ಆಗಸ್ಟ್ ನಲ್ಲಿ ಸಗಟು ಹಣದುಬ್ಬರ ಶೇ.12.41 ಕ್ಕೆ ಇಳಿಕೆ
ಸತತ ಮೂರನೇ ತಿಂಗಳು ಆಗಸ್ಟ್ ನಲ್ಲಿ ಸಗಟು ಹಣದುಬ್ಬರ ಶೇ.12.41 ಕ್ಕೆ ಇಳಿಕೆಯಾಗಿದೆ.

ನವದೆಹಲಿ: ಸತತ ಮೂರನೇ ತಿಂಗಳು ಆಗಸ್ಟ್ ನಲ್ಲಿ ಸಗಟು ಹಣದುಬ್ಬರ ಶೇ.12.41 ಕ್ಕೆ ಇಳಿಕೆಯಾಗಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆ ಕಂಡು, ಉತ್ಪಾದಿತ ಉತ್ಪನ್ನಗಳ ಬೆಲೆಯಲ್ಲಿ ಕಡಿಮೆಯಾಗಿದ್ದರ ನಡುವೆ ಸಗಟು ಹಣದುಬ್ಬರ ಕಡಿಮೆಯಾಗಿದೆ.
ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಕಳೆದ ವರ್ಷ ಜುಲೈ ತಿಂಗಳಲ್ಲಿ ಶೇ.13.93 ಹಾಗೂ ಆಗಸ್ಟ್ ನಲ್ಲಿ ಶೇ.11.64 ರಷ್ಟಿತ್ತು.
ಈ ಆಗಸ್ಟ್ ತಿಂಗಳದ್ದೂ ಸೇರಿ ಸತತ 17 ನೇ ತಿಂಗಳು ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ 2 ಅಂಕಿಗಳಷ್ಟಿದೆ. ಈ ವರ್ಷ ಮೇ ತಿಂಗಳಲ್ಲಿ ಡಬ್ಲ್ಯುಪಿಐ ಹಣದುಬ್ಬರ ಶೇ.15.88 ರಷ್ಟಿತ್ತು.
ಜುಲೈ ನಲ್ಲಿ ಶೇ.10.77 ರಷ್ಟಿದ್ದ ಆಹಾರ ಪದಾರ್ಥಗಳ ಹಣದುಬ್ಬರ ಆಗಸ್ಟ್ ನಲ್ಲಿ ಶೇ.12.37 ರಷ್ಟಿತ್ತು. ಪ್ರಸಕ್ತ ತಿಂಗಳಲ್ಲಿ ತರಕಾರಿಯ ಬೆಲೆ ಶೇ.22.29 ರಷ್ಟು ಏರಿಕೆಯಾಗಿದ್ದು, ಜುಲೈ ನಲ್ಲಿ ಶೇ.18.25 ರಷ್ಟಿತ್ತು.
ಕೇಂದ್ರ ಬ್ಯಾಂಕ್ ನ ಪ್ರಕ್ಷೇಪಗಳ ಪ್ರಕಾರ 2022-23 ರಲ್ಲಿ ಹಣದುಬ್ಬರ ಸರಾಸರಿ ಶೇ.6.7 ರಷ್ಟಿರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


