ಪ್ರಸಕ್ತ ಆರ್ಥಿಕ ವರ್ಷ ಭಾರತದ ಆರ್ಥಿಕ ಬೆಳವಣಿಗೆ ಮುನ್ನೋಟ ಶೇ.10ಕ್ಕೆ ಕಡಿತಗೊಳಿಸಿದ ಎಡಿಬಿ
ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಸೆ.22 ರಂದು ,ಭಾರತದ ಆರ್ಥಿಕ ಬೆಳವಣಿಗೆ ಮುನ್ನೋಟವನ್ನು ಪ್ರಸಕ್ತ ಆರ್ಥಿಕ ವರ್ಷಕ್ಕೆ ಶೇ.10ಕ್ಕೆ ಕಡಿತಗೊಳಿಸಿದೆ.

ನವದೆಹಲಿ: ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಸೆ.22 ರಂದು ,ಭಾರತದ ಆರ್ಥಿಕ ಬೆಳವಣಿಗೆ ಮುನ್ನೋಟವನ್ನು ಪ್ರಸಕ್ತ ಆರ್ಥಿಕ ವರ್ಷಕ್ಕೆ ಶೇ.10ಕ್ಕೆ ಕಡಿತಗೊಳಿಸಿದೆ.
ಈ ಹಿಂದೆ ಶೇ.11ಕ್ಕೆ ಮುನ್ನೋಟ ನಿಗದಿಯಾಗಿತ್ತು. ಆದರೆ ಕೋವಿಡ್-19 ಎರಡನೇ ಅಲೆಯ ಪರಿಣಾಮದಿಂದಾಗಿ ಶೇ.10ಕ್ಕೆ ಇಳಿಕೆ ಮಾಡಲಾಗಿದೆ.
ಮಾರ್ಚ್ 2022 ಕ್ಕೆ ಕೊನೆಗೊಳ್ಳುವ 2021 ರ ಆರ್ಥಿಕ ವರ್ಷದ ಆರ್ಥಿಕ ಬೆಳವಣಿಗೆಯನ್ನು ಕಡಿತಗೊಳಿಸಲಾಗಿದೆ. ಮೇ ತಿಂಗಳಲ್ಲಿ ಎದುರಾದ ಎರಡನೇ ಅಲೆಯ ಪರಿಣಾಮ ಆರ್ಥಿಕತೆ ಮೇಲೆ ಬೀರಿದ್ದರಿಂದ ಮುನ್ನೋಟದಲ್ಲಿ ಕಡಿತಗೊಳಿಸಲಾಗಿದೆ ಎಂದು ಎಡಿಬಿ ಹೇಳಿದೆ.
ಎರಡನೇ ಅಲೆ ನಿರೀಕ್ಷೆಗಿಂತಲೂ ಮೊದಲೇ ಕೊನೆಯಾಗಿದ್ದರಿಂದ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ನ್ನು ತೆರವುಗೊಳಿಸಲಾಗಿದ್ದು, ಚಟುವಟಿಕೆಗಳು ಸಹಜ ಸ್ಥಿತಿಗೆ ಬಂದಿವೆ. ತತ್ಪರಿಣಾಮವಾಗಿ 2021 ರ ಆರ್ಥಿಕ ವರ್ಷದ ಮೂರು ತ್ರೈಮಾಸಿಕದಲ್ಲಿ ಆರ್ಥಿಕತೆ ಪುಟಿದೇಳುವ ನಿರೀಕ್ಷೆ ಇದ್ದು ಶೇ.10 ರಷ್ಟು ಬೆಳವಣಿಗೆಯಾಗುವ ಸಾಧ್ಯತೆ ಇದೆ ಎಂದು ಎಡಿಬಿ ಹೇಳಿದೆ.
ಎಡಿಬಿ ಏಪ್ರಿಲ್ ತಿಂಗಳಲ್ಲಿನ ಮುನ್ನೋಟವನ್ನು ಪ್ರಕಟವಾಗಿದ್ದಾಗ, ಶೇ.11ಕ್ಕೆ ಅಂದಾಜಿಸಿತ್ತು. ಬಳಕೆ ಕ್ರಮೇಣ ಜಾಸ್ತಿಯಾಗಲಿದೆ. ಸರ್ಕಾರದ ಖರ್ಚು ಹೆಚ್ಚಾಗಲಿದೆ, ರಫ್ತು ಹೆಚ್ಚಾಗಲಿರುವುದು ಕಳೆದ ಆರ್ಥಿಕ ವರ್ಷಕ್ಕಿಂತಲೂ ಪ್ರಸಕ್ತ ಆರ್ಥಿಕ ವರ್ಷ 2021 ರಲ್ಲಿ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿತ್ತು.
ಎಡಿಬಿಯ ಪ್ರಕಾರ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (ಪಿಆರ್ ಸಿ) ದ ಆರ್ಥಿಕ ಬೆಳವಣಿಗೆ ಬಲಿಷ್ಠವಾಗಿರಲಿದ್ದು 2021 ರಲ್ಲಿ ಶೇ.8.1, 2022 ರಲ್ಲಿ ಶೇ.5.5 ರಷ್ಟಿರಲಿದೆ ಎಂದು ಅಂದಾಜಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


