ಪುತ್ರನ ಡ್ರಗ್ ಕೇಸಿನಿಂದ ಶಾರುಖ್ ಖಾನ್ ಜನಪ್ರಿಯತೆಗೆ ಧಕ್ಕೆಯಾಗಿಲ್ಲ: ಮಾರ್ಕೆಟ್ ಪರಿಣತರು
ಆರ್ಯನ್ ಖಾನ್ ಡ್ರಗ್ ಪ್ರಕರಣ ವರದಿಯಾದಾಕ್ಷಣ ಹಲವು ಸಂಸ್ಥೆಗಳು ಶಾರುಖ್ ನಟಿಸಿದ್ದ ಜಾಹೀರಾತುಗಳ ಪ್ರಸಾರಕ್ಕೆ ತಡೆಯೊಡ್ಡಿದ್ದವು. ಅವೆಲ್ಲಾ ಜಾಹೀರಾತುಗಳು ಟಿವಿ ವಾಹಿನಿಗಳಲ್ಲಿ ಪ್ರಸಾರ ಕಾಣಲು ಶುರುಮಾಡಿವೆ.

ಮುಂಬೈ: ಭಾರತದ ಜನಪ್ರಿಯ ಹಾಗೂ ಜನರ ಪ್ರೀತಿ ಪಾತ್ರರಾದ ವ್ಯಕ್ತಿ ಶಾರುಖ್ ಖಾನ್. ಪುತ್ರ ಆರ್ಯನ್ ಖಾನ್ ಡ್ರಗ್ ಪ್ರಕರಣದಿಂದಾಗಿ ಹಲವು ಬ್ರ್ಯಾಂಡ್ ಗಳು ಶಾರುಖ್ ಜೊತೆಗಿನ ಒಪ್ಪಂದಗಳನ್ನು ತಡೆಹಿಡಿದಿದ್ದವು. ಆದರೆ ಒಟ್ತಾರೆಯಾಗಿ ಶಾರುಖ್ ಜನಪ್ರಿಯತೆಗೆ ಡ್ರಗ್ ಪ್ರಕರಣದಿಂದ ಕುಂದು ಉಂಟಾಗಿಲ್ಲ ಎಂದು ಮಾರ್ಕೆಟ್ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ಆರ್ಯನ್ ಖಾನ್ ಡ್ರಗ್ ಪ್ರಕರಣ ವರದಿಯಾದಾಕ್ಷಣ ಹಲವು ಸಂಸ್ಥೆಗಳು ಶಾರುಖ್ ನಟಿಸಿದ್ದ ಜಾಹೀರಾತುಗಳ ಪ್ರಸಾರಕ್ಕೆ ತಡೆಯೊಡ್ಡಿದ್ದವು. ಆದರೆ ಅವೆಲ್ಲಾ ಜಾಹೀರಾತುಗಳು ಒಂದರ ಹಿಂದೊಂದರಂತೆ ಟಿವಿ ವಾಹಿನಿಗಳಲ್ಲಿ ಪ್ರಸಾರ ಕಾಣಲು ಶುರುಮಾಡಿವೆ.
ಮಕ್ಕಳ ಶೈಕ್ಷಣಿಕ ಆಪ್ ಆದ ಬೈಜು ಸಂಸ್ಥೆಗೆ ಶಾರುಖ್ ಖಾನ್ ಅವರೇ ರಾಯಭಾರಿ. ಪುತ್ರನ ಡ್ರಗ್ ಪ್ರಕರಣ ವರದಿಯ ನಂತರವೂ ಬೈಜು ಸಂಸ್ಥೆ ತನ್ನ ಜಾಹಿರಾತನ್ನು ನಿಲ್ಲಿಸಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬೈಜು ಜಾಹಿರಾತುಗಳ ಪರ ಹಾಗೂ ವಿರೋಧದ ಚರ್ಚೆಗಳು ನಡೆದಿದ್ದವು.
ಟ್ವಿಟ್ತರ್ ನಲ್ಲಿ ಶಾರುಖ್ 4.2 ಕೋಟಿ ಹಿಂಬಾಲಕರನ್ನು ಪಡೆದಿದ್ದರೆ, ಇನ್ ಸ್ಟಾಗ್ರಾಂನಲ್ಲಿ 2.6 ಕೋಟಿ ಫಾಲೋವರ್ಸ್ ಅನ್ನು ಕಿಂಗ್ ಖಾನ್ ಪಡೆದಿದ್ದಾರೆ.
ಇದನ್ನೂ ಓದಿ: ರಾಮ ಜನ್ಮಭೂಮಿ ವಿವಾದ ಇತ್ಯರ್ಥ ಸಮಿತಿಯಲ್ಲಿ ಪಾಲ್ಗೊಳ್ಳಲು ಬಾಲಿವುಡ್ ನಟ ಶಾರುಖ್ ಖಾನ್ ಗೂ ಆಹ್ವಾನವಿತ್ತಂತೆ!
Related Article
ಕ್ರೂಸ್ ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್ ಗೆ ಇಂದೂ ಜಾಮೀನಿಲ್ಲ, ವಿಚಾರಣೆ ನಾಳೆಗೆ ಮುಂದೂಡಿಕೆ
ಆರ್ಯನ್ ಖಾನ್ ಡ್ರಗ್ಸ್ ಸೇವಿಸುವುದಲ್ಲದೆ ಡ್ರಗ್ಸ್ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾರೆ: ಹೈಕೋರ್ಟ್‌ಗೆ ಎನ್‌ಸಿಬಿ
ಜಮೀರ್ ಪುತ್ರ ಝೈದ್ ಖಾನ್ ಸಿನಿಮಾ ಆಡಿಯೋ ದಾಖಲೆ ಮೊತ್ತಕ್ಕೆ ಮಾರಾಟ: ಲಹರಿ ಪಾಲಾದ 'ಬನಾರಸ್'
ಡ್ರಗ್ಸ್ ಪ್ರಕರಣದ ಆರೋಪಿ ಆರ್ಯನ್ ಖಾನ್ ಪರ ಮಾಜಿ ಅಡ್ವೊಕೇಟ್ ಜನರಲ್ ಮುಕುಲ್ ರೋಹಟ್ಗಿ ವಾದ
ಆರ್ಯನ್ ಖಾನ್ ಪ್ರಕರಣ: ಲಂಚ ಆರೋಪದಿಂದ ಕಾನೂನು ರಕ್ಷಣೆ ಪಡೆಯಲು ಎನ್ ಸಿ ಬಿ ಅಧಿಕಾರಿ ಸಮೀರ್ ವಾಂಖಡೆ ಮುಂದು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


