ಕೋವಿಡ್-19 ಬಿಕ್ಕಟ್ಟಿನೆಡೆಗೆ ಭಾರತದ ಪ್ರತಿಕ್ರಿಯೆ ತ್ವರಿತ, ಗಮನಾರ್ಹ: ಐಎಂಎಫ್
ಕೋವಿಡ್-19 ಪರಿಸ್ಥಿಯಿಂದ ಉಂಟಾಗಿದ್ದ ಬಿಕ್ಕಟ್ಟಿನೆಡೆಗೆ ಭಾರತದ ಪ್ರತಿಕ್ರಿಯೆ ತ್ವರಿತ ಹಾಗೂ ಗಮನಾರ್ಹವಾಗಿತ್ತು ಎಂದು ಐಎಂಎಫ್ ಮೆಚ್ಚುಗೆ ವ್ಯಕ್ತಪಡಿಸಿದೆ.

ವಾಷಿಂಗ್ ಟನ್: ಕೋವಿಡ್-19 ಪರಿಸ್ಥಿಯಿಂದ ಉಂಟಾಗಿದ್ದ ಬಿಕ್ಕಟ್ಟಿನೆಡೆಗೆ ಭಾರತದ ಪ್ರತಿಕ್ರಿಯೆ ತ್ವರಿತ ಹಾಗೂ ಗಮನಾರ್ಹವಾಗಿತ್ತು ಎಂದು ಐಎಂಎಫ್ ಮೆಚ್ಚುಗೆ ವ್ಯಕ್ತಪಡಿಸಿದೆ.
ಭಾರತ ಸರ್ಕಾರ ಕೋವಿಡ್-19 ಸಾಂಕ್ರಾಮಿಕದ ನಡುವೆಯೂ ಕಾರ್ಮಿಕ ಸುಧಾರಣೆಗಳನ್ನು ಹಾಗೂ ಖಾಸಗೀಕರಣವನ್ನು ಜಾರಿಗೆ ತಂದಿದೆ ಎಂಬುದನ್ನು ಐಎಂಎಫ್ ಉಲ್ಲೇಖಿಸಿದೆ.
ಸದಸ್ಯರೊಂದಿಗೆ ಸಮಾಲೋಚನೆಗಳನ್ನು ನಡೆಸಿದ ಬಳಿಕ ಐಎಂಎಫ್ ಈ ವರದಿಯನ್ನು ಪ್ರಕಟಿಸಿದ್ದು, ಎಚ್ಚರಿಕೆಯನ್ನೂ ನೀಡಿದೆ. "ಸಾಂಕ್ರಾಮಿಕ ಸಂಬಂಧಿತ ಅಸ್ಥಿರತೆಗಳಿಂದ ಆರ್ಥಿಕ ಮುನ್ನೋಟದ ಮೇಲೆ ಕಾರ್ಮೋಡ ಮುಂದುವರೆದಿದ್ದು ಏರಿಳಿತದ ರಿಸ್ಕ್ ಇದ್ದೇ ಇದೆ ಎಂದು ಹೇಳಿದೆ.
ಹೂಡಿಕೆ ಹಾಗೂ ಇನ್ನಿತರ ಅಭಿವೃದ್ಧಿ ಚಾಲನೆಗೆ ಸಂಬಂಧಿಸಿದ ವಿಷಯಗಳ ಮೇಲೆ ಕೋವಿಡ್-19 ನ ನಕಾರಾತ್ಮಕ ಪರಿಣಾಮಗಳು ಆರ್ಥಿಕ ಚೇತರಿಕೆಯನ್ನು ಇನ್ನೂ ಮುಂದೂಡುತ್ತದೆ ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ.
ಭಾರತ ಸರ್ಕಾರದ ಕೋವಿಡ್-19 ನಿರ್ವಹಣೆಯ ಬಗ್ಗೆ ಮಾತನಾಡಿರುವ ಐಎಂಎಫ್, ಸರ್ಕಾರದ ತ್ವರಿತ-ಗಮನಾರ್ಹ ಪ್ರತಿಕ್ರಿಯೆಗಳು ಆರ್ಥಿಕ ಬೆಂಬಲ, ದುರ್ಬಲ ವರ್ಗಗಳಿಗೆ ಹೆಚ್ಚಿನ ಬೆಂಬಲ ನೀಡಿರುವುದು, ವಿತ್ತೀಯ ನೀತಿ ಸರಳೀಕರಣ, ಲಿಕ್ವಿಡಿಟಿ ಪ್ರಾವಿಷನ್ ಹಾಗೂ ಹೊಂದಿಕೊಳ್ಳಬಹುದಾದಂತಹ ಆರ್ಥಿಕ ಕ್ಷೇತ್ರ ಹಾಗೂ ನಿಯಂತ್ರಕ ನೀತಿಗಳನ್ನು ಐಎಂಎಫ್ ಶ್ಲಾಘಿಸಿದೆ.
ಭಾರತದ ಆರ್ಥಿಕ ಬೆಳವಣಿಗೆ 2021-22 ನೇ ಆರ್ಥಿಕ ವರ್ಷದಲ್ಲಿ ಶೇ.9.5 ರಷ್ಟಿರಲಿದೆ. ಹಾಗೂ 2022-23 ರಲ್ಲಿ ಶೇ.8.5 ರಷ್ಟಿರಲಿದೆ ಎಂದು ಅಂದಾಜಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


