ವಿಮಾನ ಪ್ರಯಾಣ ಮತ್ತಷ್ಟು ದುಬಾರಿ: ದೇಶಿ ವಿಮಾನ ದರಗಳ ಮಿತಿ ಶೇ.9.83 ರಿಂದ 12.82ಕ್ಕೆ ಹೆಚ್ಚಳ
ಕೋವಿಡ್ ಸಂಕಷ್ಟದ ನಡುವೆ ದೇಶಿ ವಿಮಾನ ಪ್ರಮಾಣ ಮತ್ತಷ್ಟು ದುಬಾರಿಯಾಗುತ್ತಿದ್ದು, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ದರಗಳ ಮೇಲಿನ ಮಿತಿಯನ್ನು ಶೇ. 9.83 ರಿಂದ ಶೇ. 12.82ಕ್ಕೆ ಹೆಚ್ಚಿಸಿದೆ.

ನವದೆಹಲಿ: ಕೋವಿಡ್ ಸಂಕಷ್ಟದ ನಡುವೆ ದೇಶಿ ವಿಮಾನ ಪ್ರಮಾಣ ಮತ್ತಷ್ಟು ದುಬಾರಿಯಾಗುತ್ತಿದ್ದು, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ದರಗಳ ಮೇಲಿನ ಮಿತಿಯನ್ನು ಶೇ. 9.83 ರಿಂದ ಶೇ. 12.82ಕ್ಕೆ ಹೆಚ್ಚಿಸಿದೆ.
ಕೊರೋನಾ ವೈರಸ್‌ನಿಂದಾಗಿ ಎರಡು ತಿಂಗಳ ಲಾಕ್‌ಡೌನ್ ನಂತರ, ಮೇ 25, 2020 ರಂದು ವಿಮಾನ ಸೇವೆಗಳನ್ನು ಪುನರಾರಂಭಿಸಿದಾಗ ವಿಮಾನಯಾನದ ಅವಧಿಯ ಆಧಾರದ ಮೇಲೆ ಕೇಂದ್ರ ಸರ್ಕಾರ ಟಿಕೆಟ್ ದರಗಳ ಮೇಲೆ ನಿಯಂತ್ರಣ ಹೇರಿತ್ತು.
ಕೊರೋನಾ ವೈರಸ್ ಸಂಬಂಧಿತ ಪ್ರಯಾಣ ನಿರ್ಬಂಧಗಳಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿಮಾನಯಾನ ಸಂಸ್ಥೆಗಳಿಗೆ ಸಹಾಯ ಮಾಡಲು ಕನಿಷ್ಠ ದರ ನಿಗದಿಪಡಿಸಲಾಗಿದೆ.
ಆಗಸ್ಟ್ 12, 2021 ರ ಆದೇಶದಲ್ಲಿ, ವಿಮಾನಯಾನ ಸಚಿವಾಲಯವು 40 ನಿಮಿಷಗಳ ಅವಧಿಯ ವಿಮಾನ ಪ್ರಯಾಣದ ದರದ ಮಿತಿಯನ್ನು ರೂ 2,600 ರಿಂದ ರೂ 2,900 ಕ್ಕೆ ಹೆಚ್ಚಿಸಿದೆ - ಇದು ಶೇಕಡಾ 11.53 ರಷ್ಟು ಹೆಚ್ಚಳವಾಗಿದೆ.
ಇನ್ನು 40 ನಿಮಿಷಗಳ ಅವಧಿಯ ವಿಮಾನ ಪ್ರಮಾಣ ದರದ ಮೇಲಿನ ಮಿತಿಯನ್ನು ಅನ್ನು ಶೇ. 12.82 ರಷ್ಟು ಹೆಚ್ಚಿಸಿ 8,800 ರೂ.
ಅಂತೆಯೇ, 40-60 ನಿಮಿಷಗಳ ನಡುವಿನ ಅವಧಿಯ ವಿಮಾನ ಪ್ರಯಾಣದ ದರವನ್ನು ಈಗ ರೂ 3,300 ರ ಬದಲಾಗಿ ರೂ 3,700ಕ್ಕೆ ಹೆಚ್ಚಿಸಲಾಗಿದೆ ಎಂದು ಸಚಿವಾಲಯ ಆದೇಶದಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


