ಹೊಸ ಕೊರೋನಾ ವೈರಸ್ ತಳಿ ಪತ್ತೆ ಎಫೆಕ್ಟ್: ಸೆನ್ಸೆಕ್ಸ್ 1400 ಅಂಕ ಕುಸಿತ
ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ದುರ್ಬಲ ವಹಿವಾಟು ಮತ್ತು ಕೋವಿಡ್-19 ಡೆಲ್ಟಾ ವೈರಸ್ ಗಿಂತ ಹೆಚ್ಚು ಅಪಾಯಕಾರಿ ತಳಿ ಬೋಟ್ಸ್ ವಾನಾ ಪತ್ತೆಯಾದ ಪರಿಣಾಮ ಮುಂಬೈ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಉಂಟಾಗಿದೆ.

ಮುಂಬೈ: ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ದುರ್ಬಲ ವಹಿವಾಟು ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್-19 ಡೆಲ್ಟಾ ವೈರಸ್ ಗಿಂತ ಹೆಚ್ಚು ಅಪಾಯಕಾರಿ ತಳಿ ಬೋಟ್ಸ್ ವಾನಾ ಪತ್ತೆಯಾದ ಪರಿಣಾಮ ಮುಂಬೈ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಉಂಟಾಗಿದೆ.
ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಬಿಎಸ್‌ಇ ಸೆನ್ಸೆಕ್ಸ್ 1,400 ಅಂಕಗಳಿಗಿಂತಲೂ ಅಧಿಕ ಕುಸಿತ ಕಂಡಿದ್ದರೆ, ಎನ್ ಎಸ್ ಇ ನಿಫ್ಟಿ 50 ಸೂಚ್ಯಂಕ 400 ಅಂಕಗಳ ನಷ್ಟದೊಂದಿಗೆ 17,130ರ ಮಟ್ಟಕ್ಕೆ ಕುಸಿದಿದೆ.
ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ, ಎಚ್‌ಡಿಎಫ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಇನ್ಫೋಸಿಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೆನ್ಸೆಕ್ಸ್‌ನಲ್ಲಿ ಹಿನ್ನಡೆ ಅನುಭವಿಸಿರುವ ಪ್ರಮುಖ ಸಂಸ್ಥೆಗಳಾಗಿವೆ.
ಕೋವಿಡ್ 19 ಲಸಿಕೆಗೂ ಪ್ರತಿರೋಧ ಒಡ್ಡುವ ಸಾಧ್ಯತೆ ಇದೆ ಎನ್ನಲಾಗಿರುವ ಹೊಸ ಕೊರೊನಾ ವೈರಸ್ ತಳಿ ಪತ್ತೆಯಾದ ಬಳಿಕ ಹೂಡಿಕೆದಾರರು ಯೆನ್ ಮತ್ತು ಡಾಲರ್ ಬಾಂಡ್‌ಗಳ ಸುರಕ್ಷತೆಯ ಕಡೆಗೆ ಗಮನ ಹರಿಸಿದ್ದಾರೆ. ಇದರಿಂದ ಕಳೆದ ಎರಡು ತಿಂಗಳ ಅವಧಿಯಲ್ಲಿಯೇ ಏಷ್ಯಾದ ಷೇರುಗಳು ಶುಕ್ರವಾರ ಗಣನೀಯ ಕುಸಿತ ಕಂಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


