ಓಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕಕ್ಕೆ ವಿಶ್ವದಲ್ಲೇ ಅತ್ಯಧಿಕ ಮಹಿಳಾ ಉದ್ಯೋಗಿಗಳಿರುವ ಕಾರ್ಖಾನೆ ಗೌರವ: ಸಿಇಒ ಗುರಿ
ಭಾರತ ಜಗತ್ತಿನಲ್ಲೇ ಮುಂಚೂಣಿ ಉತ್ಪಾದನಾ ರಾಷ್ಟ್ರವಾಗಬೇಕಾದರೆ ಮಹಿಳೆಯರಿಗೆ ತರಬೇತಿ ನೀಡಿ ಅವರನ್ನು ಎಲ್ಲಾ ಬಗೆಯ ತಾಂತ್ರಿಕ ಕೆಲಸಗಳಿಗೂ ತಯಾರು ಮಾಡಬೇಕಾದ ಅಗತ್ಯವಿದೆ ಎಂದು ಓಲಾ ಸಂಸ್ಥಾಪಕ ಭವೀಶ್ ಒತ್ತಿ ಹೇಳಿದ್ದಾರೆ.

ಬೆಂಗಳೂರು: ವಿಶ್ವದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿರುವ ಕಾರ್ಖಾನೆ ಎನ್ನುವ ಗೌರವಕ್ಕೆ ಭಾರತದ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕ ಪಾತ್ರವಾಗಲಿದೆ ಎಂದು ಓಲಾ ಸಂಸ್ಥಾಪಕ ಭವೀಶ್ ಅಗ್ಗರ್ವಾಲ್ ಹೇಳಿದ್ದಾರೆ.
ಭಾರತ ಯೋಜನೆ ಸಫಲವಾಗಲು ಆತ್ಮನಿರ್ಭರ್ ಮಹಿಳೆ ಯೋಜನೆ ಕಾರ್ಯಗತಗೊಳ್ಳಬೇಕು ಎಂಬುದು ಅವರ ಅಭಿಪ್ರಾಯ. ಮುಂಬರುವ ದಿನಗಳಲ್ಲಿ ಘಟಕವನ್ನು ಪೂರ್ತಿಯಗಿ ಮಹಿಳೆಯರೇ ನಿರ್ವಹಿಸುವ ವ್ಯವಸ್ಥೆ ತಮ್ಮ ಘಟಕದಲ್ಲಿ ಜಾರಿಗೆ ಬರಲಿದೆ ಎಂದವರು ಹೇಳಿದ್ದಾರೆ.
ಭಾರತ ಜಗತ್ತಿನಲ್ಲೇ ಉತ್ಪಾದನಾ ರಾಷ್ಟ್ರವಾಗಬೇಕಾದರೆ ಮಹಿಳೆಯರಿಗೆ ತರಬೇತಿ ನೀಡಿ ಅವರನ್ನು ಎಲ್ಲಾ ಕೆಲಸಗಳಿಗೂ ತಯಾರು ಮಾಡಬೇಕಾದ ಅಗತ್ಯವಿದೆ ಎಂದು ಭವೀಶ್ ಒತ್ತಿ ಹೇಳಿದ್ದಾರೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಎರಡು ಮಾದರಿಗಳಲ್ಲಿ ಲಭ್ಯವಾಗಲಿದೆ. ಎಸ್1 ಮತ್ತು ಎಸ್1 ಪ್ರೊ. ಮೊದಲ ಮಾದರಿಯ ಬೆಲೆ 99,999 ರೂ. ಎರಡನೆಯ ಮಾದರಿ ಬೆಲೆ 1,29,000 ರೂ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಸೆಪ್ಟೆಂಬರ್ 8ರಂದು ಬಿಡುಗಡೆಯಾಗಬೇಕಿತ್ತು. ಆದರೆ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟು ಇದೀಗ ಸೆಪ್ಟೆಂಬರ್ 15ರಂದು ಬಿಡುಗಡೆಗೊಳ್ಳಲಿದೆ ಎಂದು ಸಂಸ್ಥೆ ತಿಳಿಸಿದೆ. ಸ್ಕೂಟರ್ ಪೂರ್ತಿ ಚಾರ್ಜ್ ಮಾಡಿದರೆ 181 ಕಿ.ಮೀ ಮೈಲೇಜ್ ದೊರೆಯಲಿದೆ.
Related Article
ಚಾಲನಾ ಅನುಭವ: ಹಳೆ ವರ್ಚಸ್ಸು, ಹೊಸ ತಂತ್ರಜ್ಞಾನ ಅಳವಡಿಸಿಕೊಂಡ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350
ಭಾರತದಲ್ಲಿ ಟಾಟಾ ಟಿಗೋರ್ ಇವಿ ಬಿಡುಗಡೆ; ಬೆಲೆ, ವಿವರಗಳು ಹೀಗಿವೆ...
ಇಂಡಿಯನ್ ಬೈಕನ್ನು ಕಂಡೆಯಾ: ಭಾರತದಲ್ಲಿ 1800 ಸಿಸಿ 'ಚೀಫ್' ಶ್ರೇಣಿ ಬೈಕು ಬಿಡುಗಡೆ, ಬೆಲೆ 20 ಲಕ್ಷ ರೂ. ನಿಂದ ಶುರು
ಎರಡು ವರ್ಷಗಳಲ್ಲಿ 2 ಲಕ್ಷ ಕಿಯಾ ಕಾರುಗಳು ಮಾರಾಟ
ಒರಟಾದ ರಸ್ತೆಗಳಿಗೆ ಹೊಚ್ಚ ಹೊಸ 'ಟಾಟಾ ಟಿಯಾಗೋ ಎನ್ಆರ್ಜಿ'
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


