ವಾಣಿಜ್ಯ

ಹಬ್ಬಕ್ಕಾಗಿ ಎಫ್‍ಟಿಹೆಚ್ ಡೇಲಿಯಿಂದ ಪೂಜಾ ಸ್ಟೋರ್ ಆರಂಭ

ಹಬ್ಬದ ಆಚರಣೆಗೆ ಅಗತ್ಯವಾದ ಹೂವು, ಹಣ್ಣು, ಮಾವಿನ ಎಲೆ, ಅಗರಬತ್ತಿ, ಕರ್ಪೂರ, ಬಾಳೆ ಎಲೆ, ಮುಂತಾದ ಹಲವು ವಸ್ತುಗಳು ಪೂಜಾ ಸ್ಟೋರ್ ನಲ್ಲಿ ಲಭ್ಯ

ಹಬ್ಬಕ್ಕಾಗಿ ಎಫ್‍ಟಿಹೆಚ್ ಡೇಲಿಯಿಂದ ಪೂಜಾ ಸ್ಟೋರ್ ಆರಂಭ
Published On :

ಬೆಂಗಳೂರು: ಹಬ್ಬಗಳ ಋತು ಹತ್ತಿರವಾಗಿರುವ ಹಿನ್ನೆಲೆಯಲ್ಲಿ, ಫ್ರೆಷ್ ಟು ಹೋಮ್ ನ ಇ-ಗ್ರೋಸರಿ ಆ್ಯಪ್‌ ಆದ ಎಫ್‍ಟಿಹೆಚ್ ಡೇಲಿ, ಹಬ್ಬದ ಅಗತ್ಯ ವಸ್ತುಗಳಿಗಾಗಿಯೇ ತನ್ನ ಪ್ಲ್ಯಾಟ್ ಫಾರ್ಮ್ ನಲ್ಲಿ ಪೂಜಾ ಸ್ಟೋರ್ ಎಂಬ ಪ್ರತ್ಯೇಕ ವಿಭಾಗವನ್ನು ಆರಂಭಿಸಿದೆ. ಈ ಪೂಜಾ ಸ್ಟೋರ್ ನಲ್ಲಿ 250ಕ್ಕೂ ಅಧಿಕ ವಸ್ತುಗಳು ಲಭ್ಯವಿದ್ದು, ಹಬ್ಬಕ್ಕೆ ಸಂಬಂಧಿಸಿದ ಅಷ್ಟೂ ಉತ್ಪನ್ನಗಳನ್ನೂ ಒಂದೇ ಕ್ಲಿಕ್ ನಲ್ಲಿ ಖರೀದಿಸುವ ಅನುಕೂಲ ಕಲ್ಪಿಸಿದೆ. ತಾಜಾ ಹೂವು, ಹಣ್ಣು, ತರಕಾರಿ, ಬಾಳೆಎಲೆ, ಮಾವಿನ ಎಲೆ, ದಿನಸಿ ಸಾಮಗ್ರಿಗಳು, ಅಗರಬತ್ತಿ, ಕರ್ಪೂರ, ದೀಪದ ಎಣ್ಣೆ, ಮುಂತಾದ ವ್ಯಾಪಕ ಶ್ರೇಣಿಯ ಉತ್ಪನ್ನಗಳು ಇದೀಗ ಎಫ್‍ಟಿಹೆಚ್ ಡೇಲಿ ಆ್ಯಪ್‌ನಲ್ಲಿ ಲಭ್ಯವಿದೆ.

2020ರಲ್ಲಿ ಪ್ರಾರಂಭವಾದ ಈ ಚಂದಾದಾರಿಕೆ ಆಧಾರಿತ ಇ-ಗ್ರೋಸರಿ ಆ್ಯಪ್‌, ಬೆಂಗಳೂರು, ಹೈದರಾಬಾದ್ ಮತ್ತು ಪುಣೆ ನಗರಗಳಲ್ಲಿ ಪ್ರತಿ ತಿಂಗಳು 2 ಮಿಲಿಯನ್ ಗೂ ಅಧಿಕ ಆರ್ಡರ್‌ಗಳನ್ನು ತಲುಪಿಸುವುದನ್ನು ಸಾಧ್ಯವಾಗಿಸಿದೆ. ತನ್ನ ಸನ್ ರೈಸ್ ಡೆಲಿವರಿಯಿಂದಾಗಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಎಫ್‍ಟಿಹೆಚ್ ಡೇಲಿ, ದೇಶಾದ್ಯಂತ 1,000 ಕ್ಕೂ ಹೆಚ್ಚು ರೈತರಿಂದ ನೇರವಾಗಿ ಖರೀದಿಸಿದ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಪ್ರತಿದಿನ ಬೆಳಿಗ್ಗೆ 7 ಗಂಟೆಯ ಒಳಗೆ ಬೆಂಗಳೂರಿಗರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಬೆಂಗಳೂರಿನ ಗ್ರಾಹಕರಿಗೆ  ಹತ್ತಿರದ ಹೊಸಕೋಟೆ, ರಾಮನಗರ, ಕನಕಪುರ, ನಂಜನಗೂಡು, ಕೋಲಾರ ಮತ್ತಿತರ ಪ್ರದೇಶಗಳ ರೈತರಿಂದ ತಾಜಾ ತರಕಾರಿಗಳನ್ನು ಖರೀದಿಸಿ ಪೂರೈಸಲಾಗುತ್ತಿದೆ.

2020ರಲ್ಲಿ ದಿನಕ್ಕೆ 18,000ಕ್ಕಿಂತ ಕಡಿಮೆ ಆರ್ಡರ್‌ಗಳಿಂದ ಪ್ರಾರಂಭಿಸಿ, ಪ್ರಸ್ತುತ ದಿನಕ್ಕೆ 2 ಮಿಲಿಯನ್‌ಗಿಂತಲೂ ಹೆಚ್ಚು ಆರ್ಡರ್‌ಗಳನ್ನು ಪೂರೈಸುತ್ತಿರುವ ಎಫ್‍ಟಿಹೆಚ್ ಡೇಲಿ ಅತ್ಯಂತ ಕ್ಷಿಪ್ರವಾಗಿ ಬೆಳೆಯುತ್ತಿದೆ. ಗ್ರಾಹಕರಿಗೆ ಅತ್ಯಂತ ತಾಜಾ ಉತ್ಪನ್ನಗಳನ್ನು ಪೂರೈಸಲು ರೈತರಿಂದ ನೇರ ಖರೀದಿ, ಬೃಹತ್ ಮಾರುಕಟ್ಟೆಗೆ ಅನುಗುಣವಾದ ಮೌಲ್ಯ, ಮತ್ತು ಪ್ರತಿದಿನ ಬೆಳಿಗ್ಗೆ 7 ಗಂಟೆಗೂ ಮುನ್ನ ಆರ್ಡರ್‌ಗಳ ಡೆಲಿವರಿ, ಇವೇ ಮೊದಲಾದ ಪ್ರತಿಜ್ಞೆಗಳು ಗ್ರಾಹಕರು ತಮ್ಮ ದೈನಂದಿನ ಪೌಷ್ಟಿಕಾಂಶದ ಅಗತ್ಯಗಳನ್ನು ಖರೀದಿಸುವ ವಿಧಾನದಲ್ಲಿ ಅಮೂಲಾಗ್ರ ಬದಲಾವಣೆ ತಂದಿದೆ. ಎಫ್‍ಟಿಹೆಚ್ ಡೇಲಿ ಗ್ರಾಹಕರು ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲು ಅಗತ್ಯವಾದ ಎಲ್ಲ ವಸ್ತುಗಳನ್ನು ಒಂದೇ ಕಡೆ ಖರೀದಿಸುವ ಅನುಕೂಲವನ್ನು ಪೂಜಾ ಸ್ಟೋರ್‌ ಕಲ್ಪಿಸುತ್ತಿದೆ.

ಎಫ್‍ಟಿಹೆಚ್ ಡೇಲಿ ಸಬ್ ಸ್ಕ್ರಿಪ್ಷನ್ ಆಧಾರಿತ ಇ-ದಿನಸಿ ಆ್ಯಪ್‌ ಆಗಿದ್ದು, ಇದು ತಾಜಾ ಹಣ್ಣು ಮತ್ತು ತರಕಾರಿಗಳು, ಡೇರಿ, ಬೇಕರಿ, ದಿನಸಿ, ವಿವಿಧ ಆಹಾರೋತ್ಪನ್ನಗಳು ಹಾಗು ಇತರೆ ದೈನಂದಿನ ಅಗತ್ಯವಸ್ತುಗಳನ್ನು ಪ್ರತಿದಿನ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಈ ಆ್ಯಪ್‌ ಆಂಡ್ರಾಯ್ಡ್ ಮತ್ತು ಐಒಎಸ್ ನಲ್ಲಿ ಲಭ್ಯವಿದ್ದು, ಪ್ರಸ್ತುತ ಬೆಂಗಳೂರು, ಹೈದರಾಬಾದ್ ಮತ್ತು ಪುಣೆ ನಗರಗಳಲ್ಲಿ ಸೇವೆ ಒದಗಿಸುತ್ತಿದೆ. ಎಫ್‍ಟಿಹೆಚ್ ಡೇಲಿ ಪ್ರಸ್ತುತ 12,000 ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.