ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಚೀನಾದೊಂದಿಗಿನ ಭಾರತದ ವ್ಯಾಪಾರ ಶೇಕಡ 62ರಷ್ಟು ವೃದ್ಧಿ
ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಚೀನಾ ಮೇಲಿನ ಅವಲಂಭನೆಯನ್ನು ಕಡಿಮೆ ಮಾಡಲು ಭಾರತದ ಸರ್ಕಾರ ಕೈಗೊಂಡ ಅನೇಕ ಕ್ರಮಗಳ ಹೊರತಾಗಿಯೂ ಚೀನಾದೊಂದಿಗಿನ ಭಾರತದ ದ್ವಿಪಕ್ಷೀಯ ವ್ಯಾಪಾರವು ಈ ವರ್ಷದ ಮೊದಲಾರ್ಧದಲ್ಲಿ ಶೇಕಡ 62.7ರಷ್ಟು ವೃದ್ಧಿಯಾಗಿದೆ.

ನವದೆಹಲಿ: ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಚೀನಾ ಮೇಲಿನ ಅವಲಂಭನೆಯನ್ನು ಕಡಿಮೆ ಮಾಡಲು ಭಾರತದ ಸರ್ಕಾರ ಕೈಗೊಂಡ ಅನೇಕ ಕ್ರಮಗಳ ಹೊರತಾಗಿಯೂ ಚೀನಾದೊಂದಿಗಿನಭಾರತದ ದ್ವಿಪಕ್ಷೀಯ ವ್ಯಾಪಾರವು ಈ ವರ್ಷದ ಮೊದಲಾರ್ಧದಲ್ಲಿ ಶೇಕಡ 62.7ರಷ್ಟು ವೃದ್ಧಿಯಾಗಿದೆ.
ಚೀನಾದ ಜನರಲ್ ಅಡ್ಮಿನಿಸ್ಟ್ರೇಷನ್ ಆಫ್ ಕಸ್ಟಮ್ಸ್ (ಸಿಜಿಎಸಿ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಜನವರಿ ಮತ್ತು ಜೂನ್ ಅವಧಿಯಲ್ಲಿ ಉಭಯ ದೇಶಗಳ ನಡುವಿನ ಒಟ್ಟು ವ್ಯಾಪಾರವು 57.48 ಬಿಲಿಯನ್ ಆಗಿದೆ.
ಗಲ್ವಾನ್ ಕಣಿವೆಯಲ್ಲಿ ಚೀನಾದ ಆಕ್ರಮಣದ ನಂತರ, ಭಾರತವು ಆಮದುಗಳನ್ನು ಕಡಿಮೆ ಮಾಡಲು ಅನೇಕ ಕ್ರಮಗಳನ್ನು ತೆಗೆದುಕೊಂಡಿತು. ಅಲ್ಲದೆ ಅನೇಕ ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತು. ಆದಾಗ್ಯೂ, ಸುಮಾರು ಒಂದು ವರ್ಷದಲ್ಲಿ ದ್ವಿಪಕ್ಷೀಯ ವ್ಯಾಪಾರವು 2019ರ ಸಾಂಕ್ರಾಮಿಕ ಪೂರ್ವದ ಮಟ್ಟವನ್ನು ಮೀರಿದೆ. ಎರಡೂ ದೇಶಗಳು ವರ್ಷದ ಮೊದಲಾರ್ಧದಲ್ಲಿ ದ್ವಿಪಕ್ಷೀಯ ವ್ಯಾಪಾರ 44.72 ಬಿಲಿಯನ್ ಎಂದು ದಾಖಲಿಸಿದೆ.
ಚೀನಾದ ಏಜೆನ್ಸಿಗಳು ಬಿಡುಗಡೆ ಮಾಡಿದ ದತ್ತಾಂಶಗಳು, ಭಾರತದ ಆಮದು ಮುಖ್ಯವಾಗಿ ವೈದ್ಯಕೀಯ ಸಾಮಗ್ರಿಗಳ ಖರೀದಿಯ ಕಾರಣದಿಂದಾಗಿ ಈ ವರ್ಷ 42.76 ಬಿಲಿಯನ್ ತಲುಪಿದೆ. ಇದು 2019ರಲ್ಲಿ ಇದೇ ಅವಧಿಯಲ್ಲಿ ದಾಖಲಾದ. 35.8 ಬಿಲಿಯನ್‌ಗೆ ಹೋಲಿಸಿದರೆ ಶೇಕಡ 60.4ರಷ್ಟು ಹೆಚ್ಚಾಗಿದೆ.
ಏಪ್ರಿಲ್ ಒಂದೇ ತಿಂಗಳಲ್ಲಿ ಭಾರತ 26,000ಕ್ಕೂ ಹೆಚ್ಚು ವೆಂಟಿಲೇಟರ್ ಮತ್ತು ಆಮ್ಲಜನಕ ಉತ್ಪಾದಕಗಳನ್ನು ಆಮದು ಮಾಡಿಕೊಂಡಿದೆ ಎಂದು ದತ್ತಾಂಶ ಸೂಚಿಸಿದೆ. ಸಕಾರಾತ್ಮಕವಾಗಿ ಹೇಳುವುದಾದರೆ ಚೀನಾಕ್ಕೆ ಭಾರತದ ರಫ್ತು ಸಹ ಶೇಕಡ 69.6ರಷ್ಟು ಹೆಚ್ಚಾಗಿದೆ. ಮುಖ್ಯವಾಗಿ ಕಬ್ಬಿಣದ ಅದಿರು, ಹತ್ತಿ ಮತ್ತು ಇತರ ಸರಕುಗಳ ರಫ್ತಿನಿಂದಾಗಿ 14.72 ಶತಕೋಟಿಗೆ ತಲುಪಿದೆ.
ಈ ವರ್ಷದ ಜನವರಿ ಮತ್ತು ಏಪ್ರಿಲ್ ನಡುವೆ ಭಾರತವು ಒಟ್ಟು 20.28 ದಶಲಕ್ಷ ಟನ್ ಕಬ್ಬಿಣದ ಅದಿರನ್ನು ಚೀನಾಕ್ಕೆ ರಫ್ತು ಮಾಡಿದೆ ಎಂದು ಸಿಜಿಎಸಿ ಅಂಕಿಅಂಶಗಳು ಬಹಿರಂಗಪಡಿಸಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸುಮಾರು ಶೇಕಡ 66 ಹೆಚ್ಚಾಗಿದೆ. ಇದು ಭಾರತದ ಒಟ್ಟು ಕಬ್ಬಿಣದ ಅದಿರಿನ ರಫ್ತಿನ ಸುಮಾರು ಶೇಕಡ 90ರಷ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


