ವಾಣಿಜ್ಯ

ಐಎಂಎಒಫ್ ಮುಖ್ಯ ಅರ್ಥಶಾಸ್ತ್ರಜ್ಞೆ ಸ್ಥಾನದಿಂದ ನಿರ್ಗಮಿಸಲಿರುವ ಗೀತ ಗೋಪಿನಾಥ್, ಹಾರ್ವರ್ಡ್ ವಿವಿಗೆ ವಾಪಸ್

ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞರ ಸ್ಥಾನಕ್ಕೆ ಗೀತಾಗೋಪಿನಾಥ್ ರಾಜೀನಾಮೆ ನೀಡಿದ್ದು ತಮ್ಮ ಮೂಲ ವೃತ್ತಿಗೆ ಮರಳಲಿದ್ದಾರೆ.

ಐಎಂಎಒಫ್ ಮುಖ್ಯ ಅರ್ಥಶಾಸ್ತ್ರಜ್ಞೆ ಸ್ಥಾನದಿಂದ ನಿರ್ಗಮಿಸಲಿರುವ ಗೀತ ಗೋಪಿನಾಥ್, ಹಾರ್ವರ್ಡ್ ವಿವಿಗೆ ವಾಪಸ್
ಐಎಂಎಫ್ ನ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್
Published On :

ವಾಷಿಂಗ್ ಟನ್: ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞರ ಹುದ್ದೆಯಿಂದ ಗೀತಾಗೋಪಿನಾಥ್ ನಿರ್ಗಮಿಸಲಿದ್ದು ತಮ್ಮ ಮೂಲ ವೃತ್ತಿಗೆ ಮರಳಲಿದ್ದಾರೆ. 

ಐಎಂಎಫ್ ಈ ಮಾಹಿತಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಗೀತ ಗೋಪಿನಾಥ್ ಐಎಂಎಫ್ ನ ಮುಖ್ಯ ಅರ್ಥಶಾಸ್ತ್ರಜ್ಞೆ ಸ್ಥಾನದಿಂದ ನಿರ್ಗಮಿಸಲಿದ್ದು ಜನವರಿ ತಿಂಗಳಲ್ಲಿ ಹಾರ್ವರ್ಡ್ ವಿವಿಯ ಅರ್ಥಶಾಸ್ತ್ರ ವಿಭಾಗಕ್ಕೆ ವಾಪಸ್ಸಾಗಲಿದ್ದಾರೆ ಎಂದು ಐಎಂಎಫ್ ಹೇಳಿದೆ.

ಹಾರ್ವರ್ಡ್ ವಿವಿ ಗೀತಾ ಗೋಪಿನಾಥ್ ಅವರಿಗೆ ಗೈರುಹಾಜರಿಯ ರಜೆಯನ್ನು ಒಂದು ವರ್ಷಗಳ ಕಾಲ ವಿಸ್ತರಿಸಿತ್ತು. ಈ ಮೂಲಕ ಗೀತಾ ಗೋಪಿನಾಥ್ ಗೆ ಐಎಂಎಫ್ ನಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿತ್ತು.

ಪ್ರತಿ ತ್ರೈಮಾಸಿಕದಲ್ಲಿ ಜಾಗತಿಕ ಆರ್ಥಿಕ ಮುನ್ನೋಟ ವರದಿಯನ್ನು ತಯಾರಿಸುವ ಐಎಂಎಫ್ ನ ಸಂಶೋಧಕ ವಿಭಾಗದ ನೇತೃತ್ವವನ್ನು ವಹಿಸಿರುವ ಗೀತಾ ಗೋಪಿನಾಥ್ ಅವರ ಕಾರ್ಯನಿರ್ವಹಣೆಗೆ ಐಎಂಎಫ್ ನ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ಟಲಿನಾ ಜಾರ್ಜೀವಾ ಮೆಚ್ಚುಗೆ ವ್ಯಕ್ತಪಡಿಸಿದ್ದು ಆರ್ಥಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದ ಮೊದಲ ಮಹಿಳೆಯಾಗಿದ್ದು ಇತಿಹಾಸ ನಿರ್ಮಿಸಿದ್ದಾರೆ ಎಂದು ಬಣ್ಣಿಸಿದ್ದಾರೆ.

ಐಎಂಎಫ್ ಹಾಗೂ ನಮ್ಮ ಸದಸ್ಯರಿಗೆ ಗೀತಾ ಗೋಪಿನಾಥ್ ಅವರ ಕೊಡುಗೆ ನಿಜವಾಗಿಯೂ ಗಮನಾರ್ಹ ಹಾಗೂ ಐಎಂಎಫ್ ನ ಕೆಲಸಗಳೆಡೆಗೆ ಆಕೆಯ ಪ್ರಭಾವ ಅದ್ಭುತವಾಗಿದೆ ಎಂದು ಜಾರ್ಜೀವಾ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.