ಜೊಮ್ಯಾಟೊ ಸಹ ಸಂಸ್ಥಾಪಕ ಮೋಹಿತ್ ಗುಪ್ತಾ ರಾಜೀನಾಮೆ
ಆ್ಯಪ್ ಆಧಾರಿತ ಖ್ಯಾತ ಆನ್‌ಲೈನ್ ಆಹಾರ ವಿತರಣಾ ಕಂಪನಿ ಜೊಮ್ಯಾಟೊ ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ಶುಕ್ರವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ನವದೆಹಲಿ: ಆ್ಯಪ್ ಆಧಾರಿತ ಖ್ಯಾತ ಆನ್‌ಲೈನ್ ಆಹಾರ ವಿತರಣಾ ಕಂಪನಿ ಜೊಮ್ಯಾಟೊ ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ಶುಕ್ರವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ನಾಲ್ಕೂವರೆ ವರ್ಷಗಳ ಹಿಂದೆ ಜೊಮ್ಯಾಟೊಗೆ ಸೇರಿದ್ದ ಗುಪ್ತಾ, ಅದರ ಆಹಾರ ವಿತರಣಾ ವ್ಯವಹಾರದ ಸಿಇಒ ಸ್ಥಾನದಿಂದ 2020ರಲ್ಲಿ ಸಹ-ಸಂಸ್ಥಾಪಕರಾಗಿ ಬಡ್ತಿ ಪಡೆದಿದ್ದರು.
ಜೊಮ್ಯಾಟೊಗೆ ಕಳುಹಿಸಲಾದ ಸಂದೇಶದಲ್ಲಿ ಗುಪ್ತಾ ಅವರು, "ಜೀವನದಲ್ಲಿ ಇತರೆ ಅಪರಿಚಿತ ಸಾಹಸಗಳನ್ನು ಹುಡುಕುತ್ತಾ ಜೊಮ್ಯಾಟೊ ಬಿಟ್ಟು ಹೋಗಲು ನಿರ್ಧರಿಸಿರುವುದಾಗಿ" ತಿಳಿಸಿದ್ದಾರೆ.
ಕಂಪನಿ ಕಾಯಿದೆ, 2013 ಮತ್ತು ಪಟ್ಟಿ ಮಾಡುವ ನಿಯಮಗಳ ಅಡಿಯಲ್ಲಿ ಗುಪ್ತಾ ಅವರನ್ನು ಪ್ರಮುಖ ವ್ಯವಸ್ಥಾಪಕರಾಗಿ ನೇಮಿಸಿರಲಿಲ್ಲ ಎಂದು ಜೊಮ್ಯಾಟೊ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


