ಪೇಟಿಎಂ ಷೇರು ಶೇ.11 ರಷ್ಟು ಕುಸಿತ!
ಪೇಟಿಎಂ ನ ಷೇರುಗಳು ಮಂಗಳವಾರದಂದು ಶೇ.11 ಕ್ಕಿಂತಲೂ ಹೆಚ್ಚಿನ ಕುಸಿತ ಕಂಡಿದೆ.

ಮುಂಬೈ: ಪೇಟಿಎಂ ನ ಷೇರುಗಳು ಮಂಗಳವಾರದಂದು ಶೇ.11 ಕ್ಕಿಂತಲೂ ಹೆಚ್ಚಿನ ಕುಸಿತ ಕಂಡಿದೆ.
475.55 ರೂಪಾಯಿಗಳಿಗೆ ಷೇರುಗಳು ಕುಸಿತ ಕಂಡಿದ್ದು, ಬೆಳಿಗ್ಗೆ ಎನ್ಎಸ್ಇಯಲ್ಲಿ ಷೇರುಗಳ ಮೌಲ್ಯ 474.30 ರೂಪಾಯಿಗಳಿಗೆ ಕುಸಿತ ಕಂಡಿತ್ತು ಎಂದು ಜಾಗತಿಕ ಬ್ರೋಕರೇಜ್ ಸಂಸ್ಥೆ ಮ್ಯಾಕ್ವಾರಿ ವರದಿ ಪ್ರಕಟಿಸಿದೆ.
ಮುಖೇಶ್ ಅಂಬಾನಿ ಅವರ ಜಿಯೋ ಫೈನಾನ್ಷಿಯಲ್ ಸೇವೆಗಳ ಪ್ರವೇಶದಿಂದ ಪೇಟಿಎಂ ಗೆ ಪ್ರಬಲ ಪೈಪೋಟಿ ಎದುರಾಗಲಿದೆ ಎಂದು ಮ್ಯಾಕ್ವಾರಿ ವಿಶ್ಲೇಷಿಸಿದೆ.
2021 ರ ನವೆಂಬರ್ ನಲ್ಲಿ ಐಪಿಒ ಪ್ರವೇಶಿಸಿದ್ದಾಗ ಮ್ಯಾಕ್ವಾರಿ, ಪೇಟಿಎಂ ನ ಪ್ರಾರಂಭಿಕ ಷೇರುಗಳ ಕುಸಿತವನ್ನು ಅಂದಾಜಿಸಿತ್ತು. ಅಷ್ಟೇ ಅಲ್ಲದೇ ನಿಖರವಾದ ಗ್ರಾಹಕ ವಿಭಾಗಗಳು ಮತ್ತು ಮಾರುಕಟ್ಟೆಗಳನ್ನು ಪೂರೈಸಲು JFC ಯಾವೆಲ್ಲಾ ಯೋಜನೆಗಳನ್ನು ಹೊಂದಿದೆ ಎಂಬುದನ್ನು ಅಂದಾಜಿಸುವುದು ಕಷ್ಟವಾಗಿದ್ದರೂ ಬಜಾಜ್ ಫೈನಾನ್ಸ್ ಹಾಗೂ ಪೇಟಿಎಂ ನಂತಹ ಫಿನ್ ಟೆಕ್ ಗಳ ಮಾದರಿಯಲ್ಲಿ ಗ್ರಾಹಕ ಮತ್ತು ವ್ಯಾಪಾರಿ ಸಾಲದ ಬಗ್ಗೆ ಹೆಚ್ಚು ಗಮನ ಹರಿಸಬಹುದು ಎಂದು ಹೇಳಿತ್ತು.
ನಿವ್ವಳ ಮೌಲ್ಯದ ದೃಷ್ಟಿಯಿಂದ ಜಿಎಫ್ಎಸ್ ದೇಶದ 5 ನೇ ದೊಡ್ಡ ಆರ್ಥಿಕ ಸೇವೆಗಳನ್ನು ಒದಗಿಸುವ ಸಂಸ್ಥೆಯಾಗಲಿದೆ. ಇತ್ತ ಪೇಟಿಎಂ ನ ಷೇರು ಬೆಲೆ ಐಪಿಒ ನ ಬೆಲೆ 2,150ಕ್ಕಿಂತ ಶೇ.79 ರಷ್ಟು ಕುಸಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


