ಕೇಂದ್ರ ಸರ್ಕಾರದ ನಿಗದಿತ ಉದ್ಯೋಗಗಳ ನೌಕರರ ತುಟ್ಟಿ ಭತ್ಯೆ ಹೆಚ್ಚಳ: ಏ.1 ರಿಂದ ಪೂರ್ವಾನ್ವಯವಾಗುವಂತೆ ಜಾರಿ
ಕೇಂದ್ರ ವಲಯದಲ್ಲಿ ವಿವಿಧ ನಿಗದಿತ ಉದ್ಯೋಗಗಳಲ್ಲಿ ತೊಡಗಿರುವ ವಿವಿಧ ವರ್ಗದ ಕಾರ್ಮಿಕರಿಗೆ ಪರಿಹಾರ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ತುಟ್ಟಿ ಭತ್ಯೆಯನ್ನು ಪರಿಷ್ಕರಿಸಿದೆ.

ನವದೆಹಲಿ: ಕೇಂದ್ರ ವಲಯದಲ್ಲಿ ವಿವಿಧ ನಿಗದಿತ ಉದ್ಯೋಗಗಳಲ್ಲಿ ತೊಡಗಿರುವ ವಿವಿಧ ವರ್ಗದ ಕಾರ್ಮಿಕರಿಗೆ ಪರಿಹಾರ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ತುಟ್ಟಿ ಭತ್ಯೆಯನ್ನು ಪರಿಷ್ಕರಿಸಿದೆ.
ಇದರಿಂದ ದೇಶದ ಸುಮಾರು 1 ಕೋಟಿಯ 50 ಲಕ್ಷ ಕಾರ್ಮಿಕರಿಗೆ ಸಹಾಯವಾಗಲಿದೆ ಎಂದು ಕಾರ್ಮಿಕ ಮತ್ತು ಸಬಲೀಕರಣ ಇಲಾಖೆ ಸಚಿವ ಸಂತೋಷ್ ಗಂಗಾವಾರ್ ತಿಳಿಸಿದ್ದಾರೆ.
ಕಳೆದ ಏಪ್ರಿಲ್ 1ಕ್ಕೆ ಪೂರ್ವಾನ್ವಯವಾಗುವಂತೆ ಈ ತುಟ್ಟಿಭತ್ಯೆ ಪರಿಷ್ಕೃತ ದರ ಜಾರಿಗೆ ಬರಲಿದೆ. ಕೈಗಾರಿಕಾ ಕಾರ್ಮಿಕರ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ (ಸಿಪಿಐ-ಐಡಬ್ಲ್ಯೂ) ತುಟ್ಟಿಭತ್ಯೆಯನ್ನು ಪರಿಷ್ಕರಿಸಲಾಗುತ್ತದೆ.
ಯಾವ ವರ್ಗಕ್ಕೆ ಎಷ್ಟು ಹೆಚ್ಚಳ: ನಿರ್ಮಾಣ ಮತ್ತು ಕಟ್ಟಡ ಕಾಮಗಾರಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಕೌಶಲ್ಯರಹಿತ ಕೆಲಸಗಾರರಿಗೆ ಪ್ರತಿದಿನ ಪರಿಷ್ಕೃತ ದರ 431 ರೂಪಾಯಿಗಳಿಂದ 645 ರೂಪಾಯಿಗಳಿಗೆ ಏರಿಕೆಯಾಗಲಿದೆ.
ಅರೆ-ನುರಿತ ಅಥವಾ ಕೌಶಲ್ಯರಹಿತ ಮೇಲ್ವಿಚಾರಕರಿಗೆ, ವ್ಯಾಖ್ಯಾನಿಸಲಾದ ವಿಭಾಗಗಳಲ್ಲಿ ಪಾವತಿಸಬೇಕಾದ ವೇತನವು 505 ರೂಪಾಯಿಯಿಂದ 714 ರೂಪಾಯಿಗಳವರೆಗೆ ಇರುತ್ತದೆ.
ನುರಿತ ಮತ್ತು ಕ್ಲೆರಿಕಲ್ ವಿಭಾಗದ ವಿಷಯದಲ್ಲಿ, ಇದು 609 ರೂಪಾಯಿಯಿಂದ 784 ರೂಪಾಯಿಗಳವರೆಗೆ ಇರುತ್ತದೆ ಮತ್ತು ಹೆಚ್ಚು ನುರಿತ ಕೆಲಸಗಾರರಿಗೆ, ವೇತನದ ಪ್ರಮಾಣವು 714 ರಿಂದ 853 ರೂಪಾಯಿಗಳವರೆಗೆ ಇರುತ್ತದೆ.ಕೃಷಿ ಕ್ಷೇತ್ರದಲ್ಲಿ ತೊಡಗಿರುವ ಕೌಶಲ್ಯರಹಿತ ಕಾರ್ಮಿಕರಿಗೆ ದರ 372 ರಿಂದ 411 ರೂಪಾಯಿಗಳಾಗಿರುತ್ತದೆ.
ಅರೆ ನುರಿತ ಮೇಲ್ವಿಚಾರಕರಿಗೆ ಇದು 379 ರಿಂದ 449 ರೂಪಾಯಿಗಳಷ್ಟಿದ್ದರೆ, ಹೆಚ್ಚಿನ ನುರಿತವರಿಗೆ 449 ರಿಂದ 540 ರೂಪಾಯಿಗಳವರೆಗೆ ಸಿಗುತ್ತದೆ. ಗಣಿ ನೌಕರರಿಗೆ, ನೆಲದ ಮೇಲೆ ತೊಡಗಿರುವ ಕೌಶಲ್ಯರಹಿತ ಕಾರ್ಮಿಕರ ಪರಿಷ್ಕೃತ ವೇತನ ದರ 431 ರೂಪಾಯಿ ಆಗಿದ್ದರೆ, ನೆಲದ ಕೆಳಗೆ ತೊಡಗಿರುವವರಿಗೆ ದಿನಕ್ಕೆ 539 ರೂಪಾಯಿ ಸಿಗುತ್ತದೆ.
ಅರೆ ನುರಿತ ಮೇಲ್ವಿಚಾರಕರಿಗೆ ಇದು 539 ಮತ್ತು 645 ರೂಪಾಯಿಗಳಾಗಿರುತ್ತದೆ, ನುರಿತವರಿಗೆ ಇದು 645 ಮತ್ತು 752 ರೂಪಾಯಿಗಳಾಗಿದ್ದರೆ, ಹೆಚ್ಚು ನುರಿತ ವರ್ಗಕ್ಕೆ ವೇತನ 752 ರಿಂದ 840 ರೂಪಾಯಿಗಳಾಗಿರುತ್ತದೆ.
ಕೇಂದ್ರ ಸರ್ಕಾರ, ರೈಲ್ವೆ ಆಡಳಿತ, ಗಣಿ, ತೈಲ ಕ್ಷೇತ್ರಗಳು, ಪ್ರಮುಖ ಬಂದರುಗಳು ಅಥವಾ ಕೇಂದ್ರ ಸರ್ಕಾರ ಸ್ಥಾಪಿಸಿದ ಯಾವುದೇ ನಿಗಮದ ಅಧಿಕಾರದಲ್ಲಿರುವ ಸಂಸ್ಥೆಗಳಿಗೆ ಕೇಂದ್ರ ವಲಯದಲ್ಲಿ ನಿಗದಿತ ಉದ್ಯೋಗಕ್ಕೆ ನಿಗದಿಪಡಿಸಿದ ದರಗಳು ಅನ್ವಯವಾಗುತ್ತವೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿಳಿಸಿದೆ.
ಈ ದರಗಳು ಗುತ್ತಿಗೆ ಮತ್ತು ಪ್ರಾಸಂಗಿಕ ಉದ್ಯೋಗಿಗಳು ಮತ್ತು ಕಾರ್ಮಿಕರಿಗೆ ಸಮಾನವಾಗಿ ಅನ್ವಯಿಸುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


