ಕ್ಯೂಆರ್ ಕೋಡ್ ಸುಟ್ಟುಹಾಕಿದ ಆರೋಪ: ಪೇಟಿಎಂ ಉದ್ಯೋಗಿಗಳ ವಿರುದ್ಧ ಫೋನ್ ಪೇ ದೂರು
ತಮ್ಮ ಕ್ಯೂ ಆರ್ ಕೋಡ್‌ಗಳನ್ನು ಸುಟ್ಟುಹಾಕಿದ ಆರೋಪದ ಮೇಲೆ ಡಿಜಿಟಲ್ ಪಾವತಿ ಪೂರೈಕೆದಾರ ಫೋನ್ ಪೇ, ಪ್ರತಿಸ್ಪರ್ಧಿ ಪೇಟಿಎಂ ನ ಉದ್ಯೋಗಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.

ನವದೆಹಲಿ: ತಮ್ಮ ಕ್ಯೂ ಆರ್ ಕೋಡ್‌ಗಳನ್ನು ಸುಟ್ಟುಹಾಕಿದ ಆರೋಪದ ಮೇಲೆ ಡಿಜಿಟಲ್ ಪಾವತಿ ಪೂರೈಕೆದಾರ ಫೋನ್ ಪೇ, ಪ್ರತಿಸ್ಪರ್ಧಿ ಪೇಟಿಎಂ ನ ಉದ್ಯೋಗಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.
ಮೂವರು ಪೇಟಿಎಂ ಉದ್ಯೋಗಿಗಳು ಅದರ ಕ್ಯೂ ಆರ್ ಕೋಡ್‌ಗಳನ್ನು ಸುಟ್ಟುಹಾಕಿದ್ದಾರೆ ಎಂದು ಫೋನ್ ಪೇ ಹೇಳಿಕೊಂಡಿದೆ. ಈ ಸಂಬಂಧ ನೋಯ್ಡಾದ ಸೂರಜ್‌ಪುರ ಲಖನವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಫೋನ್‌ಪೇ ತನ್ನ ಕ್ಯೂಆರ್ ಕೋಡ್‌ಗಳ ರಾಶಿಯನ್ನು ಸುಟ್ಟುಹಾಕುತ್ತಿರುವ ವೀಡಿಯೊದ ಆಧಾರದ ಮೇಲೆ ಪೊಲೀಸರನ್ನು ಸಂಪರ್ಕಿಸಿದೆ. ಫೋನ್ ಪೇ ವಕ್ತಾರರು ವೀಡಿಯೊದಲ್ಲಿರುವ ಮೂವರನ್ನು ಪೇಟಿಎಂ ಉದ್ಯೋಗಿಗಳು ಎಂದು ಗುರುತಿಸಿದ್ದಾರೆ.
ಮೂವರಲ್ಲಿ ಒಬ್ಬರು ಪೇಟಿಎಂ ಏರಿಯಾ ಸೇಲ್ಸ್ ಮ್ಯಾನೇಜರ್ ಎಂದು ಹೇಳಲಾಗಿದ್ದು, ಮತ್ತೊಬ್ಬರು ಪೇಟಿಎಂನ ಮಾಜಿ ಉದ್ಯೋಗಿ ಎಂದು ಗುರುತಿಸಲಾಗಿದೆ. ಅಮನ್ ಕುಮಾರ್ ಗುಪ್ತಾ, ದೇವಾಂಶು ಗುಪ್ತಾ ಮತ್ತು ರಾಹುಲ್ ಪಾಲ್ ಸೇರಿದಂತೆ ಮೂವರು ಕ್ಯೂಆರ್ ಕೋಡ್‌ಗಳನ್ನು ಸುಟ್ಟಹಾಕಿದ ಆರೋಪ ಹೊತ್ತಿದ್ದಾರೆ.
ದೇವಾಂಶು ಗುಪ್ತಾ 2018 ರಿಂದ 2022 ರವರೆಗೆ ಫೋನ್ ಪೇ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ದೇವಾಂಶು ಗುಪ್ತಾ ಅವರು QR ಕೋಡ್‌ಗಳನ್ನು ಎಲ್ಲಿಂದ ಪಡೆಯಬಹುದೆಂದು ತಿಳಿದಿದ್ದರು ಮತ್ತು ಅವುಗಳನ್ನು ಕದಿಯಲು ಮತ್ತು ವಿಧ್ವಂಸಗೊಳಿಸಲು ಇತರರೊಂದಿಗೆ ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಪೇಟಿಎಂ ವಕ್ತಾರರು, ಈ ಕೃತ್ಯದಲ್ಲಿ ಭಾಗಿಯಾಗಿರುವವರು ಫೋನ್ ಪೇನ ಮಾಜಿ ಕೆಲಸಗಾರರು ಎಂದು ಹೇಳಿದ್ದಾರೆ.
ಫೋನ್‌ಪೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಮೀರ್ ನಿಗಮ್ ಟ್ವಿಟರ್‌ನಲ್ಲಿ ತಮ್ಮ ಕೋಪವನ್ನು ಹೊರಹಾಕಿದ್ದಾರೆ. ಪೊಲೀಸರು ಈ ವಿಷಯವನ್ನು ತನಿಖೆ ಮಾಡಬೇಕು ಮತ್ತು ನ್ಯಾಯವು ಮೇಲುಗೈ ಸಾಧಿಸಲಿ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


