ನವೆಂಬರ್‌ನಲ್ಲಿ 131 ಲಕ್ಷ ಕೋಟಿ ರೂ. GST ಸಂಗ್ರಹ!
ನವೆಂಬರ್‌ನಲ್ಲಿ ಒಟ್ಟು 1,31,526 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು ಇದು ಕಳೆದ ತಿಂಗಳ ಸಂಗ್ರಹವನ್ನು ಮೀರಿದೆ.

ನವದೆಹಲಿ: ನವೆಂಬರ್‌ನಲ್ಲಿ ಒಟ್ಟು 1,31,526 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು ಇದು ಕಳೆದ ತಿಂಗಳ ಸಂಗ್ರಹವನ್ನು ಮೀರಿದೆ.
ಜಿಎಸ್‌ಟಿ ಅನುಷ್ಠಾನದ ನಂತರ ಇದು ಎರಡನೇ ಅತಿ ಹೆಚ್ಚು. ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳಲ್ಲಿ ಈ ಮಾಹಿತಿ ಹೊರಬಿದ್ದಿದೆ.
ಅಕ್ಟೋಬರ್‌ನಲ್ಲಿ ದಾಖಲೆ ಸಂಗ್ರಹ
ನವೆಂಬರ್ ಜಿಎಸ್‌ಟಿ ಸಂಗ್ರಹವು ಅಕ್ಟೋಬರ್‌ನಲ್ಲಿ ನಿರ್ಮಿಸಿದ ದಾಖಲೆಯನ್ನು ಮುರಿದಿದೆ. ಗಮನಾರ್ಹವೆಂದರೆ ಅಕ್ಟೋಬರ್ ತಿಂಗಳಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹ 1,30,127 ಕೋಟಿ ರೂ. ಅಕ್ಟೋಬರ್ ತಿಂಗಳು ಸಾಮಾನ್ಯವಾಗಿ ಹಬ್ಬದ ಸೀಸನ್‌ನಿಂದಾಗಿ ಬೇಡಿಕೆಯ ಹೆಚ್ಚಳವು ಜಿಎಸ್‌ಟಿ ಸಂಗ್ರಹದಲ್ಲಿ ಸ್ಪಷ್ಟವಾಗಿ ಗೋಚರಿಸಿತು. ಇನ್ನು 2021ರ ನವೆಂಬರ್ ನಲ್ಲಿ ಒಟ್ಟು ಜಿಎಸ್‌ಟಿ ಆದಾಯವು 1,31,526 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಇದರಲ್ಲಿ CGST 23,978 ಕೋಟಿ, SGST 31,127 ಕೋಟಿ, IGST 66,815 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 32,165 ಕೋಟಿ ಸೇರಿದಂತೆ) ಮತ್ತು ಸೆಸ್ ಒಳಗೊಂಡಿದೆ.
ಕಳೆದ ವರ್ಷಕ್ಕಿಂತ 25% ಹೆಚ್ಚು
ಬುಧವಾರ ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ, ನವೆಂಬರ್ ತಿಂಗಳ GST ಆದಾಯವು 2022ರ ನವೆಂಬರ್ ಗಿಂತ ಶೇಕಡ 25ರಷ್ಟು ಹೆಚ್ಚಾಗಿದೆ. ಇನ್ನು 2019ರ ನವೆಂಬರ್ ಗೆ ಹೋಲಿಸಿದರೆ ಶೇಕಡ 27ರಷ್ಟು ಹೆಚ್ಚಾಗಿದೆ. CGST ಎಂದರೆ ಕೇಂದ್ರ ಸರಕು ಮತ್ತು ಸೇವಾ ತೆರಿಗೆ, SGST ಎಂದರೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ ಮತ್ತು IGST ಎಂದರೆ ಸಮಗ್ರ ಸರಕು ಮತ್ತು ಸೇವಾ ತೆರಿಗೆ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


