ಫೆಬ್ರವರಿ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆ ಶೇ.5.6 ಕ್ಕೆ ಅಲ್ಪ ಏರಿಕೆ
ಫೆಬ್ರವರಿ ತಿಂಗಳಲ್ಲಿ ದೇಶದ ಕೈಗಾರಿಕಾ ಉತ್ಪಾದನೆ ಶೇ.5.6 ಕ್ಕೆ ಅಲ್ಪ ಏರಿಕೆ ಕಂಡಿದೆ.

ನವದೆಹಲಿ: ಫೆಬ್ರವರಿ ತಿಂಗಳಲ್ಲಿ ದೇಶದ ಕೈಗಾರಿಕಾ ಉತ್ಪಾದನೆ ಶೇ.5.6 ಕ್ಕೆ ಅಲ್ಪ ಏರಿಕೆ ಕಂಡಿದೆ. ಜನವರಿಯಲ್ಲಿ 2023 ರಲ್ಲಿ ಶೇ.5.5 ರಷ್ಟಿದ್ದ ಕೈಗಾರಿಕ ಉತ್ಪಾದನೆ ಫೆಬ್ರವರಿಯಲ್ಲಿ ಶೇ.5.6ಕ್ಕೆ ಏರಿಕೆ ಕಂಡಿದೆ.
ಬುಧವಾರ ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳ ಪ್ರಕಾರ ಮುಖ್ಯವಾಗಿ ವಿದ್ಯುತ್, ಗಣಿಗಾರಿಕೆ ಮತ್ತು ಉತ್ಪಾದನಾ ವಲಯಗಳ ಉತ್ತಮ ಕಾರ್ಯಕ್ಷಮತೆಯಿಂದಾಗಿ ಕೈಗಾರಿಕಾ ಉತ್ಪಾದನೆ ಏರಿಕೆ ಕಂಡಿದೆ.
ವಾರ್ಷಿಕ ಹಾಗೂ ಅನುಕ್ರಮದ ಆಧಾರದ ಮೇಲೆ ಸುಧಾರಣೆ ಕಂಡುಬಂದಿದೆ. ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (ಐಐಪಿ) ಆಧಾರದ ಮೇಲೆ ಫ್ಯಾಕ್ಟರಿ ಔಟ್ ಪುಟ್ ನ್ನು ಅಳೆಯಲಾಗುತ್ತದೆ ಇದು ಫೆಬ್ರವರಿಯಲ್ಲಿ ಶೇ.1.2 ರಷ್ಟಿತ್ತು.
ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್ಎಸ್ಒ) ಪ್ರಕಾರ, ಉತ್ಪಾದನಾ ವಲಯದಲ್ಲಿ ಉತ್ಪತ್ತಿ ಶೇ.5.3 ರಷ್ಟು ಬೆಳವಣಿಗೆಯಾಗಿದ್ದು, ಕಳೆದ ವರ್ಷದ ಫೆಬ್ರವರಿಯಲ್ಲಿ ಶೇ. 0.2 ರಷ್ಟು ಬೆಳವಣಿಗೆ ಇತ್ತು.
ಗಣಿಗಾರಿಕೆಯ ಉತ್ಪಾದನೆಯ ಬೆಳವಣಿಗೆಯು ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ ಪರಿಶೀಲನೆಯ ತಿಂಗಳಿನಲ್ಲಿ ಶೇ.4.6 ರಲ್ಲಿ ಸ್ಥಿರವಾಗಿದೆ. ವಿದ್ಯುತ್ ಉತ್ಪಾದನೆಯು ಫೆಬ್ರವರಿ 2023 ರಲ್ಲಿ ಶೇ. 4.5 ರಿಂದ ಶೇ. 8.2 ರಷ್ಟು ಏರಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


