ಇನ್ಫೋಸಿಸ್ ಬ್ರಾಂಡ್ ಅಂಬಾಸಿಡರ್ ಆಗಿ ರಾಫೆಲ್ ನಡಾಲ್ ನೇಮಕ
ದೇಶದ ಎರಡನೇ ಅತಿ ದೊಡ್ಡ ಐಟಿ ಸೇವಾ ರಫ್ತು ಕಂಪನಿ ಇನ್ಫೋಸಿಸ್ ಗುರುವಾರ ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಅವರನ್ನು ತನ್ನ ಬ್ರಾಂಡ್ ಮತ್ತು ಇನ್ಫೋಸಿಸ್ನ ಡಿಜಿಟಲ್ ಇನ್ನೋವೇಶನ್‌ನ ರಾಯಭಾರಿಯಾಗಿ ನೇಮಕ ಮಾಡಿದೆ.

ಬೆಂಗಳೂರು: ದೇಶದ ಎರಡನೇ ಅತಿ ದೊಡ್ಡ ಐಟಿ ಸೇವಾ ರಫ್ತು ಕಂಪನಿ ಇನ್ಫೋಸಿಸ್ ಗುರುವಾರ ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಅವರನ್ನು ತನ್ನ ಬ್ರಾಂಡ್ ಮತ್ತು ಇನ್ಫೋಸಿಸ್ನ ಡಿಜಿಟಲ್ ಇನ್ನೋವೇಶನ್‌ನ ರಾಯಭಾರಿಯಾಗಿ ನೇಮಕ ಮಾಡಿದೆ.
ರಾಫೆಲ್ ನಡಾಲ್ ಅವರೊಂದಿಗೆ ಮೂರು ವರ್ಷಗಳ ಅವಧಿಗೆ ಒಡಂಬಡಿಕೆ ಮಾಡಿಕೊಂಡಿದೆ. ಡಿಜಿಟಲ್ ಸೇವೆಗಳ ಕಂಪನಿಯೊಂದಿಗೆ ನಡಾಲ್ ಅವರ ಈ ಮೊದಲ ಸಹಯೋಗವನ್ನು ಗುರುತಿಸಲು, ಇನ್ಫೋಸಿಸ್ ಮತ್ತು ನಡಾಲ್ ಅವರ ಕೋಚಿಂಗ್ ತಂಡ AI- ಚಾಲಿತ ಪಂದ್ಯ ವಿಶ್ಲೇಷಣಾ ಸಾಧನ ಅಭಿವೃದ್ಧಿಪಡಿಸುತ್ತಿದೆ ಎಂದು ಕಂಪನಿಯ ಬೆಂಗಳೂರಿನ ಪ್ರಧಾನ ಕಚೇರಿಯ ಪ್ರಕಟಣೆ ತಿಳಿಸಿದೆ.
ಇನ್ಫೋಸಿಸ್‌ನೊಂದಿಗೆ ನಿಕಟವಾಗಿ ಕೆಲಸ ಮಾಡಲು ನನಗೆ ತುಂಬಾ ಸಂತೋಷವಾಗುತ್ತಿದೆ, ಏಕೆಂದರೆ ಅವರು ಟೆನ್ನಿಸ್ ಅನುಭವವನ್ನು ವಿಕಸನಗೊಳಿಸಲು ಮಾತ್ರವಲ್ಲದೆ ಟೆನಿಸ್ ಲೋಕದ ಜನ, ಉಜ್ವಲ ಭವಿಷ್ಯದ ಭಾಗವಾಗಲು ಸಶಕ್ತಗೊಳಿಸುತ್ತಾರೆ. ಇನ್ಫೋಸಿಸ್ ತನ್ನ ಡಿಜಿಟಲ್ ಪರಿಣತಿಯನ್ನು ಜಾಗತಿಕ ಟೆನಿಸ್ ಪರಿಸರ ವ್ಯವಸ್ಥೆಗೆ ತಂದ ರೀತಿಯನ್ನು ನಾನು ಇಷ್ಟಪಡುತ್ತೇನೆ ಎಂದು ರಾಫೆಲ್ ನಡಾಲ್ ಹೇಳಿದ್ದಾರೆ.
ವಿಶ್ವದ ಅತ್ಯಂತ ಗೌರವಾನ್ವಿತ ಚಾಂಪಿಯನ್ ಅಥ್ಲೀಟ್‌ಗಳಲ್ಲಿ ಒಬ್ಬರಾದ ನಡಾಲ್ ಅವರನ್ನು ಇನ್ಫೋಸಿಸ್‌ನ ರಾಯಭಾರಿಯಾಗಿ ಸ್ವಾಗತಿಸಲು ಇದು ಗೌರವವಾಗಿದೆ ಎಂದು ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಲೀಲ್ ಪರೇಖ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


