ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ನುಚ್ಚಕ್ಕಿ ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರ!
ಮಹತ್ವದ ಬೆಳಣಿಗೆಯಲ್ಲಿ ಕೇಂದ್ರ ಸರ್ಕಾರ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ನುಚ್ಚಕ್ಕಿ ರಫ್ತನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ನವದೆಹಲಿ: ಮಹತ್ವದ ಬೆಳಣಿಗೆಯಲ್ಲಿ ಕೇಂದ್ರ ಸರ್ಕಾರ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ನುಚ್ಚಕ್ಕಿ ರಫ್ತನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಈ ಹಿಂದೆ ನುಚ್ಚಕ್ಕಿ ರಫ್ತು ದೇಶದಲ್ಲಿ ಮುಕ್ತವಾಗಿತ್ತು. ಆದರೆ ಇದೀಗ ರಫ್ತು ನೀತಿಯನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದ್ದು, ನುಚ್ಚಕ್ಕಿಯನ್ನು 'ಮುಕ್ತ' ಪಟ್ಟಿಯಿಂದ ತೆಗೆದು "ನಿಷೇಧಿತ" ವಸ್ತುಗಳ ಪಟ್ಟಿಗೆ ಸೇರಿಸಿದೆ.
ಆದಾಗ್ಯೂ, ಕೆಲವು ರಫ್ತುಗಳಿಗೆ ಸೆಪ್ಟೆಂಬರ್ 15 ರವರೆಗೆ ಅವಕಾಶವಿರುತ್ತದೆ, ಈ ನಿಷೇಧದ ಆದೇಶದ ಮೊದಲು ಹಡಗಿನಲ್ಲಿ ನುಚ್ಚಕ್ಕಿಯನ್ನು ಲೋಡ್ ಮಾಡುವ ಸ್ಥಳ, ಶಿಪ್ಪಿಂಗ್ ಬಿಲ್ ಸಲ್ಲಿಸಿದ ಸ್ಥಳ ಮತ್ತು ಹಡಗುಗಳು ಈಗಾಗಲೇ ಭಾರತೀಯ ಬಂದರುಗಳಲ್ಲಿ ಆಗಮಿಸಿ ಲಂಗರು ಹಾಕಿದೆ. ಅವುಗಳ ಓಡಾಟದ ಸಂಖ್ಯೆಯನ್ನು ನಿಗದಿಪಡಿಸಿ ನುಚ್ಚಕ್ಕಿ ರವಾನೆಯನ್ನು ಸುಂಕದವರಿಗೆ ಹಸ್ತಾಂತರಿಸಲಾಗಿದೆ ಮತ್ತು ಅವರ ವ್ಯವಸ್ಥೆಯಲ್ಲಿ ನೋಂದಾಯಿಸಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಮೇ ತಿಂಗಳಲ್ಲಿ ಭಾರತದ ರಫ್ತು ಶೇ.20.55 ರಷ್ಟು ಏರಿಕೆ
ಈ ಖಾರಿಫ್ ಋತುವಿನಲ್ಲಿ ಒಟ್ಟಾರೆ ಭತ್ತದ ಬಿತ್ತನೆ ಪ್ರದೇಶವು ಕಳೆದ ವರ್ಷಕ್ಕಿಂತ ಕಡಿಮೆಯಿರಬಹುದು ಎಂದು ತೋರುತ್ತಿರುವುದರಿಂದ ರಫ್ತು ನಿಷೇಧವು ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಇದು ಬೆಳೆ ನಿರೀಕ್ಷೆಗಳು ಹಾಗೂ ಮುಂದೆ ಹೋಗುವ ಬೆಲೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ನುಚ್ಚಕ್ಕಿಗೆ ಸೌದಿ, ಯುಎಇ ಸೇರಿದಂತೆ ಹಲವು ಅರಬ್ ರಾಷ್ಟ್ರಗಳು, ಯೂರೋಪಿನ ಹಲವು ರಾಷ್ಟ್ರಗಳಲ್ಲಿ ಬೇಡಿಕೆ ಇದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


