಲ್ಲಿ ಉಳಿದಿರುವ ಶೇ.50 ರಷ್ಟು ಹಣವನ್ನು ಖಾತೆಯಿಂದ ತೆಗೆಯಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


