ವಾಣಿಜ್ಯ

ಟಾಟಾ ಸ್ಟೀಲ್‌ನಿಂದ ಮಹತ್ವದ ನಿರ್ಧಾರ: ಕೊರೋನಾಗೆ ಬಲಿಯಾದ ನೌಕರನಿಗೆ 60 ವರ್ಷದ ತನಕ ಸಂಬಳ!

ಮಹಾಮಾರಿ ಕೊರೋನಾ ಭೀಕರತೆ ಸೃಷ್ಟಿಸುತ್ತಿದ್ದು ದೇಶದಲ್ಲಿ ಪ್ರತಿದಿನ 4 ಸಾವಿರಕ್ಕೂ ಹೆಚ್ಚು ಜನರು ಮೃತಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟಾಟಾ ಸ್ಟೀಲ್ ತನ್ನ ನೌಕರರ ಮತ್ತು ಅವರ ಕುಟುಂಬದ ಸುರಕ್ಷೆಗೆ ವಿಶೇಷ ಯೋಜನೆಯನ್ನು ಘೋಷಣೆ ಮಾಡಿದೆ.

ಟಾಟಾ ಸ್ಟೀಲ್‌ನಿಂದ ಮಹತ್ವದ ನಿರ್ಧಾರ: ಕೊರೋನಾಗೆ ಬಲಿಯಾದ ನೌಕರನಿಗೆ 60 ವರ್ಷದ ತನಕ ಸಂಬಳ!
ಟಾಟಾ ಸ್ಟೀಲ್
Published On :

ನವದೆಹಲಿ: ಮಹಾಮಾರಿ ಕೊರೋನಾ ಭೀಕರತೆ ಸೃಷ್ಟಿಸುತ್ತಿದ್ದು ದೇಶದಲ್ಲಿ ಪ್ರತಿದಿನ 4 ಸಾವಿರಕ್ಕೂ ಹೆಚ್ಚು ಜನರು ಮೃತಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟಾಟಾ ಸ್ಟೀಲ್ ತನ್ನ ನೌಕರರ ಮತ್ತು ಅವರ ಕುಟುಂಬದ ಸುರಕ್ಷೆಗೆ ವಿಶೇಷ ಯೋಜನೆಯನ್ನು ಘೋಷಣೆ ಮಾಡಿದೆ. 

ಕೊರೋನಾ ಮಹಾಮಾರಿಯಿಂದ ಮೃತಪಟ್ಟ ಕಂಪನಿಯ ನೌಕರನ ಕುುಟಂಬಕ್ಕೆ ಮುಂದಿನ 60 ವರ್ಷದ ತನಕ ವೇತನ ನೀಡಲು ಸಂಸ್ಥೆ ನಿರ್ಧರಿಸಿದೆ. ಈ ಬಗ್ಗೆ ಟಾಟಾ ಸ್ಟೀಲ್ ಸುತ್ತೋಲೆ ಹೊರಡಿಸಿದೆ. 

ಕಂಪನಿಯ ನೌಕರರ ಸಾಮಾಜಿಕ ಸುರಕ್ಷೆಗಾಗಿ ನೆರವು ನೀಡಲು ಎಲ್ಲಾ ಪ್ರಯತ್ನ ಮಾಡುವುದಾಗಿ ತಿಳಿಸಿದೆ. ಕೊರೋನಾದಿಂದ ನೌಕರ ಮೃತಪಟ್ಟರೆ ಈ ನೌಕರನ ಕುಟುಂಬಕ್ಕೆ ಮುಂದಿನ 60 ವರ್ಷದ ತನಕ ವೇತನವನ್ನು ನೀಡಲಿದೆ. 

ವೇತನದ ಜೊತೆಗೆ ಮೆಡಿಕಲ್ ಸೌಲಭ್ಯಗಳು, ಹೌಸಿಂಗ್ ಫೆಸಿಲಿಟಿ ಮತ್ತು ನೌಕರರ ಮಕ್ಕಳ ಗ್ರ್ಯಾಜುವೇಶನ್ ತನಕದ ವೆಚ್ಚವನ್ನೂ ಕಂಪನಿ ಭರಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.